2022 ಕರ್ನಾಟಕದ ಪ್ರವೀಣ್ ಡೆಲ್ಲಿ ಪಾಲು, ಸುಯಾಶ್‌ ಹಾಗೂ ಮಿಲಿಂದ್ ಖರೀದಿಸಿದ ಆರ್‌ಸಿಬಿ! ಬೆಂಗಳೂರು(ಫೆ.13):ಐಪಿಎಲ್ ಹರಾಜು( ) 2022ರ ಲಿಸ್ಟ್‌ನಲ್ಲಿದ್ದ ಬಹುತೇಕ ಕರ್ನಾಟಕ() ಆಟಗಾರರು ವಿವಿಧ ತಂಡಗಳಿಗೆ ಮಾರಾಟವಾಗಿದ್ದಾರೆ. ಕರುಣ್ ನಾಯರ್ ಹೊರತು ಪಡಿಸಿ ಇನ್ನುಳಿದ ಎಲ್ಲಾ ಕರ್ನಾಟಕ ಕ್ರಿಕೆಟಿಗರು ದಾಖಲೆ ಮೊತ್ತಕ್ಕೆ ಸೇಲಾಗಿದ್ದಾರೆ. ಇದೀಗ ಮತ್ತೊರ್ವ ಕರ್ನಾಟಕ ಆಲ್ರೌಂಡರ್ ಪ್ರವೀಣ್ ದುಬೆ, ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. 50 ಲಕ್ಷ ರೂಪಾಯಿ ಬೆಲೆಗೆ ಡೆಲ್ಲಿ ತಂಡ ದುಬೆ ಖರೀದಿಸಿದೆ. 20 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಪ್ರವೀಣ್ ದುಬೆ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭದಲ್ಲಿ ಆಸಕ್ತಿ ತೋರಿತ್ತು. ಆದರೆ 35 ಲಕ್ಷ ದಾಟುತ್ತಿದ್ದಂತೆ ಆರ್‌ಸಿಬಿ ಹಿಂದೇಟು ಹಾಕಿತು. ಇತ್ತ ಡೆಲ್ಲಿ 50 ಲಕ್ಷ ರೂಪಾಯಿ ನೀಡಿದ ದುಬೆ ಖರೀದಿಸಿತು. 2022 : ಹರಾಜಿನಲ್ಲಿ ಮುಗಿಯೋಲ್ಲ ಬ್ಲಂಡರ್ಸ್, ಆಯ್ಕೆ ಬಗ್ಗೆ ವೆಂಕಿ ಗರಂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಳಿಕ ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದ ಪ್ರವೀಣ್ ದುಬೆ ಇದೀಗ ಮತ್ತೆ ಡೆಲ್ಲಿ ಪಾಲಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಹೆಚ್ಚಿನ ಅವಕಾಶ ಸಿಗದೆ ದುಬೆ ಈ ಬಾರಿ ಹೊಸ ಅಧ್ಯಾಯ ಬರೆಯುವ ಉತ್ಸಾಹದಲ್ಲಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಇದುವರೆಗೆ 3 ಪಂದ್ಯಗಳನ್ನು ಆಡಿದ್ದಾರೆ. ಪ್ರವೀಣ್ ದುಬೆ ಖರೀದಿಗೆ ಮನಸ್ಸು ಮಾಡದ ಆರ್‌ಸಿಬಿ, ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿದ್ದ ಸುಯಾಶ್‌ ಪ್ರಭುದೇಸಾಯಿ ಖರೀದಿ ಮಾಡಿದೆ. 20 ಲಕ್ಷ ರೂಪಾಯಿ ಮೂಲ ಬೆಲೆಯ ಸುಯಾಶ್‌ ಪ್ರಭುದೇಸಾಯಿಗೆ 30 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿದೆ. ಗೋವಾ ಕ್ರಿಕೆಟಿಗ ಸುಯಾಶ್‌ ಪ್ರಭುದೇಸಾಯಿ 2021ರಲ್ಲಿ ಆರ್‌ಸಿಬಿ ತಂಡ ಸೇರಿಕೊಂಡಿದ್ದರು. ಆದರೆ ಪ್ಲೇಯಿಂಗ್ ಇಲೆವೆನ್‌ನನಲ್ಲಿ ಸುಯಾಶ್‌ ಪ್ರಭುದೇಸಾಯಿಗೆ ಅವಕಾಶ ಸಿಕ್ಕಿಲ್ಲ. 2022 : ಒಂದೇ ವರ್ಷದಲ್ಲಿ 8.35 ಕೋಟಿ ಮೌಲ್ಯ ಕಳೆದುಕೊಂಡ ಕೆ.ಗೌತಮ್! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ:ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿವಾನಿಂದು ಹಸರಂಗ : 10.75 ಕೋಟಿ ರೂಪಾಯಿದಿನೇಶ್ ಕಾರ್ತಿಕ್ : 5.50 ಕೋಟಿ ರೂಪಾಯಿಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿಆಕಾಶ್ ದೀಪ್ : 20 ಲಕ್ಷ ರೂಪಾಯಿಅನೂಜ್ ರಾವತ್ :3.40 ಕೋಟಿ ರುಪಾಯಿಮಹೀಪಾಲ್ ಲೊಮ್ರೊರ್: 95 ಲಕ್ಷ ರೂಪಾಯಿಫಿನ್ ಅಲೆನ್: 80 ಲಕ್ಷ ರೂಪಾಯಿಶೆರ್ಫಾನೆ ರುದರ್‌ಫೋರ್ಡ್‌ : 1 ಕೋಟಿ ರೂಪಾಯಿಜೇಸನ್‌ ಬೆಹ್ರನ್‌ಡ್ರಾಫ್‌ : 75 ಲಕ್ಷ ರುಪಾಯಿಸುಯಾಶ್‌ ಪ್ರಭುದೇಸಾಯಿ : 30 ಲಕ್ಷ ರೂಪಾಯಿಚಾಮಾ ಮಿಲಿಂದ್: 25 ಲಕ್ಷ ರೂಪಾಯಿ ಐಪಿಎಲ್ ಟೂರ್ನಿಯಲ್ಲಿ ಮೂರು ಬಾರಿ ರನ್ನರ್ ಅಪ್ ಪ್ರಶಸ್ತಿ ಗೆದ್ದಿರುವ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆಲುವಿಗೆ ಹವಣಿಸುತ್ತಿದೆ. ಈ ಬಾರಿ ಹೊಸ ರೀತಿಯಲ್ಲಿ ತಂಡವನ್ನು ಆಯ್ಕೆ ಮಾಡಿದೆ. 2009ರಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ಟ್ರೋಫಿ ಗೆಲುವಿನಿಂಚ ವಂಚಿತವಾಗಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಇನ್ನು 2011ರಲ್ಲಿ ಮತ್ತೆ ಎರಡನೇ ಬಾರಿ ರನ್ನರ್ ಅಪ್ ಪ್ರಶಸ್ತಿ ಪಡೆದ ಆರ್‌ಸಿಬಿ 2016ರಲ್ಲಿ 3ನೇ ಬಾರಿಗೆ ಫೈನಲ್ ಪ್ರವೇಶಿಸಿ ನಿರಾಸೆ ಅನುಭವಿಸಿದೆ. ಐಪಿಎಲ್ ಟ್ರೋಫಿ2008: ರಾಜಸ್ಥಾನ ರಾಯಲ್ಸ್2009: ಡೆಕ್ಕನ್ ಚಾರ್ಜಸ್2010: ಚೆನ್ನೈ ಸೂಪರ್ ಕಿಂಗ್ಸ್2011: ಚೆನ್ನೈ ಸೂಪರ್ ಕಿಂಗ್ಸ್2012: ಕೋಲ್ಕತಾ ನೈಟ್ ರೈಡರ್ಸ್2013: ಮುಂಬೈ ಇಂಡಿಯನ್ಸ್2014: ಕೋಲ್ಕತಾ ನೈಟ್ ರೈಡರ್ಸ್2015: ಮುಂಬೈ ಇಂಡಿಯನ್ಸ್2016: ಸನ್‌ರೈಸರ್ಸ್ ಹದರಾಬಾದ್2017: ಮುಂಬೈ ಇಂಡಿಯನ್ಸ್2018: ಚೆನ್ನೈ ಸೂಪರ್ ಕಿಂಗ್ಸ್2019:ಮುಂಬೈ ಇಂಡಿಯನ್ಸ್2020: ಮುಂಬೈ ಇಂಡಿಯನ್ಸ್2021: ಚೆನ್ನೈ ಸೂಪರ್ ಕಿಂಗ್ಸ್