ಕೋಲ್ಕತಾದ ಕ್ಷೌರಿಕನ ಪುತ್ರಗೆ ಸಚಿನ್‌ 5 ದಿನ ಕೋಚಿಂಗ್‌! ಟ್ವೀಟರ್‌ನಲ್ಲಿ ವಿಡಿಯೋ ಹಾಕಿದ್ದ ಶಾಹಿದ್‌ ತಂದೆ 5ರ ಶಾಹಿದ್‌ ಬ್ಯಾಟಿಂಗ್‌ ನೋಡಿ ಮನಸೋತ ಸಚಿನ್‌ ಮಗನನ್ನು ಒಳ್ಳೆಯ ಕ್ರಿಕೆಟ್ ಅಕಾಡೆಮಿಗೆ ಸೇರಿಸ್ತೇನೆ ಎಂದ ತಂದೆ ಮುಂಬೈ (ಮಾ.11):‘ಕ್ರಿಕೆಟ್‌ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ರಿಂದ ( ) ಕ್ರಿಕೆಟ್‌ ಪಾಠಗಳನ್ನು ಕಲಿಯುವ ಅದೃಷ್ಟಎಷ್ಟುಜನರಿಗೆ ಸಿಗಲಿದೆ ಹೇಳಿ. ಅಂತದ್ದೊಂದು ಅಪರೂಪದ ಅವಕಾಶ ಕೋಲ್ಕತಾದ ಕ್ಷೌರಿಕರೊಬ್ಬರ ಪುತ್ರ, 5 ವರ್ಷದ ಎಸ್‌.ಕೆ.ಶಾಹಿದ್‌ ( ) ಎಂಬಾತನಿಗೆ ಇತ್ತೀಚೆಗೆ ಸಿಕ್ಕಿತ್ತು ಎನ್ನುವ ವಿಷಯ ಬಹಿರಂಗವಾಗಿದೆ. ಶಾಹಿದ್‌ ಬ್ಯಾಟಿಂಗ್‌ ಅಭ್ಯಾಸ ನಡೆಸುವ ವಿಡಿಯೋವನ್ನು ಇತ್ತೀಚೆಗೆ ಅವರ ತಂದೆ ಟ್ವೀಟರ್‌ನಲ್ಲಿ() ಪೋಸ್ಟ್‌ ಮಾಡಿದ್ದರು. ಆ ವಿಡಿಯೋ ವೈರಲ್‌ ಆಗಿತ್ತು. ಆಸ್ಪ್ರೇಲಿಯಾದ ಫಾಕ್ಸ್‌ ಕ್ರಿಕೆಟ್‌ ವಾಹಿನಿಯು ಆ ವಿಡಿಯೋವನ್ನು ರೀಟ್ವೀಟ್‌ ಮಾಡಿ ಸಚಿನ್‌, ಶೇನ್‌ ವಾರ್ನ್‌ ಹಾಗೂ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ಗೆ ಟ್ಯಾಗ್‌ ಮಾಡಿತ್ತು. ಕಳೆದ ವಾರ ನಿಧನರಾದ ವಾರ್ನ್‌, ಆ ವಿಡಿಯೋಗೆ ಪ್ರತಿಕ್ರಿಯೆ ಸಹ ನೀಡಿದ್ದರು. ಶಾಹಿದ್‌ರ ಬ್ಯಾಟಿಂಗ್‌ ಕೌಶಲ್ಯಕ್ಕೆ ಮನಸೋತ ಸಚಿನ್‌, ತಮ್ಮ ಕಚೇರಿ ಮೂಲಕ ಆತನನ್ನು ಮುಂಬೈನಲ್ಲಿರುವ ತಮ್ಮ ಮಿಡ್ಲ್‌ಸೆಕ್ಸ್‌ ತೆಂಡುಲ್ಕರ್‌ ಅಕಾಡೆಮಿಗೆ ( ) ಕರೆಸಿಕೊಂಡಿದ್ದರು. ಶಾಹಿದ್‌ ಹಾಗೂ ಅವರ ತಂದೆಗೆ ಉಳಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದ ಸಚಿನ್‌, ಸ್ವತಃ ತಾವೇ 5 ದಿನಗಳ ಕಾಲ ಬ್ಯಾಟಿಂಗ್‌ ತರಬೇತಿ ಸಹ ನೀಡಿದ್ದಾರೆ. ಸಚಿನ್‌ರಿಂದ ಬ್ಯಾಟಿಂಗ್‌ನ ಆರಂಭಿಕ ಪಾಠಗಳನ್ನು ಕಲಿತ ಶಾಹಿದ್‌ರನ್ನು ಕೋಲ್ಕತಾದಲ್ಲಿ ಒಳ್ಳೆಯ ಅಕಾಡೆಮಿಗೆ ಸೇರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಆತನ ತಂದೆ ಹೇಳಿಕೊಂಡಿದ್ದಾರೆ. ಅಲೆಕ್ಸ್ ಹ್ಯಾಲ್ಸ್ ಬದಲು ಕೆಕೆಆರ್ ತಂಡಕ್ಕೆ Finchಹಾಕಿ: ಭಾರತಕ್ಕಿಂದು ಜರ್ಮನಿ ಎದುರಾಳಿಭುವನೇಶ್ವರ:ಭಾರತ ಮಹಿಳಾ ಹಾಕಿ ತಂಡ ( ) ಶನಿವಾರ ಮತ್ತು ಭಾನುವಾರ ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ ( ) ಪಂದ್ಯಗಳಲ್ಲಿ ವಿಶ್ವ ನಂ.5 ಜರ್ಮನಿ ( ) ತಂಡವನ್ನು ಎದುರಿಸಲಿದೆ. ಚೊಚ್ಚಲ ಬಾರಿಗೆ ಪ್ರೊ ಲೀಗ್‌ನಲ್ಲಿ ( ) ಆಡುತ್ತಿರುವ ಭಾರತ ( ), ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಚೀನಾ ( ) ವಿರುದ್ಧ 7-1, 2-1 ಗೋಲುಗಳಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಭಾರತ, ಸ್ಪೇನ್‌ ( ) ವಿರುದ್ಧ ಮೊದಲ ಪಂದ್ಯದಲ್ಲಿ 2-1ರಲ್ಲಿ ಜಯಿಸಿತ್ತು. 2ನೇ ಪಂದ್ಯದಲ್ಲಿ 3-4 ಗೋಲುಗಳ ವೀರೋಚಿತ ಸೋಲು ಕಂಡಿತ್ತು. ವಿಶ್ವ ರಾರ‍ಯಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಭಾರತಕ್ಕೆ, ಈ ಪಂದ್ಯ ಅತ್ಯಂತ ಮಹತ್ವದೆನಿಸಿದ್ದು, ಗೋಲ್‌ಕೀಪರ್‌ ಸವಿತಾ ( ) ನೇತೃತ್ವದ ಪಡೆ ಗೆಲುವಿನ ವಿಶ್ವಾಸದಲ್ಲಿದೆ.ಪಂದ್ಯ: ಸಂಜೆ 5ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ ಸೆಲೆಕ್ಟ್ 2 2022: ಮುಂಬೈ ಇಂಡಿಯನ್ಸ್‌ಗೆ ಟಕ್ಕರ್ ನೀಡಿ ಲಸಿತ್ ಮಾಲಿಂಗರನ್ನು ಸೆಳೆದುಕೊಂಡ ರಾಜಸ್ಥಾನ ರಾಯಲ್ಸ್..!ರಾಜಸ್ಥಾನ ರಾಯಲ್ಸ್‌ಗೆ ಮಾಲಿಂಗ ಬೌಲಿಂಗ್‌ ಕೋಚ್‌ಮುಂಬೈ:ಶ್ರೀಲಂಕಾದ ಮಾಜಿ ವೇಗಿ ( ) , ಐಪಿಎಲ್‌ನಲ್ಲಿ ( ) ಗರಿಷ್ಠ ವಿಕೆಟ್‌ ಕಬಳಿಸಿರುವ ಬೌಲರ್‌ ಎನ್ನುವ ದಾಖಲೆ ಹೊಂದಿರುವ ಲಸಿತ್‌ ಮಾಲಿಂಗ ( ) 2022ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ( ) ತಂಡದ ವೇಗದ ಬೌಲಿಂಗ್‌ ಕೋಚ್‌ ಆಗಿ ಕಾರ‍್ಯನಿರ್ವಹಿಸಲಿದ್ದಾರೆ. ಮುಂಬೈ ಇಂಡಿಯನ್ಸ್‌ ( ) ಪರ 122 ಪಂದ್ಯಗಳನ್ನು ಆಡಿರುವ ಮಾಲಿಂಗ 170 ವಿಕೆಟ್‌ ಕಬಳಿಸಿದ್ದಾರೆ. ತಂಡದ ಪ್ರಧಾನ ಕೋಚ್‌ ಕುಮಾರ ಸಂಗಕ್ಕರ, ಮಾಲಿಂಗ ಅವರ ಹೆಸರನ್ನು ಫ್ರಾಂಚೈಸಿಗೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ.