2022 : ಶ್ರೀಲಂಕಾದ ಈವರೆಗಿನ ದುಬಾರಿ ಆಟಗಾರ ವಾನಿಂದು, ಇಷ್ಟು ಮೊತ್ತ ಕೊಟ್ಟಿದ್ದೇಕೆ? ಐಪಿಎಲ್ ಇತಿಹಾಸದಲ್ಲಿಯೇ ಶ್ರೀಲಂಕಾದ ಅತ್ಯಂತ ದುಬಾರಿ ಆಟಗಾರ10.75 ಕೋಟಿ ರೂಪಾಯಿಗೆ ಖರೀದಿ ಮಾಡಿದ ಆರ್ ಸಿಬಿಇಷ್ಟು ದೊಡ್ಡ ಮೊತ್ತ ಖರೀದಿ ಮಾಡಿದ್ದರ ಕಾರಣವೇನು? ಬೆಂಗಳೂರು (ಫೆ. 11): ಟಿ20 ಕ್ರಿಕೆಟ್ ನ ನಂ.1 ಬೌಲರ್, ವಿಶ್ವ ಕ್ರಿಕೆಟ್ ನ ಅಗ್ರ 5 ಆಲ್ರೌಂಡರ್ ಗಳಲ್ಲಿ ಒಬ್ಬರಾಗಿರುವ ಶ್ರೀಲಂಕಾದ ವಾನಿಂದು ಹಸರಂಗ ಅವರನ್ನು ದೊಡ್ಡ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಐಪಿಎಲ್ ನಲ್ಲಿ ಆರ್ ಸಿಬಿ ಪರವಾಗಿ ಆಡಿರುವ ವಾನಿಂದು ಹಸರಂಗ, ಐಪಿಎಲ್ ಇತಿಹಾಸದಲ್ಲಿಯೇ ಶ್ರೀಲಂಕಾದ ಅತ್ಯಂತ ದುಬಾರಿ ಆಟಗಾರ ಎನ್ನುವ ದಾಖಲೆಯನ್ನೂ ಮಾಡಿದ್ದಾರೆ. 10,75 ಕೋಟಿ ರೂಪಾಯಿ ಮೊತ್ತಕ್ಕೆ ವಾನಿಂದು ಹಸರಂಗ ಅವರನ್ನು ಆರ್ ಸಿಬಿ ಖರೀದಿಸಿದೆ.ಭಾರತದ ಸ್ಪಿನ್-ಬೌಲಿಂಗ್ ಪ್ರತಿಭೆಯ ಆಳ ಎಷ್ಟಿದೆ ಎಂದರೆ ಐಪಿಎಲ್ ಹರಾಜಿನಲ್ಲಿ ವಿದೇಶಿ ಸ್ಪಿನ್ನರ್ ದಾಖಲೆಯ ಮೊತ್ತಕ್ಕೆ ಮಾರಾಟವಾಗವುದು ಬಹಳ ಅಪರೂಪ. ಆದರೆ, ಈ ಎಲ್ಲವನ್ನೂ ಮೀರಿ ವಾನಿಂದು ಹಸರಂಗ ದೊಡ್ಡ ಮೊತ್ತಕ್ಕೆ ಮಾರಾಟವಾದರು. ಅದರೊಂದಿಗೆ ಹಾಲಿ ಐಪಿಎಲ್ ಹರಾಜಿನಲ್ಲಿ 10 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾದ ಮೊದಲ ವಿದೇಶಿ ಪ್ಲೇಯರ್ ಇವರಾಗಿದ್ದಾರೆ. 2022 : ಶ್ರೇಯಸ್ ಅಯ್ಯರ್ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜು, ಹರ್ಷಲ್ 10.75 ಕೋಟಿಗೆ ಮಾರಾಟ!...ಲೆಗ್ ಸ್ಪಿನ್ ಆಲ್ರೌಂಡರ್ ಆಗಿರುವ ವಾನಿಂದು ಹಸರಂಗ, 2017ರಲ್ಲಿ ಚೊಚ್ಚಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಆ ನಂತರದ 18 ತಿಂಗಳ ಆಟದಲ್ಲಿ ತಮ್ಮ ನಿರ್ವಹಣೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ದ ಆಟಗಾರ ಇವರಾಗಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಗರಿಷ್ಠ ಮೌಲ್ಯದ ಆಟಗಾರ ಎನಿಸಿಕೊಂಡ ವಾನಿಂದು ಹಸರಂಗ, ಜಾಫ್ನಾ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರೊಂದಿಗೆ ಅಂತಾರಾಷ್ಟ್ರೀಯ ಟಿ20ಯಲ್ಲ ಅದ್ಭುತ ನಿರ್ವಹಣೆಯ ಮೂಲಕ ಗಮನಸೆಳೆದಿದ್ದಾರೆ. 2021ರಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಬೌಲರ್ ಎನಿಸಿಕೊಂಡಿರುವ ವಾನಿಂದು, ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಬೌಲರ್ ಕೂಡ ಎನಿಸಿದ್ದರು.ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯರು ಹರಾಜಿಗಿಲ್ಲಬಿಸಿಸಿಐ () ನಿಯಮದ ಕಾರಣ ಇತ್ತೀಚೆಗೆ ವೆಸ್ಟ್ ಇಂಡೀಸ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಜಯಿಸಿದ ಭಾರತ ತಂಡದ ಪ್ರಮುಖ ಆಟಗಾರರು ಈ ಬಾರಿ ಹರಾಜಿನಲ್ಲಿ ಇರುವುದಿಲ್ಲ. ಭಾರತದ ಅಂಡರ್ 19 ತಂಡದ ಉಪನಾಯಕ ಶೇಕ್ ರಶೀದ್ ( ), ವಿಕೆಟ್‌ಕೀಪರ್ ದಿನೇಶ್ ಬಾನಾ ( ), ರವಿಕುಮಾರ್ ( ), ನಿಶಾಂತ್ ಸಿಂಧು ( ), ಆಂಗ್‌ಕ್ರಿಶ್ ರಘುವಂಶಿ ( ), ಮಾನವ್ ಪರಾಖ್ ( ), ಗರ್ವ್ ಸಾಂಗ್ವಾನ್ ( ), ಸಿದ್ಧಾರ್ಥ್ ಯಾದವ್ ( ), ಆರಾಧ್ಯ ಯಾದವ್ ( ) ಹೆಸರು ಹರಾಜು ಪಟ್ಟಿಯಲ್ಲಿ ಇರುವುದಿಲ್ಲ. ಅಂಡರ್ 19 ಪ್ಲೇಯರ್ ಗಳು ಹರಾಜಿನಲ್ಲಿ ಭಾಗಿಯಾಗಲು, ಕನಿಷ್ಠ ಒಂದು ಪ್ರಥಮ ದರ್ಜೆ ಪಂದ್ಯ ಅಥವಾ ಲಿಸ್ಟ್ ಎ ಪಂದ್ಯವನ್ನು ಆಡಿರಬೇಕು ಎಂದು ಬಿಸಿಸಿಐ ಹೇಳಿದೆ. ದೇಶೀಯ ಕ್ರಿಕೆಟ್ ನಲ್ಲಿ ಆಡಿದ ಅನುಭವ ಇಲ್ಲದೇ ಇದ್ದಲ್ಲಿ ಆಯಾ ಆಟಗಾರ ಹರಾಜು ನಡೆಯುವ ಮುನ್ನ 19 ವರ್ಷ ವಯಸ್ಸಿನವರಾಗಿರಬೇಕು ಎಂದು ಬಿಸಿಸಿಐ ಹೇಳಿದೆ.