2022: ಈ ಬಾರಿ ಹೊಸ ರೂಪದಲ್ಲಿ ಐಪಿಎಲ್‌ ಝಲಕ್‌..! * 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 10 ತಂಡಗಳು ಭಾಗಿ * ಹೊಸ ರೂಪದಲ್ಲಿ ನಡೆಯಲಿದೆ ಈ ಬಾರಿಯ ಐಪಿಎಲ್ ಟೂರ್ನಿ * ಈ ಬಾರಿ ಐಪಿಎಲ್‌ನಲ್ಲಿ 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ ನವದೆಹಲಿ(ಫೆ.26): 15ನೇ ಆವೃತ್ತಿಯ ಐಪಿಎಲ್‌ನ ( 2022) ಮಾದರಿಯನ್ನು ಬಿಸಿಸಿಐ ಬದಲಾವಣೆ ಮಾಡಿದ್ದು, 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ತಂಡಗಳು ಈ ಹಿಂದಿನಂತೆ ಲೀಗ್‌ ಹಂತದಲ್ಲಿ ತಲಾ 14 ಪಂದ್ಯಗಳನ್ನು ಆಡಲಿವೆ. ಟೂರ್ನಿಯು ಮಾರ್ಚ್‌ 26ರಿಂದ ಮೇ 29ರ ವರೆಗೂ ನಡೆಯಲಿದೆ ಎಂದು ಬಿಸಿಸಿಐ ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ. ಬಿಸಿಸಿಐ () ಪ್ರಕಟಣೆ ಪ್ರಕಾರ ‘ಎ’ ಗುಂಪಿನಲ್ಲಿ ಮುಂಬೈ ಇಂಡಿಯನ್ಸ್‌ ( ), ಕೋಲ್ಕತಾ ನೈಟ್‌ ರೈಡರ್ಸ್‌ , ರಾಜಸ್ಥಾನ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ಜೈಂಟ್ಸ್‌ ತಂಡಗಳು ಸ್ಥಾನ ಪಡೆದಿವೆ. ‘ಬಿ’ ಗುಂಪಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಸನ್‌ರೈಸ​ರ್ಸ್‌ ಹೈದರಾಬಾದ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಪಂಜಾಬ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳಿವೆ. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಹೊಸದಾಗಿ ಗುಜರಾತ್ ಸೂಪರ್ ಜೈಂಟ್ಸ್‌ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಟೂರ್ನಿಯ ಮಾದರಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ. ಟೂರ್ನಿ ಮಾದರಿ ಹೇಗೆ? ಲೀಗ್‌ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಪ್ಲೇ-ಆಫ್‌ ಹಂತದಲ್ಲಿ 4 ಪಂದ್ಯಗಳು ಇರಲಿವೆ. ಆಯಾ ಗುಂಪಿನಲ್ಲಿರುವ ತಂಡಗಳು ಪರಸ್ಪರ ಎರಡು ಬಾರಿ ಎದುರಾಗಲಿವೆ. ಮತ್ತೊಂದು ಗುಂಪಿನಲ್ಲಿರುವ ಒಂದು ತಂಡದ ವಿರುದ್ಧ 2 ಬಾರಿ, ಉಳಿದ 4 ತಂಡಗಳ ವಿರುದ್ಧ ತಲಾ ಒಮ್ಮೆ ಸೆಣಸಲಿವೆ. ತಂಡಗಳು ಗೆದ್ದಿರುವ ಒಟ್ಟು ಟ್ರೋಫಿ ಹಾಗೂ ಪ್ರವೇಶಿಸಿರುವ ಒಟ್ಟು ಫೈನಲ್‌ಗಳನ್ನು ಆಧರಿಸಿ ಶ್ರೇಯಾಂಕ ನೀಡಲಾಗಿದೆ. ಇದರ ಅನುಸಾರ 5 ಬಾರಿ ಚಾಂಪಿಯನ್‌ ಆಗಿರುವ ಮುಂಬೈಗೆ ಮೊದಲ ಸ್ಥಾನ ಸಿಕ್ಕಿದ್ದು, ‘ಎ’ ಗುಂಪಿನಲ್ಲಿದೆ. 4 ಟ್ರೋಫಿ ಗೆದ್ದಿರುವ ಚೆನ್ನೈ 2ನೇ ಸ್ಥಾನ ಸಿಕ್ಕಿದ್ದು, ‘ಬಿ’ ಗುಂಪಿನಲ್ಲಿ ಸ್ಥಾನ ನೀಡಲಾಗಿದೆ. ಉದಾಹರಣೆಗೆ ‘ಎ’ ಗುಂಪಿನಲ್ಲಿರುವ ಮುಂಬೈ ತಂಡವು ಕೆಕೆಆರ್‌, ರಾಜಸ್ಥಾನ, ಡೆಲ್ಲಿ ಹಾಗೂ ಲಖನೌ ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಅಲ್ಲಿಗೆ 8 ಪಂದ್ಯಗಳು ಪೂರ್ಣಗೊಳ್ಳಲಿವೆ. ಇನ್ನು ‘ಬಿ’ ಗುಂಪಿನ ಮೊದಲ ಸ್ಥಾನದಲ್ಲಿರುವ ಚೆನ್ನೈ ವಿರುದ್ಧ 2, ಆರ್‌ಸಿಬಿ, ಸನ್‌ರೈಸ​ರ್ಸ್‌ ಹೈದರಾಬಾದ್, ಪಂಜಾಬ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್ ವಿರುದ್ಧ ತಲಾ 1 ಪಂದ್ಯವನ್ನಾಡಲಿದೆ. ಈ ಮೂಲಕ 14 ಪಂದ್ಯಗಳು ಪೂರ್ಣಗೊಳ್ಳಲಿವೆ. 2022: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಸ್ಥಾನ ಅಲಂಕರಿಸಿದ ಅಜಿತ್ ಅಗರ್‌ಕರ್ ಆರ್‌ಸಿಬಿ ತಂಡವು ಸನ್‌ರೈಸ​ರ್ಸ್‌ , ಪಂಜಾಬ್‌ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ವಿರುದ್ಧ ತಲಾ 2 ಪಂದ್ಯವನ್ನಾಡಲಿದ್ದು, ‘ಎ’ ಗುಂಪಿನಲ್ಲಿರುವ ರಾಜಸ್ಥಾನ ವಿರುದ್ಧ 2 ಪಂದ್ಯವನ್ನಾಡಲಿದೆ. ಇನ್ನುಳಿದ 4 ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ. ವಿರಾಟ್ ಕೊಹ್ಲಿ ( ) ಆರ್‌ಸಿಬಿ ನಾಯಕತ್ವಕ್ಕೆ ಗುಡ್‌ ಬೈ ಹೇಳಿರುವುದರಿಂದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಇನ್ನುಳಿದಂತೆ 2 ತಿಂಗಳ ಅವಧಿಯಲ್ಲಿ 74 ಪಂದ್ಯಗಳನ್ನು ಪೂರ್ಣಗೊಳಿಸಬೇಕು ಎನ್ನುವ ಉದ್ದೇಶದಿಂದ ಮಾದರಿಯಲ್ಲಿ ಬದಲಾವಣೆ ತರಲಾಗಿದೆ. ಮಾದರಿಯ ರಚನೆ ಹಿಂದೆ ತರ್ಕವಿಲ್ಲ ಎಂದೇ ಹೇಳಲಾಗುತ್ತದೆ. ಪಂದ್ಯಗಳು ಎಲ್ಲೆಲ್ಲಿ? ತಂಡಗಳು ಮುಂಬೈನ ವಾಂಖೇಡೆ ಕ್ರೀಡಾಂಗಣ ಹಾಗೂ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ತಲಾ 4 ಪಂದ್ಯಗಳನ್ನಾಡಲಿದ್ದು, ಬ್ರಾಬೊರ್ನ್‌ ಕ್ರೀಡಾಂಗಣ(ಸಿಸಿಐ) ಹಾಗೂ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ತಲಾ 3 ಪಂದ್ಯಗಳನ್ನು ಆಡಲಿವೆ.