ಬೌಲಿಂಗ್‌ನಲ್ಲಿ ದಾಖಲೆ ಬರೆಯಲು ಸಜ್ಜಾದ ರವೀಂದ್ರ ಜಡೇಜಾ..! * ಭಾರತ-ಲಂಕಾ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆರಂಭಕ್ಕೆ ಕ್ಷಣಗಣನೆ * ಮಾರ್ಚ್‌ 12ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ ಹಗಲು-ರಾತ್ರಿ ಟೆಸ್ಟ್ ಪಂದ್ಯ * 250 ವಿಕೆಟ್ ಹೊಸ್ತಿಲಲ್ಲಿರುವ ಎಡಗೈ ಸ್ಪಿನ್ನರ್ ಜಡೇಜಾ ಬೆಂಗಳೂರು(ಮಾ.11): ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ( ) ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 250 ಕಬಳಿಸಿದ ಭಾರತದ ಮೂರನೇ ಬೌಲರ್‌ ಎನಿಸಿಕೊಳ್ಳಲು ಒಳ್ಳೆಯ ಅವಕಾಶ ಕೂಡಿಬಂದಿದೆ. ಭಾರತ ಹಾಗೂ ಶ್ರೀಲಂಕಾ ( ) ತಂಡಗಳ ನಡುವೆ ಮಾರ್ಚ್ 12ರಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಪಿಂಕ್‌ ಬಾಲ್ ಟೆಸ್ಟ್‌ ( ) ಪಂದ್ಯದಲ್ಲಿ ಮಿಂಚಲು ಜಡೇಜಾ ರೆಡಿಯಾಗಿದ್ದಾರೆ. ರವೀಂದ್ರ ಜಡೇಜಾ ಇದುವರೆಗೂ ಟೀಂ ಇಂಡಿಯಾ ( ) ಪರ 58 ಟೆಸ್ಟ್ ಪಂದ್ಯಗಳನ್ನಾಡಿ 241 ವಿಕೆಟ್‌ ಕಬಳಿಸಿದ್ದಾರೆ. ಒಂದು ವೇಳೆ ಜಡೇಜಾ ಬೆಂಗಳೂರಿನಲ್ಲಿ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಇನ್ನು 9 ವಿಕೆಟ್ ಕಬಳಿಸಿದರೆ, ರವಿಚಂದ್ರನ್ ಅಶ್ವಿನ್ ( ) ಹಾಗೂ ಅನಿಲ್ ಕುಂಬ್ಳೆ ( ) ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 250 ವಿಕೆಟ್ ಕಬಳಿಸಿದ ಭಾರತದ ಮೂರನೇ ಸ್ಪಿನ್ನರ್ ಎನ್ನುವ ಕೀರ್ತಿ ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾ ಪಾಲಾಗಲಿದೆ. ಶ್ರೀಲಂಕಾ ವಿರುದ್ದ ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸಹ ರವೀಂದ್ರ ಜಡೇಜಾ 9 ವಿಕೆಟ್ ಕಬಳಿಸಿದ್ದರು. ಬ್ಯಾಟಿಂಗ್‌ನಲ್ಲಿ ಅಜೇಯ 175 ರನ್ ಬಾರಿಸಿದ್ದ ಜಡೇಜಾ, ಬೌಲಿಂಗ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 5 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸುವುದರೊಂದಿಗೆ ಒಟ್ಟು 9 ವಿಕೆಟ್ ಪಡೆದು, ಟೀಂ ಇಂಡಿಯಾ ಸುಲಭ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರ‍್ಯಾಂಕಿಂಗ್‌ನಲ್ಲಿ ರವೀಂದ್ರ ಜಡೇಜಾ ನಂ.1 ಟೆಸ್ಟ್‌ ಆಲ್ರೌಂಡರ್‌ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತದ ರವೀಂದ್ರ ಜಡೇಜಾ ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಟೆಸ್ಟ್‌ ಆಲ್ರೌಂಡರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಅಜೇಯ 175 ರನ್‌ ಕಲೆಹಾಕಿದ್ದ ಅವರು, ಪಂದ್ಯದಲ್ಲಿ ಒಟ್ಟು 9 ವಿಕೆಟ್‌ ಕಬಳಿಸಿದ್ದರು. : ನಂ. 1 ಆಲ್ ರೌಂಡರ್ ಸ್ಥಾನಕ್ಕೇರಿದ ಸರ್ ರವೀಂದ್ರ ಜಡೇಜಾ.. ಇದೇ ಮೊದಲಲ್ಲ! ಇದೇ ವೇಳೆ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ 17 ಸ್ಥಾನ ಏರಿಕೆ ಕಂಡು 54ರಿಂದ 37ನೇ ಸ್ಥಾನ ತಲುಪಿರುವ ಜಡೇಜಾ, ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನಕ್ಕೇರಿದ್ದಾರೆ. 2021ರ ಫೆಬ್ರವರಿಯಿಂದ ಅಗ್ರಸ್ಥಾನದಲ್ಲಿದ್ದ ವೆಸ್ಟ್‌ಇಂಡೀಸ್‌ನ ಜೇಸನ್‌ ಹೋಲ್ಡರ್‌ರನ್ನು ಹಿಂದಿಕ್ಕಿರುವ ಜಡೇಜಾ, ತಮ್ಮ ವೃತ್ತಿಬದುಕಿನಲ್ಲಿ 2ನೇ ಬಾರಿಗೆ ಅಗ್ರಸ್ಥಾನ ಪಡೆದಿದ್ದಾರೆ. ಈ ಮೊದಲು 2017ರ ಆಗಸ್ಟ್‌ನಲ್ಲಿ ಒಂದು ವಾರ ಕಾಲ ಅವರು ನಂ.1 ಸ್ಥಾನದಲ್ಲಿದ್ದರು. ರವೀಂದ್ರ ಜಡೇಜಾಗೆ + ಕೆಟೆಗೆರೆಯಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ ಆಕಾಶ್ ಚೋಪ್ರಾ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಅಮೋಘ ಪ್ರದರ್ಶನ ನೀಡುತ್ತಾ ಬಂದಿರುವ ರವೀಂದ್ರ ಜಡೇಜಾ ಅವರಿಗೆ ವಿರಾಟ್ ಕೊಹ್ಲಿ( ), ರೋಹಿತ್ ಶರ್ಮಾ ( ) ಹಾಗೂ ಜಸ್ಪ್ರೀತ್ ಬುಮ್ರಾ ( ) ಜತೆಗೆ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ + ಕೆಟೆಗೆರೆಯಲ್ಲಿ ಸ್ಥಾನ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಒತ್ತಾಯಿಸಿದ್ದಾರೆ. ಬಿಸಿಸಿಐ ಇತ್ತೀಚೆಗಷ್ಟೇ ಕೇಂದ್ರೀಯ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಆಕಾಶ್ ಚೋಪ್ರಾ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಇರುವ + ಕೆಟೆಗೆರೆಯಲ್ಲಿ ಸದ್ಯ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಈ ಕೆಟೆಗೆರೆಯಲ್ಲಿ ರವೀಂದ್ರ ಜಡೇಜಾ ಯಾಕಿಲ್ಲವೆಂದು ಅರ್ಥವಾಗುತ್ತಿಲ್ಲ. ನನ್ನ ಪ್ರಕಾರ ಜಡೇಜಾಗೆ ಆ ಪಟ್ಟಿಯೊಳಗೆ ಸ್ಥಾನ ಸಿಗಬೇಕು. ಮುಂಬರುವ ಕೇಂದ್ರೀಯ ಗುತ್ತಿಗೆ ಪ್ರಕಟವಾದಾಗ ಜಡೇಜಾ + ಕೆಟೆಗೆರೆಯಲ್ಲಿರಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.