ಟೂರ್ನಿಯಿಂದಲೇ 100 ಕೋಟಿ ಜೇಬಿಗಿಳಿಸಿದ ಟಾಪ್ 5 ಕ್ರಿಕೆಟಿಗರಿವರು..! * 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭ * ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ನೂರು ಕೋಟಿ ಕ್ಲಬ್ ಸೇರಿದ್ದಾರೆ ಐವರು ಕ್ರಿಕೆಟಿಗರು * ಈ ಪಟ್ಟಿಯಲ್ಲಿ ಆರ್‌ಸಿಬಿಯ ಇಬ್ಬರು ಆಟಗಾರರಿಗೆ ಸ್ಥಾನ ಬೆಂಗಳೂರು(ಮಾ.26): ಪುನೀತ್ ರಾಜ್ ಕುಮಾರ್ ನಟನೆಯ ಕೊನೆ ಸಿನಿಮಾ ಜೇಮ್ಸ್, ಸೆಂಚುರಿ ಕ್ಲಬ್​ಗೆ ಸೇರಿದೆ. ಅಂದರೆ ನೂರು ಕೋಟಿ ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ನೂರು ಕೋಟಿ ಕ್ಲಬ್​ಗೆ ಐಪಿಎಲ್​ನಲ್ಲಿ ಐವರು ಆಟಗಾರರು ಸೇರಿದ್ದಾರೆ. ಅಂದರೆ ಐಪಿಎಲ್ ()​ ಮೂಲಕವೇ ನೂರು ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಅದರಲ್ಲಿ ನಾಲ್ವರು ಭಾರತೀಯರು ಹಾಗೂ ಒಬ್ಬ ವಿದೇಶಿ ಆಟಗಾರ ಎನ್ನುವುದು ವಿಶೇಷ. 1. ಮಹೇಂದ್ರ ಸಿಂಗ್ ಧೋನಿ, ಸಂಪಾಧನೆ 164.8 ಕೋಟಿ ರೂ. 2008ರಿಂದಲೂ ಆಡುತ್ತಿರುವ ಎಂಎಸ್ ಧೋನಿ( ), ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ರೂ 15ನೇ ಸೀಸನ್ ಆಡಲು ರೆಡಿಯಾಗಿದ್ದಾರೆ. ಐಪಿಎಲ್ ಇತಿಹಾಸದ ಅತಿಹೆಚ್ಚು ಹಣ ಗಳಿಸಿರುವ ಕ್ರಿಕೆಟಿಗ ಅಂದರೆ ಅದು ಕೂಲ್‌ ಕ್ಯಾಪ್ಟನ್‌. ಚೆನ್ನೈ ಸೂಪರ್ ಕಿಂಗ್ಸ್( ) ಮತ್ತು ರೈಸಿಂಗ್ ಪುಣೆ ಜೈಂಟ್ಸ್( )​ ತಂಡದ ಪರ ಆಡಿರುವ ಮಹಿ, ಸಿಎಸ್​ಕೆಗೆ 4 ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಧೋನಿ ವೇತನ ರೂಪದಲ್ಲಿ IPLನಲ್ಲಿ 164.8 ಕೋಟಿ ರುಪಾಯಿ ಪಡೆದಿದ್ದಾರೆ. ಇಂಟರ್​ ನ್ಯಾಷನಲ್ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ರೂ, 40+ ವಯಸ್ಸಾದ್ರೂ ​​​​ಗೆ ಮಾತ್ರ ಧೋನಿಯೇ ಕಿಂಗ್​. 2. ರೋಹಿತ್ ಶರ್ಮಾ, ಸಂಪಾದನೆ 162.6 ಕೋಟಿ ರೂ. ಸದ್ಯ ಟೀಂ ಇಂಡಿಯಾ ( ) ನಾಯಕ ರೋಹಿತ್ ಶರ್ಮಾ( ), ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕ ಕೂಡ. ಅವರ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್( ) ಐದು ಬಾರಿ ಟ್ರೋಫಿ ಗೆದ್ದಿದೆ. 2008ರಿಂದ ಆಡುತ್ತಿದ್ದರೂ, ಮೊದಲ ಮೂರು ವರ್ಷ ಡೆಕ್ಕನ್ ಚಾರ್ಜರ್ಸ್( ) ಪರ ಆಡಿದ್ದರು. ಡೆಕ್ಕನ್ ಚಾರ್ಜರ್ಸ್ ಸಹ 2009ರಲ್ಲಿ ಚಾಂಪಿಯನ್ ಆಗಿತ್ತು. ಅಲ್ಲಿಗೆ ರೋಹಿತ್​ 14ರಲ್ಲಿ 6 ಟ್ರೋಫಿ ಗೆದ್ದ ತಂಡದ ಮೆಂಬರ್ ಆಗಿದ್ದಾರೆ. ಈಗ ಅವರೇ ಇತಿಹಾಸದಲ್ಲಿ ಗರಿಷ್ಠ ಹಣ ಗಳಿಸಿದ 2ನೇ ಆಟಗಾರ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 162.6 ಕೋಟಿ ರೂ. ವೇತನ ಪಡೆದಿದ್ದಾರೆ. 3 ವಿರಾಟ್ ಕೊಹ್ಲಿ, ಸಂಪಾದನೆ: 158.2 ಕೋಟಿ ರೂ. ಆರಂಭವಾದಾಗಿನಿಂದ ಇಲ್ಲಿಯವರೆಗೆ ಒಂದೇ ತಂಡದ ಪರ ಆಡುತ್ತಿರುವ ಏಕೈಕ ಆಟಗಾರ ಅಂದ್ರೆ ಅದು ವಿರಾಟ್ ಕೊಹ್ಲಿ( ) ಮಾತ್ರ. 2008ರಲ್ಲಿ ಆರ್​ಸಿಬಿ() ತಂಡ ಸೇರಿಕೊಂಡ ಕಿಂಗ್ ಕೊಹ್ಲಿ, ಈಗಲೂ ಬೆಂಗಳೂರು ಪರವೇ ಬ್ಯಾಟ್ ಬೀಸಲಿದ್ದಾರೆ. 2013ರಿಂದ 2021ರವರೆಗೆ ಕ್ಯಾಪ್ಟನ್ ಆಗಿದ್ದ ಕೊಹ್ಲಿ, ಈ ಸಲ ಕೇವಲ ಪ್ಲೇಯರ್​. 15 ಸೀಸನ್​ನಿಂದ ಕೊಹ್ಲಿ ಖಾತೆಗೆ 158.2 ಕೋಟಿ ರೂ ವೇತನ ರೂಪದಲ್ಲಿ ಬಂದಿದೆ. ಈ ವರ್ಷ ಆರ್‌ಸಿಬಿ ತಂಡ ಕಿಂಗ್‌ ಕೊಹ್ಲಿ ಖಾತೆಗೆ ಬರೋಬ್ಬರಿ 15 ಕೋಟಿ ರುಪಾಯಿ ಹಾಕಿದೆ. ಇನ್ನು 2018-21ರವರೆಗೆ ಕೊಹ್ಲಿ ಪ್ರತಿ ವರ್ಷ 17 ಕೋಟಿ ರೂ. ವೇತನ ಪಡೆದಿದ್ದಾರೆ. 4. ಸುರೇಶ್ ರೈನಾ, ಸಂಪಾದನೆ 110.7 ಕೋಟಿ ರೂ. ಮಿಸ್ಟರ್ ಎಂದೇ ಖ್ಯಾತರಾಗಿರೋ ಸುರೇಶ್ ರೈನಾ( ), ಈ ಸಲದ ಬಿಡ್​ನಲ್ಲಿ ಆನ್ ಸೋಲ್ಡ್ ಆಗಿದ್ರು. ಹಾಗಾಗಿ ಈ ಸಲ ಅವರು ಕಾಮೆಂಟ್ರಿಯಾಗಿ IPLಗೆ ರೀ ಎಂಟ್ರಿ ಕೊಡ್ತಿದ್ದಾರೆ. 14 ವರ್ಷಗಳ ಕಾಲ ಆಡಿರೋ ರೈನಾ, 110.7 ಕೋಟಿ ರೂಗಳನ್ನ ವೇತನ ರೂಪದಲ್ಲಿ ಪಡೆದಿದ್ದಾರೆ. 5. ಎಬಿ ಡಿವಿಲಿಯರ್ಸ್‌, ಸಂಪಾದನೆ: 102.5 ಕೋಟಿ ರೂ. ​ನಲ್ಲಿ ನೂರಕ್ಕೂ ಅಧಿಕ ಕೋಟಿ ರೂ. ಸಂಪಾದಿಸಿರುವ ಟಾಪ್​-5 ಆಟಗಾರರಲ್ಲಿ ಇರೋದು ಒಬ್ಬೇ ಒಬ್ಬ ವಿದೇಶಿ ಆಟಗಾರ. ಆತನೇ ಎಬಿ ಡಿವಿಲಿಯರ್ಸ್( ). ಎಬಿಡಿ 102.5 ಕೋಟಿಗಳನ್ನ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಆದರೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಎಲ್ಲಾ ಮಾದರಿ ಕ್ರಿಕೆಟ್​ಗೆ ಗುಡ್ ಬೈ ಹೇಳಿರೋದ್ರಿಂದ ಈ ಸಲ ಎಬಿಡಿ ಐಪಿಎಲ್ ಆಡ್ತಿಲ್ಲ. ಈ ಐವರೇ ಐಪಿಎಲ್​ನ ನೂರು ಕೋಟಿ ಕ್ಲಬ್ ವೀರರು.