ಐಸಿಸಿ ಟ್ರೋಫಿಗಳಲ್ಲಿ ಭಾರತಕ್ಕೆ ಶತ್ರು ಎದುರಾಳಿಯಲ್ಲ, 'ನೋ ಬಾಲ್'‌..! * ನೋಬಾಲ್ ಬಾರತೀಯ ತಂಡದ ಪಾಲಿಗೆ ದೊಡ್ಡ ವಿಲನ್ * ದೀಪ್ತಿ ಹಾಕಿದ ನೋಬಾಲ್‌ಗೆ ಬೆಲೆತೆತ್ತ ಮಿಥಾಲಿ ರಾಜ್ ಪಡೆ * ಭಾರತೀಯರ ಐಸಿಸಿ ಟ್ರೋಫಿ ನುಚ್ಚುನೂರು ಮಾಡಿದ 3 ನೋಬಾಲ್ ಕಹಾನಿ ಬೆಂಗಳೂರು(ಮಾ.28): ಶನಿ ಹೇಗೆಲ್ಲಾ ಬೆನ್ನೇರಬಹುದು ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್​ ಎಕ್ಸಾಂಪಲ್​​​. ಬರೀ ಒಂದಿಂಚು ನೋಬಾಲ್​ ಭಾರತಕ್ಕೆ ಐಸಿಸಿ ಟ್ರೋಫಿಗಳಲ್ಲಿ ( ) ಇನ್ನಿಲ್ಲದಂತೆ ಕಾಟ ಕೊಟ್ಟಿದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳ ( ) ಹೃದಯ ಚೂರಾಗಿಸಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ. ಇದರಿಂದ ಮೂರು ಐಸಿಸಿ ಟ್ರೋಫಿ ಗೆಲ್ಲುವ ಮಹಾದಾಸೆ ನುಚ್ಚು ನೂರಾಗಿದೆ. ಕೋಟ್ಯಾನುಕೋಟಿ ಕ್ರಿಕೆಟ್ ಪ್ರೇಮಿಗಳ ಹೃದಯ ಛಿದ್ರಗೊಂಡಿದೆ. ಅಂದಹಾಗೇ ಐಸಿಸಿ ಇವೆಂಟ್​ಗಳಲ್ಲಿ ಭಾರತಕ್ಕೆ ಎದುರಾಳಿಗಿಂತ ದೊಡ್ಡ ಶತ್ರು ರೀತಿಯಲ್ಲಿ ಕಾಡ್ತಿರೋ ಆ ದುಷ್ಮನ್​​ ಬೇರಾರು ಅಲ್ಲ, ಅದೇ ನೋ ಬಾಲ್​​. ಭಾರತ ವನಿತೆಯರಿಗೆ ಸೆಮೀಸ್​ ಕನಸಿಗೆ ಕೊಳ್ಳಿಯಿಟ್ಟ ನೋ ಬಾಲ್​​..! ಮಹಿಳಾ ಏಕದಿನ ವಿಶ್ವಕಪ್​​ನಲ್ಲಿ ( ' ) ಭಾರತ ವನಿತೆಯರ ಹೋರಾಟ ತೀರ ಬೇಸರದೊಂದಿಗೆ ಅಂತ್ಯಗೊಂಡಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಿಥಾಲಿ ರಾಜ್ ( ) ಪಡೆಯ ಸೆಮಿಫೈನಲ್​​ ಕನಸಿಗೆ ಒಂದು ನೋ ಬಾಲ್​​ ಕೊಳ್ಳಿಯಿಟ್ಟಿದೆ. ಇನ್ನೇನು ಭಾರತ ಸೆಮೀಸ್​​​​​​ಗೆ ಎಂಟ್ರಿಕೊಟ್ಟೆ ಬಿಡ್ತು ಅನ್ನೋವಾಗ್ಲೇ ಒಂದಿಂಚು ನೋ ಬಾಲ್ ( )​ ಶನಿ ರೀತಿಯಲ್ಲಿ ಮಿಥಾಲಿ ಬಳಗದ ಬೆನ್ನೇರಿತ್ತು. ಹೌದು, ಗೆಲ್ಲಲು 276 ರನ್​ ಗುರಿ ಬೆನ್ನಟ್ಟಿದ್ದ ಆಫ್ರಿಕಾಗೆ ಕೊನೆ ಓವರ್​​ನಲ್ಲಿ 7 ರನ್​​ ಬೇಕಿತ್ತು. ಮೊದಲ ನಾಲ್ಕು ಎಸೆತಗಳಲ್ಲಿ ದೀಪ್ತಿ ಶರ್ಮಾ ಬರೀ 3 ರನ್​ ಬಿಟ್ಟುಕೊಟ್ರು. 5ನೇ ಎಸೆತದಲ್ಲಿ ವೆಲ್ ಸೆಟಲ್ಡ್​​ ಮಿಗ್​ನಾನ್ ವಿಕೆಟ್​ ಕಬಳಿಸಿ ಪಂದ್ಯಕ್ಕೆ ಟ್ವಿಸ್ಟ್​​ ತಂದುಕೊಟ್ರು. ಆದ್ರೆ ದುರಾದೃಷ್ಟ ಎಂಬಂತೆ ಈ ಎಸೆತವನ್ನ ಥರ್ಡ್​ ಅಂಪೈರ್ ನೋ ಬಾಲ್​ ಎಂದು ತೀರ್ಪು ನೀಡಿದ್ರು. ಎರಡು ರನ್ಸ್ ಬೋನಸ್ ರೀತಿಯಲ್ಲಿ ಪಡೆದ ಆಫ್ರಿಕಾ ಕೊನೆ ಎಸೆತದಲ್ಲಿ ಗೆಲುವು ದಾಖಲಿಸ್ತು. ಪಂದ್ಯ ಗೆದ್ದು ಸೆಮೀಸ್​​ಗೆ ಎಂಟ್ರಿಕೊಡಬೇಕಿದ್ದ ಭಾರತ ವೀರೋಚಿತ ಸೋಲುಂಡು ಟೂರ್ನಿಯಿಂದ ಹೊರಬಿತ್ತು. 2016ರ ಟಿ20 ವಿಶ್ವಕಪ್​​​​​​​​​ನಲ್ಲಿ ಪಾಂಡ್ಯ ನೋ ಬಾಲ್​​​. ಫೈನಲ್​ ಕನಸು ಛಿದ್ರ. ಇನ್ನು ನಿನ್ನೆಯ ಪಂದ್ಯದಂತೆ 2016ರ ಟಿ20 ವಿಶ್ವಕಪ್ ( T20 )​ ನೋಡಿ ಭಾರತೀಯ ಕ್ರಿಕೆಟ್​ ಪ್ರಿಯರ ಹೃದಯ ಚೂರು ಚೂರಾಗಿತ್ತು. ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ( ) ವಿಂಡೀಸ್​ಗೆ 193 ರನ್​​ ಗುರಿ ನೀಡಿತ್ತು. ಹಾರ್ದಿಕ್‌ ಪಾಂಡ್ಯ ( ) 50 ರನ್ ಆಗಿದ್ದಾಗ ಲೆಂಡಲ್​ ಸಿಮನ್ಸ್​ ಔಟ್ ಮಾಡಿದ್ರು. ಆದ್ರೆ ಅದು ನೋ ಬಾಲ್ ಆಗಿತ್ತು. ಇದರ ಲಾಭ ಪಡೆ ಸಿಮನ್ಸ್ ಬಳಿಕ ಸ್ಪೋಟಕ ಆಟವಾಡಿ ಭಾರತ ಫೈನಲ್​​​ ಆಸೆಗೆ ತಣ್ಣೀರೆರೆಚಿದ್ರು. ' : ಭಾರತದ ಸೆಮೀಸ್ ಕನಸು ಭಗ್ನ, ರೋಚಕ ಸೋಲುಂಡ ಮಿಥಾಲಿ ಪಡೆ ಬುಮ್ರಾ ನೋ ಬಾಲ್​​ನಿಂದ ಚಾಂಪಿಯನ್ಸ್ ಟ್ರೋಫಿ ಕೈಚೆಲ್ಲಿದ ಭಾರತ ಇನ್ನು ಈ ಪಂದ್ಯವನ್ನಂತೂ ಯಾವೊಬ್ಬ ಭಾರತೀಯ ಕ್ರಿಕೆಟ್​ ಪ್ರೇಮಿ ಮರೆಯೋಕೆ ಸಾಧ್ಯವಿಲ್ಲ. ಅದು 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​​​ ಪಂದ್ಯ. 3 ರನ್​ ಗಳಿಸಿದ್ದಾಗ ವೇಗಿ ಜಸ್ಪ್ರೀತ್ ಬುಮ್ರಾ ( ) ಪಾಕಿಸ್ತಾನದ ಫಖರ್​ ಜಮಾನ್ ವಿಕೆಟ್​​​​​​​​​​ ಕಬಳಿಸಿದ್ರು. ಆದ್ರೆ ಅದು ನೋ ಬಾಲ್ ಆಗಿತ್ತು. ಇದರ ಲಾಭ ಪಡೆದ ಜಮಾನ್​ ಶತಕ ಬಾರಿಸಿ ಭಾರತಕ್ಕೆ ವಿಲನ್ ಆದ್ರು. ಭಾರತ 340 ರನ್ ಚೇಸ್​ ಮಾಡದೇ ಟ್ರೋಫಿ ಕೈಚೆಲ್ತು. ಒಟ್ಟಿನಲ್ಲಿ ಈ ಮೂರು ನೋ ಬಾಲ್ಸ್​​​ ಭಾರತೀಯರ ಹೃದಯ ಚೂರಾಗಿಸಿದ್ದಂತೂ ಸುಳ್ಳಲ್ಲ. ಮತ್ತೊಮ್ಮೆ ಹೀಗೆ ಭಾರತೀಯರ ಹಾರ್ಟ್​ ಬ್ರೋಕನ್ ಆಗದಿರ್ಲಿ ಎಂದು ನಾವು ಆಶಿಸ್ತೀವಿ.