' : ಬಾಂಗ್ಲಾದೇಶ ಎದುರು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಮಿಥಾಲಿ ಪಡೆ * ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಬಾಂಗ್ಲಾದೇಶ ಮುಖಾಮುಖಿ * ಮಾರ್ಚ್‌ 22ರಂದು ನಡೆಯಲಿರುವ ಪಂದ್ಯದಲ್ಲಿ ಭಾರತಕ್ಕೆ ದೊಡ್ಡ ಗೆಲುವು ಅನಿವಾರ್ಯ * ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಮಿಥಾಲಿ ರಾಜ್ ಪಡೆ ಹ್ಯಾಮಿಲ್ಟನ್(ಮಾ.21)‌: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ( ' ) ಕಳೆದ ಬಾರಿಯ ರನ್ನರ್‌-ಅಪ್‌ ಭಾರತಕ್ಕೆ ಮಂಗಳವಾರ ಬಾಂಗ್ಲಾದೇಶ () ಸವಾಲು ಎದುರಾಗಲಿದೆ. ಆಡಿರುವ 5 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿರುವ ಭಾರತ ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಸೆಮಿಫೈನಲ್‌ ಆಸೆ ಜೀವಂತವಾಗಿರಿಸಿಕೊಳ್ಳಲು ದೊಡ್ಡ ಗೆಲುವು ಅನಿವಾರ್ಯವಾಗಿದೆ. ಸೋತರೆ ಸೆಮೀಸ್‌ ರೇಸ್‌ನಿಂದ ಬಹುತೇಕ ಹೊರಬೀಳಲಿದೆ. ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ವಿರುದ್ಧ ಸತತ 2 ಸೋಲು ಅನುಭವಿಸಿರುವ ಭಾರತದ ಆತ್ಮವಿಶ್ವಾಸ ಕುಗ್ಗಿದ್ದು, ಬಾಂಗ್ಲಾದೇಶ ವಿರುದ್ಧ ದೊಡ್ಡ ಅಂತರದಲ್ಲಿ ಜಯಿಸಿ ಆತ್ಮವಿಶ್ವಾಸ ಮರಳಿ ಪಡೆಯುವುದರ ಜೊತೆಗೆ ಉತ್ತಮ ನೆಟ್‌ ರನ್‌ರೇಟ್‌ ಸಹ ಕಾಯ್ದುಕೊಳ್ಳಬೇಕಿದೆ. ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ಎದುರಾಗಲಿದ್ದು, ಬಾಂಗ್ಲಾ ವಿರುದ್ಧ ಗೆದ್ದರಷ್ಟೇ ಅಂತಿಮ ಪಂದ್ಯಕ್ಕೆ ರೋಚಕತೆ ಉಳಿದುಕೊಳ್ಳಲಿದೆ. ಇನ್ನು ಚೊಚ್ಚಲ ವಿಶ್ವಕಪ್‌ನಲ್ಲಿ ಆಡುತ್ತಿರುವ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ವಿರುದ್ಧ ಸೋಲುವ ಮೂಲಕ ಟೂರ್ನಿ ಆರಂಭಿಸಿತ್ತು. ಬಳಿಕ ನ್ಯೂಜಿಲೆಂಡ್‌ಗೆ ಶರಣಾಗಿತ್ತು. ಆದರೆ ಪಾಕಿಸ್ತಾನ ವಿರುದ್ಧ ಗೆಲ್ಲುವ ಮೂಲಕ ವಿಶ್ವಕಪ್‌ನ ಮೊದಲ ಗೆಲುವು ದಾಖಲಿಸಿತ್ತು. ಕಳೆದ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಸೋತಿದ್ದು, ಸೆಮೀಸ್‌ ರೇಸ್‌ನಲ್ಲಿ ಉಳಿಯಬೇಕಾದರೆ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಇದುವರೆಗೂ 4 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಭಾರತ ತಂಡವು ಸಂಪೂರ್ಣ ಮೇಲುಗೈ ಸಾಧಿಸಿದೆ. ನಾಲ್ಕು ಪಂದ್ಯಗಳಲ್ಲೂ ಬಾಂಗ್ಲಾದೇಶ ತಂಡದ ಎದುರು ಭಾರತೀಯ ವನಿತೆಯರು ಗೆಲುವಿನ ನಗೆ ಬೀರಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಕಳೆದ ಪಂದ್ಯದಲ್ಲಿ ದೀಪ್ತಿ ಶರ್ಮಾಗೆ ( ) ವಿಶ್ರಾಂತಿ ನೀಡಿ ಶಫಾಲಿ ವರ್ಮಾ ( ) ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಈ ಪ್ರಯೋಗ ಯಶಸ್ವಿಯಾಗಿರಲಿಲ್ಲ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮಿಥಾಲಿ ರಾಜ್ ( ) ಫಾರ್ಮ್‌ ಕಂಡುಕೊಂಡಿದ್ದರು. ಇದರ ಜತೆಗೆ ಹರ್ಮನ್‌ಪ್ರೀತ್ ಕೌರ್ ( ) ಕೂಡಾ ಉತ್ತಮ ಫಾರ್ಮ್‌ನಲ್ಲಿರುವುದು ಭಾರತ ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ. ಪಂದ್ಯ ಆರಂಭ: ಬೆಳಗ್ಗೆ 6.30ಕ್ಕೆನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮಹಿಳಾ ವಿಶ್ವಕಪ್‌: ಇಂಗ್ಲೆಂಡ್‌ ಸೆಮೀಸ್‌ ಕನಸು ಜೀವಂತ ಆಕ್ಲೆಂಡ್‌: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಸೆಮಿಫೈನಲ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಭಾನುವಾರ ಆತಿಥೇಯ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ 1 ವಿಕೆಟ್‌ ರೋಚಕ ಜಯ ಸಾಧಿಸಿತು. ಟೂರ್ನಿಯ ಆರಂಭದಲ್ಲಿ ಹ್ಯಾಟ್ರಿಕ್‌ ಸೋಲುಂಡಿದ್ದ ತಂಡ ಬಳಿಕ ಸತತ 2 ಪಂದ್ಯ ಗೆದ್ದಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 6ರಲ್ಲಿ 4 ಪಂದ್ಯ ಸೋತ ಕಿವೀಸ್‌ 6ನೇ ಸ್ಥಾನದಲ್ಲಿದೆ. ' : ಕಿವೀಸ್ ಮಣಿಸಿ ಸೆಮೀಸ್ ರೇಸ್‌ನಲ್ಲಿ ಉಳಿದ ಇಂಗ್ಲೆಂಡ್ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 48.5 ಓವರ್‌ಗಳಲ್ಲಿ 203 ರನ್‌ಗೆ ಆಲೌಟಾಯಿತು. ಮ್ಯಾಡಿ ಗ್ರೀನ್‌(ಅಜೇಯ 52) ಅರ್ಧಶತಕ ಬಾರಿಸಿದರು. ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 47.2 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. ನಥಾಲಿ ಶೀವರ್‌(61) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2ನೇ ಏಕದಿನ ಪಂದ್ಯ: ಬಾಂಗ್ಲಾ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ ಜೋಹಾನ್ಸ್‌ಬರ್ಗ್‌: ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯ ದ.ಆಫ್ರಿಕಾ 7 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಿಂದ ಸಮಗೊಂಡಿದೆ. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ ಅಫೀಪ್‌ ಹೊಸೈನ್‌(72) ಅರ್ಧಶತಕದ ನೆರವಿನಿಂದ ನಿಗದಿತ 50 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು 194 ರನ್‌ ಕಲೆ ಹಾಕಿತು. ಕಗಿಸೊ ರಬಾಡ 39 ರನ್‌ಗೆ 5 ವಿಕೆಟ್‌ ಕಿತ್ತರು. ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 37.2 ಓವರಲ್ಲಿ 3 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಕ್ವಿಂಟನ್‌ ಡಿ ಕಾಕ್‌(62), ಕೈಲ್‌ ವರೈನ್‌(ಔಟಾಗದೆ 58) ತಲಾ ಅರ್ಧಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದರು.