ಟೀಂ ಇಂಡಿಯಾ ಅಬ್ಬರಕ್ಕೆ ನಲುಗಿದ ವಿಂಡೀಸ್, ಟಿ20 ಸರಣಿ ಕೈವಶ! ಕೋಲ್ಕತಾ(ಫೆ.18): ವೆಸ್ಟ್ ಇಂಡೀಸ್( ) ವಿರುದ್ದದ ಏಕದಿನ ಸರಣಿ ಬಳಿಕ ಇದೀಗ ಟಿ20 ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಕೋಲ್ಕತಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ 8 ರನ್ ರೋಚಕ ಗೆಲುವು ಕಂಡಿದೆ. ಈ ಮೂಲಕ ಇನ್ನು ಒಂದು ಪಂದ್ಯ ಬಾಕಿ ಇರುವಂತೆ ಟೀಂ ಇಂಡಿಯಾ( ) ಟಿ20 ಸರಣಿ ಕೈವಶ ಮಾಡಿದೆ. ಗೆಲುವಿಗೆ 187 ರನ್ ಟಾರ್ಗೆಟ್ ಪಡೆದಿದ್ದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯದಿದ್ದರೂ ಮಧ್ಯಮ ಕ್ರಮಾಂಕದ ಹೋರಾಟ ಪಂದ್ಯವನ್ನು ಮತ್ತಷ್ಟು ರೋಚಕವನ್ನಾಗಿಸಿತು. ಚೇಸಿಂಗ್ ಆರಂಭದಲ್ಲೇ ವಿಂಡೀಸ್ ಕೈಲ್ ಮೇಯರ್ಸ್ ವಿಕೆಟ್ ಕಳೆದುಕೊಂಡಿತು. ಮೇಯರ್ಸ್ 9 ರನ್ ಸಿಡಿಸಿ ಯಜುವೇಂದ್ರ ಚಹಾಲ್‌ಗೆ ವಿಕೆಟ್ ಒಪ್ಪಿಸಿದರು. : ವಿಂಡೀಸ್ ಎದುರಿನ ಟಿ20 ಸರಣಿಗೂ ಮುನ್ನ ಕೊಹ್ಲಿ ಕುರಿತಂತೆ ವಿಶೇಷ ಮನವಿ ಮಾಡಿದ ರೋಹಿತ್ ಶರ್ಮಾ ಬ್ರ್ಯಾಂಡನ್ ಕಿಂಗ್ ಹಾಗೂ ನಿಕೋಲಸ್ ಪೂರನ್ ಹೋರಾಟದಿಂದ ವಿಂಡೀಸ್ ಚೇತರಿಸಿಕೊಂಡಿತು. ಕಿಂಗ್ 22 ರನ್ ಸಿಡಿಸಿ ಔಟಾದರು. 59 ರನ್‌ಗಳಿಗೆ ವೆಸ್ಟ್ ಇಂಡೀಸ್ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿತು. ಆದರೆ ನಿಕೋಲಸ್ ಪೂರನ್ ಹಾಗೂ ರೊವ್ಮನ್ ಪೊವೆಲ್ ಜೊತೆಯಾಟ ಟೀಂ ಇಂಡಿಯಾ ಆತಂಕ ಹೆಚ್ಚಿಸಿತು. ಪೂರನ್ 41 ಎಸೆತದಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿದರು. ಇತ್ತ ರೊವ್ಮನ್ ಪೊವೆಲ್ ಸ್ಫೋಟಕ ಬ್ಯಾಟಿಂಗ್ ನರೆವಿನಿಂದ ವೆಸ್ಟ್ ಇಂಡೀಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಂತಿಮ ಓವರ್‌ನಲ್ಲಿ 25 ರನ್ ಅವಶ್ಯಕತೆ ಇತ್ತು. : ಬೆಂಗಳೂರಲ್ಲಿ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ ಗಂಗೂಲಿ ಶಿಲಾನ್ಯಾಸ ಹರ್ಷಲ್ ಪಟೇಲ್ ಮೊದಲ ಎರಡು ಎಸೆತದಲ್ಲಿ ಎರಡು ರನ್ ಹರಿದುಬಂತು. ಆದರೆ ಮೂರು ಮತ್ತು ನಾಲ್ಕನೇ ಎಸೆತದಲ್ಲಿ ಪೊವೆಲ್ ಸಿಕ್ಸರ್ ಸಿಡಿಸಿದರು. ಈ ಮೂಲಕ ಎರಡು ಎಸೆತದಲ್ಲಿ ವೆಸ್ಟ್ ಇಂಡೀಸ್ ಗೆಲುವಿಗೆ 11 ರನ್ ಅವಶ್ಯಕತ ಇತ್ತು. 5 ಮತ್ತು 6 ನೇ ಎಸತೆದಲ್ಲಿ ವಿಂಡೀಸ್ ಕೇವಲ 2 ರನ್ ಗಳಿಸಲಷ್ಟೇ ಸಾಧ್ಯವಾಯಿತು.ಪರಿಣಾಮ ಭಾರತ 8 ರನ್ ರೋಚಕ ಗೆಲುವು ಕಂಡಿತು. ಟೀಂ ಇಂಡಿಯಾ ಇನ್ನಿಂಗ್ಸ್: ವಿರಾಟ್ ಕೊಹ್ಲಿ, ರಿಷಬ್ ಪಂತ್ ಹಾಫ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿತ್ತು.ನಾಯಕ ರೋಹಿತ್ ಶರ್ಮಾ 19 ರನ್, ಇಶಾನ್ ಕಿಶನ್ 2 ರನ್‌ಗೆ ಔಟಾದರು. ವಿರಾಟ್ ಕೊಹ್ಲಿ 41 ಎಸೆತದಲ್ಲಿ 52 ರನ್ ಸಿಡಿಸಿದರೆ, ರಿಷಬ್ ಪಂತ್ ಅಜೇಯ 52 ರನ್ ಸಿಡಿಸಿದರು. ವೆಂಕಟೇಶ್ ಅಯ್ಯರ್ 33 ರನ್ ಕಾಣಿಕೆ ನೀಡಿದರು. ಏಕದಿನ ಸರಣಿ:ಟಿ20 ಸರಣಿಗೂ ಮೊದಲು ನಡೆದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿತ್ತು. ಮೊದಲ ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ 44 ರನ್ ಗೆಲುವು ದಾಖಲಿಸಿತು. ಈ ಮೂಲಕ ಒಂದು ಪಂದ್ಯ ಬಾಕಿ ಇರುವಂತೆ ಏಕದಿನ ಸರಣಿ ವಶಪಡಿಸಿಕೊಂಡಿತ್ತು. ಇನ್ನು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 96 ರನ್ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ 3-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.