ಚೆನ್ನೈ ಮೂಲದ ಯುವತಿಯ ಜತೆ ಮ್ಯಾಕ್ಸ್‌ವೆಲ್ ಮದುವೆ ಡೇಟ್ ಫಿಕ್ಸ್..! * ಗ್ಲೆನ್‌ ಮ್ಯಾಕ್ಸ್‌ವೆಲ್‌-ವಿನಿ ರಾಮನ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್ * ತಮಿಳಿನಲ್ಲಿರುವ ಮದುವೆ ಆಮಂತ್ರಣ ಪತ್ರ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್‌ * ಹಿಂದೂ ಸಂಪ್ರದಾಯದಂತೆ ಮಾರ್ಚ್‌ 27ರಂದು ಮೆಲ್ಬರ್ನ್‌ನಲ್ಲಿ ಮದುವೆಯಾಗಲಿದ್ದಾರೆ ಮೆಲ್ಬರ್ನ್(ಫೆ.14)‌: ಆಸ್ಪ್ರೇಲಿಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ( ) ಚೆನ್ನೈನ ಬ್ರಾಹ್ಮಣ ಹುಡುಗಿ ಮಿನಿ ರಾಮನ್‌ ( ) ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದು, ತಮಿಳಿನಲ್ಲಿರುವ ಮದುವೆ ಆಮಂತ್ರಣ ಪತ್ರ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್‌ ಆಗಿದೆ. 2 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅವರು ಹಿಂದೂ ಸಂಪ್ರದಾಯದಂತೆ ಮಾರ್ಚ್‌ 27ರಂದು ಮೆಲ್ಬರ್ನ್‌ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ವಿನಿ ರಾಮನ್‌ ಔಷಧ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಾರ್ಚ್‌ 27ರಿಂದಲೇ 2022ನೇ ಸಾಲಿನ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ( ) ಟೂರ್ನಿಯು ಆರಂಭವಾಗುವ ಸಾಧ್ಯತೆ ಇದ್ದು, ಆರಂಭಿಕ ಕೆಲ ಪಂದ್ಯಗಳಿಗೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಗೈರಾಗಬಹುದು ಎನ್ನಲಾಗಿದೆ. ಗ್ಲೆನ್‌ ಮ್ಯಾಕ್ಸ್‌ವೆಲ್ 2021ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ( ) ತಂಡದ ಅಮೋಘ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಇದರ ಬೆನ್ನಲ್ಲೇ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿಗೂ ( ) ಮುನ್ನ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ರೀಟೈನ್ ಮಾಡಿಕೊಂಡಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಜತೆಗೆ ವಿರಾಟ್ ಕೊಹ್ಲಿ ( ) ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಸಹಾ ಆರ್‌ಸಿಬಿ ರೀಟೈನ್‌ ಮಾಡಿಕೊಂಡಿದೆ. ಟಿ20: ಲಂಕಾ ವಿರುದ್ಧ ಆಸೀಸ್‌ಗೆ ಸೂಪರ್‌ ಜಯ ಸಿಡ್ನಿ: ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಆಸ್ಪ್ರೇಲಿಯಾ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 6 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿತು. 2022 ಬ್ಯಾಲೆನ್ಸ್ ತಂಡ ಕಟ್ಟಿದ್ದ ಸಿಎಸ್‌ಕೆ, ಹೀಗಿದೆ ಹರಾಜಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಟೀಮ್! ಜೋಸ್‌ ಇಂಗ್ಲಿಸ್‌ 48 ರನ್‌ ಗಳಿಸಿದರು. ಗುರಿ ಬೆನ್ನತ್ತಿದ ಲಂಕಾ 8 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿತು. ಕೊನೆ ಓವರಲ್ಲಿ 19 ರನ್‌ ಬೇಕಿದ್ದಾಗ ಲಂಕಾ 18 ರನ್‌ ಸಿಡಿಸಿ ಪಂದ್ಯ ಟೈ ಮಾಡಿತು. ಬಳಿಕ ಸೂಪರ್‌ ಓವರ್‌ನಲ್ಲಿ ಲಂಕಾ 1 ವಿಕೆಟ್‌ಗೆ 5 ರನ್‌ ಗಳಿಸಿದರೆ, ಆಸೀಸ್‌ 3 ಎಸೆತಗಳಲ್ಲಿ ಗುರಿ ತಲುಪಿತು. 3ನೇ ಪಂದ್ಯ ಮಂಗಳವಾರ ನಡೆಯಲಿದೆ. ಲಂಕಾ ಟಿ20 ಲೀಗ್‌ನಲ್ಲಿ ಫಿಕ್ಸಿಂಗ್‌ ಯತ್ನ: ತನಿಖೆ ಕೊಲಂಬೊ: ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್‌ ಲೀಗ್‌(ಎಲ್‌ಪಿಎಲ್‌) ಟಿ20 ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಪ್ರಯತ್ನ ನಡೆದಿತ್ತು ಎಂಬ ಆರೋಪದ ಬಗ್ಗೆ ಕ್ರೀಡಾ ಸಚಿವಾಲಯದ ಭ್ರಷ್ಟಾಚಾರ ನಿಗ್ರಹ ಘಟಕ ತನಿಖೆ ಆರಂಭಿಸಿದೆ. ಘಟಕದ ಮುಖ್ಯಸ್ಥ ಜಗತ್‌ ಫೊನ್ಸೆಕಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಫಿಕ್ಸಿಂಗ್‌ಗಾಗಿ ತಮಗೆ ಬೇಡಿಕೆ ಇದ್ದ ಬಗ್ಗೆ ರಾಷ್ಟ್ರೀಯ ತಂಡದ ಬ್ಯಾಟರ್‌ ಒಬ್ಬರು ದೂರು ನೀಡಿದ್ದಾರೆ. ಉದ್ಯಮಿಯ ಮಗ ಹಾಗೂ ಆತನ ಸ್ನೇಹಿತ ಭೇಟಿ ಮಾಡಿ ಫಿಕ್ಸಿಂಗ್‌ ಮಾಡಲು ಬೇಡಿಕೆ ಇರಿಸಿದ ಬಗ್ಗೆ ದೂರು ಸ್ವೀಕರಿಸಿದ್ದೇವೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ’ ಎಂದಿದ್ದಾರೆ. 2ನೇ ಆವೃತ್ತಿಯ ಎಲ್‌ಪಿಎಲ್‌ ಕಳೆದ ಡಿಸೆಂಬರ್‌ನಲ್ಲಿ ನಡೆದಿತ್ತು. ರಣಜಿ: ಕರ್ನಾಟಕ ತಂಡಕ್ಕೆ ಪ್ರಸಿದ್ಧ್, ಕರುಣ್‌ ಅಲಭ್ಯ ಬೆಂಗಳೂರು: ರಣಜಿ ಟ್ರೋಫಿ ( ) ಕ್ರಿಕೆಟ್‌ ಟೂರ್ನಿಯ ಆಟಗಾರರ ಪಟ್ಟಿಯಲ್ಲಿ ಕರ್ನಾಟಕ ತಂಡ 2 ಬದಲಾವಣೆಗಳನ್ನು ಮಾಡಿದೆ. ವೇಗದ ಬೌಲರ್‌ ಪ್ರಸಿದ್ಧ್ ಕೃಷ್ಣ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದು, ವಿದ್ವತ್‌ ಕಾವೇರಪ್ಪ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬ್ಯಾಟರ್‌ ಕರುಣ್‌ ನಾಯರ್‌ಗೆ ( ) ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಅವರು ತಂಡದಿಂದ ಹೊರಬಿದ್ದಿದ್ದಾರೆ. ರಾಜ್ಯ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಗುಂಪು ಹಂತದ ಪಂದ್ಯಗಳನ್ನು ಚೆನ್ನೈನಲ್ಲಿ ಆಡಲಿದೆ. ಮೊದಲ ಪಂದ್ಯವು ಫೆಬ್ರವರಿ 17ರಿಂದ ರೈಲ್ವೇಸ್‌ ವಿರುದ್ಧ ನಡೆಯಲಿದೆ.