: ಸಾಕಷ್ಟು ದಿನಗಳ ಬಳಿಕ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ, ಟ್ರೋಲ್ ಮಾಡಿದ ಜಾಫರ್..! * ಲಖನೌ ಸೂಪರ್‌ ಜೈಂಟ್ಸ್‌ ಪರ ಮಿಂಚಿನ ಪ್ರದರ್ಶನ ತೋರಿದ ಗುಜರಾತ್ ಟೈಟಾನ್ಸ್ * ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ * ಹಾರ್ದಿಕ್ ಪಾಂಡ್ಯ ಬೌಲಿಂಗ್ ಟ್ರೋಲ್ ಮಾಡಿದ ವಾಸೀಂ ಜಾಫರ್ ಬೆಂಗಳೂರು(ಮಾ.29): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ( ) ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ( ) ತಂಡವು ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮತ್ತೊಂದು ಹೈವೋಲ್ಟೇಜ್ ಪಂದ್ಯದಲ್ಲಿ ಕೆ.ಎಲ್‌. ರಾಹುಲ್ ( ) ನೇತೃತ್ವದ ಲಖನೌ ಸೂಪರ್ ಜೈಂಟ್ಸ್‌ ( ) ವಿರುದ್ದ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 4 ಓವರ್‌ ಬೌಲಿಂಗ್ ಮಾಡುವ ಮೂಲಕ ತಾವು ಫಿಟ್ ಆಗಿರುವುದನ್ನು ಸಾಬೀತುಪಡಿಸಿದ್ದಾರೆ. ಇದೇ ವೇಳೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲಿಳಿದ ಬಗ್ಗೆ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಟ್ರೋಲ್ ಮಾಡಿದ್ದಾರೆ. ಲಖನೌ ನಾಯಕ ಕೆ.ಎಲ್‌.ರಾಹುಲ್‌( ) ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸುವುದರ ಜೊತೆಗೆ ನಾಯಕತ್ವದಲ್ಲೂ ತೀರಾ ಸಾಧಾರಣ ಎನಿಸಿದರೆ. ಹಾರ್ದಿಕ್‌ ಪಾಂಡ್ಯ ( ) ಬೌಲಿಂಗ್‌, ಬ್ಯಾಟಿಂಗ್‌ ಹಾಗೂ ನಾಯಕತ್ವದಲ್ಲಿ ತಕ್ಕಮಟ್ಟಿಗಿನ ಯಶಸ್ಸು ಕಂಡರು. ಮೊದಲು ಬ್ಯಾಟ್‌ ಮಾಡಿದ ಲಖನೌ 29 ರನ್‌ಗೆ 4 ವಿಕೆಟ್‌ ಕಳೆದುಕೊಂಡರೂ ದೀಪಕ್‌ ಹೂಡಾ ಹಾಗೂ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಆಯುಷ್‌ ಬದೋನಿ ಅವರ ಹೋರಾಟದ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 6 ವಿಕೆಟ್‌ಗೆ 158 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೈಟಾನ್ಸ್‌ ಸಹ ಆರಂಭಿಕ ಆಘಾತ ಅನುಭವಿಸಿತು. ತಂಡದ ಬ್ಯಾಟಿಂಗ್‌ ತಾರೆ ಶುಭ್‌ಮನ್‌ ಗಿಲ್‌( ) ಸೊನ್ನೆಗೆ ನಿರ್ಗಮಿಸಿದರೆ, ವಿಜಯ್‌ ಶಂಕರ್‌ ಕೇವಲ 4 ರನ್‌ಗೆ ಔಟಾದರು. ಬಳಿಕ ಮ್ಯಾಥ್ಯೂ ವೇಡ್‌(30) ಹಾಗೂ ಹಾರ್ದಿಕ್‌ ಪಾಂಡ್ಯ(33) ನಿಧಾನಗತಿಯಲ್ಲಿ ರನ್‌ ಕಲೆಹಾಕಿದರೂ ಲಖನೌ ಮೇಲುಗೈ ಸಾಧಿಸಲು ಬಿಡಲಿಲ್ಲ. ಕೊನೆಯ 5 ಓವರ್‌ಗಳಲ್ಲಿ ಗುಜರಾತ್‌ಗೆ ಗೆಲ್ಲಲು 68 ರನ್‌ಗಳು ಬೇಕಿದ್ದವು. 16 ಹಾಗೂ 17ನೇ ಓವರನ್ನು ಸ್ಪಿನ್ನರ್‌ಗಳಿಗೆ ನೀಡಿ ಲಖನೌ ನಾಯಕ ರಾಹುಲ್‌ ಎಡವಟ್ಟು ಮಾಡಿದರು. ದೀಪಕ್‌ ಹೂಡ 22 ರನ್‌ ಚಚ್ಚಿಸಿಕೊಂಡರೆ, ರವಿ ಬಿಷ್ಣೋಯ್‌ 17 ರನ್‌ ಬಿಟ್ಟುಕೊಟ್ಟರು. ಕೊನೆ 3 ಓವರಲ್ಲಿ ಗೆಲುವಿಗೆ 29 ರನ್‌ ಬೇಕಿದ್ದಾಗ ಡೇವಿಡ್‌ ಮಿಲ್ಲರ್‌ (21 ಎಸೆತದಲ್ಲಿ 30) ಔಟಾದರೂ, ರಾಹುಲ್‌ ತೆವಾಟಿಯಾ (24 ಎಸೆತಗಳಲ್ಲಿ 40*) ಹಾಗೂ ಕರ್ನಾಟಕದ ಅಭಿನವ್‌ ಮನೋಹರ್‌ (07 ಎಸೆತಗಳಲ್ಲಿ 15*) ತಂಡವನ್ನು ಇನ್ನೂ 2 ಎಸೆತ ಬಾಕಿ ಇರುವಂತೆ ಗೆಲುವಿನ ಸೇರಿಸಿದರು. 2022: ಬೌಲಿಂಗ್ ಪರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ ಪಾಸ್..! ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಹಾಗೂ ತಂಡದ ಆಯ್ಕೆಗಾರರು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದ ಬೆಳವಣಿಗೆ ಸೋಮವಾರ ಐಪಿಎಲ್‌ನಲ್ಲಿ ನಡೆಯಿತು. ಬಹಳ ದಿನಗಳ ಬಳಿಕ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡಿ ತಾವು ಸಂಪೂರ್ಣ ಫಿಟ್‌ ಆಗಿರುವುದಾಗಿ ಸಾಬೀತುಪಡಿಸಿದರು. ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಗುಜರಾತ್‌ ತಂಡವನ್ನು ಮುನ್ನಡೆಸಿದ ಹಾರ್ದಿಕ್‌, ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ 4 ಓವರ್‌ ಬೌಲ್‌ ಮಾಡಿದರು. ಲಖನೌ ಎದುರು 4 ಓವರ್‌ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 37 ರನ್‌ ನೀಡಿ ಕೊಂಚ ದುಬಾರಿ ಎನಿಸಿದರು. ಆದರೆ ತಾವು ಟಿ20 ಪಂದ್ಯಗಳಿಗೆ 4 ಓವರ್‌ ಬೌಲಿಂಗ್ ಮಾಡಲು ಫಿಟ್ ಇರುವುದನ್ನು ಸಾಬೀತುಪಡಿಸಿದರು ಈ ಕುರಿತಂತೆ ಖ್ಯಾತ ಬಾಲಿವುಡ್ ನಟ ಅಜಯ್‌ ದೇವಗನ್, ಟಬು ಅಭಿನಯದ ವಿಜಯಪತ್ ಸಿನೆಮಾದ ಆಯಿಯೇ ಆಪ್ಕಾ ಇಂತೆಜಾರ್ ಥಾ (ಬನ್ನಿ ನಿಮ್ಮದೇ ನಿರೀಕ್ಷೆಯಲ್ಲಿದ್ದೆವು) ಎನ್ನು ಹಾಡಿನ ತುಣುಕೊಂದನ್ನು ಪೋಸ್ಟ್‌ ಮಾಡಿದ್ದು, ಭಾರತೀಯ ಅಭಿಮಾನಿಗಳು ಈ ರೀತಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಸ್ವಾಗತಿಸಿದ್ದಾರೆ ಎಂದು ಟ್ವೀಟ್ ಮೂಲಕ ಟ್ರೋಲ್‌ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಗುಜರಾತ್ ಟೈಟಾನ್ಸ್ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿಯ ಬೌಲಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ