2022 ಆರ್‌ಸಿಬಿ ತಂಡಕ್ಕಿದೆ 205 ರನ್‌ಗಳ ಫೋಬಿಯಾ..! * 14 ಆವೃತ್ತಿಗಳಿಂದಲೂ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿರುವ ಆರ್‌ಸಿಬಿ * 200+ ರನ್‌ ದಾಖಲಿಸಿದರೂ ಪಂಜಾಬ್ ಎದುರು ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು * 205 ರನ್‌ ಗಳಿಸಿದ ಬಹುತೇಕ ಪಂದ್ಯಗಳಲ್ಲಿ ಆರ್‌ಸಿಬಿಗೆ ಎದುರಾಗಿದೆ ಆಘಾತಕಾರಿ ಸೋಲು ಮುಂಬೈ(ಮಾ.29): ತಂಡಕ್ಕೆ ಯಾಕೋ ಲಕ್ಕೇ ಸರಿಯಿಲ್ಲ. 14 ವರ್ಷಗಳಿಂದ ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ. ಈ ಸಲ ಕಪ್ ನಮ್ದೆ.. ಈ ಸಲ ಕಪ್ ನಮ್ದೆ ಅಂತ ಅಭಿಯಾನ ಮಾಡಿದ್ದೇ ಬಂತು. ಕಪ್ ಮಾತ್ರ ಬೆಂಗಳೂರಿಗೆ ಬರಲಿಲ್ಲ. ಐಪಿಎಲ್​ನಲ್ಲಿ ಇರೋ ಬರೋ ರೆಕಾರ್ಡ್​ಗಳೆಲ್ಲಾ ಹೆಸರಿನಲ್ಲಿವೆ. ವೈಯಕ್ತಿಕ ದಾಖಲೆಗಳು ಅಷ್ಟೆ. ಆರ್​ಸಿಬಿ ಪರ ಆಡಿದವರ ಹೆಸರಿನಲ್ಲಿ ಇವೆ. ಆದ್ರೆ ಒಂದೇ ಒಂದು ಐಪಿಎಲ್ ಟ್ರೋಫಿಯೂ ಬಳಿ ಇಲ್ಲ. ಹಾಗಾಗಿಯೇ ಆನ್ ಲಕ್ಕಿ ಟೀಮ್ ಲಿಸ್ಟ್​ಗೆ ಸೇರಿರೋದು. ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) ( ) ಎಷ್ಟೇ ಉತ್ತಮ ಬ್ಯಾಟರ್‌ಗಳನ್ನು ಹೊಂದಿದ್ದರೂ, ಬೌಲರ್‌ಗಳ ಕಳಪೆ ಪ್ರದರ್ಶನದಿಂದ ಸೋಲುವುದನ್ನು ಅಭಿಮಾನಿಗಳು ಹಲವು ವರ್ಷಗಳಿಂದ ನೋಡುತ್ತಿದ್ದಾರೆ. ಈ ವರ್ಷವೂ ವಿಭಿನ್ನವಾಗಿರುವುದಿಲ್ಲ ಎನ್ನುವ ಭಾವನೆ ಮೊದಲ ಪಂದ್ಯದಲ್ಲೇ ಅಭಿಮಾನಿಗಳ ಮನದಲ್ಲಿ ಮೂಡಿದೆ. 15ನೇ ಆವೃತ್ತಿಯಲ್ಲಿ 200ಕ್ಕೂ ಹೆಚ್ಚು ರನ್‌ ಸಿಡಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾದ ಆರ್‌ಸಿಬಿ, 200ಕ್ಕೂ ಹೆಚ್ಚು ರನ್‌ ಚಚ್ಚಿಸಿಕೊಂಡ ಮೊದಲ ತಂಡ ಎನ್ನುವ ಅಪಖ್ಯಾತಿಗೂ ಗುರಿಯಾಗಿದೆ. 14 ವರ್ಷದ್ದು ಒಂದು ಲೆಕ್ಕ. ಈ ವರ್ಷದ್ದು ಒಂದು ಲೆಕ್ಕ. ತಂಡ ಬದಲಾಗಿದೆ. ನಾಯಕನೂ ಬದಲಾಗಿದ್ದಾನೆ. ಹಾಗಾಗಿ ಈ ಸಲ ಕಪ್ ಗೆಲ್ಲಲಿದೆ ಅನ್ನೋ ನಿರೀಕ್ಷೆಗಳಿದ್ದವು. ಆದರೆ ಮೊದಲ ಪಂದ್ಯದಲ್ಲೇ ಸೋತು ತಲೆ ತಗ್ಗಿಸಿ ನಿಂತಿದೆ. 205 ರನ್ ಬಾರಿಸಿದ್ರೂ ಸೋತು ಸುಣ್ಣವಾಗಿದೆ. ಫ್ಯಾನ್ಸ್ ಬೇರೆ ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ. ಆದ್ರೆ ಮೊನ್ನೆ ಹೊಡೆದಿದ್ದು 205 ರನ್. ಆ 205 ರನ್​ಗಳೇ RCBಗೆ ಕಂಟಕ. ಅದು ಹೇಗೆ ಅನ್ನೋದನ್ನ ತಿಳಿದುಕೊಳ್ಳಬೇಕು ಅಂದರೆ ಇತಿಹಾಸ ನೋಡಬೇಕು. ಐದು ಬಾರಿ 205 ರನ್. ಗೆದ್ದಿರೋದು ಜಸ್ಟ್ ಒಂದು ಪಂದ್ಯ: ನೀವು ನಂಬಲೇ ಬೇಕು. ಐಪಿಎಲ್ ಇತಿಹಾಸದಲ್ಲೇ ದಾಖಲೆಯ 21 ಬಾರಿ 200 ಪ್ಲಸ್ ರನ್ ಹೊಡೆದಿದೆ. ಈ 21ರಲ್ಲಿ ಐದು ಸಲ 205 ರನ್​ಗಳನ್ನ ಬಾರಿಸಿದೆ. ಈ ಐದರಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಉಳಿದ ನಾಲ್ಕು ಬಾರಿಯೂ ಸೋತಿದೆ. ಇದು ಅಚ್ಚರಿ ಎನಿಸಿದ್ರೂ ಸತ್ಯ. ಪಂದ್ಯ ಸೋತರೂ, ಎದುರಾಳಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ರಾಯಲ್ ಚಾಲೆಂಜರ್ಸ್‌..! ಆರ್​​ಸಿಬಿಗೆ 2005ರ ಫೊಬಿಯಾ ವರ್ಷ ಎದುರಾಳಿ ರನ್ ಫಲಿತಾಂಶ 2011 ಪಂಜಾಬ್ 205 ಜಯ2012 ಸಿಎಸ್​ಕೆ 205 ಸೋಲು2018 ಸಿಎಸ್​ಕೆ 205 ಸೋಲು2019 ಕೆಕೆಆರ್ 205 ಸೋಲು2022 ಪಂಜಾಬ್ 205 ಸೋಲು ಈ ಅಂಕಿಅಂಶಗಳನ್ನ ನೋಡಿದರೆ RCBಗೆ 205 ರನ್​ಗಳ ಫೋಬಿಯಾ ಹೇಗೆಲ್ಲಾ ಕಾಡಿದೆ ಅಂತ. 2011ರಲ್ಲಿ 205 ರನ್ ಹೊಡೆದು ಗೆಲುವು ದಾಖಲಿಸಿದ್ದೇ ಕೊನೆ. 11 ವರ್ಷಗಳಿಂದ ನಾಲ್ಕು ಸಲ 205 ರನ್ ಬಾರಿಸಿದ್ರೂ ಗೆಲುವು ಮಾತ್ರ ದಕ್ಕಿಲ್ಲ. ಅಲ್ಲಿಗೆ 205 ಫೊಬಿಯಾ RCBಯನ್ನ ಕಾಡ್ತಿದೆ. ಪಂಜಾಬ್ ಕಿಂಗ್ಸ್‌ ತಂಡದ ಎದುರು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಆರ್‌ಸಿಬಿ ತಂಡವು ನೂತನ ನಾಯಕ ಫಾಫ್ ಡು ಪ್ಲೆಸಿಸ್‌ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಬರೋಬ್ಬರಿ 205 ರನ್ ಬಾರಿಸಿತ್ತು. ಹೀಗಿದ್ದೂ, ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆಯಲ್ಲಿ ಮಾಡಿಕೊಂಡ ಎಡವಟ್ಟಿನಿಂದಾಗಿ ಆರ್‌ಸಿಬಿ ಪಂದ್ಯವನ್ನು ಕೈಚೆಲ್ಲಿತು. ಈ ಫೊಬಿಯಾದಿಂದ ಹೊರಬರಲಿ. ಮತ್ತೆ 205 ರನ್ ಹೊಡೆದು ಗೆಲುವು ದಾಖಲಿಸಲಿ ಅನ್ನೋದೇ ಅಭಿಮಾನಿಗಳ ಆಶಯ.