2022 : ಲಖನೌ ತಂಡದಲ್ಲಿ ರಾಹುಲ್ -ಮನೀಷ್ ಜೋಡಿ, ಪಡಿಕ್ಕಲ್ ಮಿಲಿಯನೇರ್! 4.6 ಕೋಟಿಗೆ ಲಖನೌ ತಂಡಕ್ಕೆ ಸೇರಿದ ಮನೀಷ್ ಪಾಂಡೆಮೂಲಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ ರಾಬಿನ್ ಉತ್ತಪ್ಪಡೇವದತ್ ಪಡಿಕ್ಕಲರ್ ಗೆ ಭಾರೀ ಬಿಡ್ ಸಲ್ಲಿಸಿದ ಫ್ರಾಂಚೈಸಿಗಳು ಬೆಂಗಳೂರು (ಫೆ.11):ಐಪಿಎಲ್ ನಲ್ಲಿ ತಮ್ಮ ಅದ್ಭುತ ಫಾರ್ಮ್ ಮೂಲಕ ಗಮನಸೆಳೆದ ಕರ್ನಾಟಕದ ಪ್ರಮುಖ ಆಟಗಾರ ದೇವದತ್ ಪಡಿಕ್ಕಲ್ ಗೆ ( ) ಫ್ರಾಂಚೈಸಿಗಳು ದೊಡ್ಡ ಮಟ್ಟದ ಬಿಡ್ ಸಲ್ಲಿಸಿವೆ. ಆರ್ ಸಿಬಿ (), ಚೆನ್ನೈ ಸೂಪರ್ ಕಿಂಗ್ಸ್ (), ಮುಂಬೈ ಇಂಡಿಯನ್ಸ್ ನಡುವೆ ಬಿಡ್ಡಿಂಗ್ ವಾರ್ ಗೆ ಕಾರಣರಾಗಿದ್ದ ದೇವದತ್ ಪಡಿಕ್ಕಲ್ ಬರೋಬ್ಬರಿ 7.75 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿದರು. 4 ಕೋಟಿ ರೂಪಾಯಿವರೆಗೂ ಬಿಡ್ ಮಾಡಿದ್ದ ಆರ್ ಸಿಬಿ ಆ ಬಳಿಕ ಹಿಂದೆ ಸರಿಯಿತು.ಇನ್ನೊಂದೆಡೆ ಪಡಿಕ್ಕಲ್ ಗೆ ದೊಡ್ಡದಾಗಿ ಬಿಡ್ ಮಾಡಿದ ಮುಂಬೈ ಇಂಡಿಯನ್ಸ್ 7 ಕೋಟಿಯವರೆಗೆ ಕೊಂಡೊಯ್ದಿತ್ತು. ಕೊನೆಗೆ ರಾಜಸ್ಥಾನ ರಾಯಲ್ಸ್ ತಂಡ 7.75 ಕೋಟಿ ರೂಪಾಯಿಗೆ ಪಡಿಕ್ಕಲ್ ರಾಜಸ್ಥಾನ ರಾಯಲ್ಸ್ ತಂಡದ ಪಾಲಾದರು. ಇನ್ನೊಂದೆಡೆ ಮನೀಷ್ ಪಾಂಡೆ ( ) ಹೆಸರು ಹರಾಜಿಗೆ ಬಂದ ಬಳಿಕ, ಮೊದಲಿಗೆ ಯಾವ ತಂಡ ಕೂಡ ಬಿಡ್ ಮಾಡುವ ಮನಸ್ಸು ಮಾಡಲಿಲ್ಲ. ಕೆಲ ಸಮಯದ ಬಳಿಕ, ಅವರ ಮಾಜಿ ತಂಡ ಸನ್ ರೈಸರ್ಸ್ ಹೈದರಾಬಾದ್ 1 ಕೋಟಿ ರೂಪಾಯಿಗೆ ಬಿಡ್ ಮಾಡಿತು. ಅದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಿಡ್ ಶುರು ಮಾಡಿದ್ದರಿಂದ ಬಿಡ್ಡಿಂಗ್ ವಾರ್ ಆರಂಭವಾಗಿ 2 ಕೋಟಿಯವರೆಗೆ ಮುಟ್ಟಿತ್ತು.ಸನ್ ರೈಸರ್ಸ್ ತಂಡದ ಮಾಲೀಕರಾದ ಕಾವ್ಯಾ ಮಾರನ್ 3 ಕೋಟಿಯವರೆಗೂ ಬಿಡ್ ಮಾಡಿದ ಬಳಿಕ ಲಖನೌ ಸೂಪರ್ ಜೈಂಟ್‌ ಹರಾಜಿನ ಫೀಲ್ಡ್ ಗೆ ಇಳಿದು ಮೊತ್ತವನ್ನು ಇನ್ನಷ್ಟು ಏರಿಸಿದ್ದಲ್ಲದೆ, 4.6 ಕೋಟಿ ರೂಪಾಯಿ ಮೊತ್ತಕ್ಕೆ ಮನೀಷ್ ಪಾಂಡೆಯನ್ನು ಖರೀದಿ ಮಾಡಿತು. ಇದರೊಂದಿಗೆ ಲಖನೌ ತಂಡದಲ್ಲಿ ಕೆಎಲ್ ರಾಹುಲ್ ಹಾಗೂ ಮನೀಷ್ ಪಾಂಡೆ ಜೋಡಿ ಆದಂತಾಗಿದೆ. 2022 : ವೇದಿಕೆಯಲ್ಲೇ ಕುಸಿದು ಬಿದ್ದ ಐಪಿಎಲ್ ಹರಾಜುದಾರ ಹ್ಯೂ ಎಡ್ಮೀಡ್ಸ್!...ಕಳೆದ ಋತುವಿನಲ್ಲಿ ಚೆನ್ನೈ ತಂಡ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದ ರಾಬಿನ್ ಉತ್ತಪ್ಪಗೆ ( ) ಸಿಎಸ್ ಕೆ ಆರಂಭಿಕ ಬಿಡ್ ಮಾಡಿತ್ತು. ಆದರೆ, ಉಳಿದ ತಂಡಗಳು ಆಸಕ್ತಿ ತೋರದ ಹಿನ್ನಲೆಯಲ್ಲಿ ಮೂಲಬೆಲೆಗೆ ಅವರು ಮಾರಾಟವಾದರು.ಐಪಿಎಲ್‌ ಮೆಗಾ ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳುತ್ತಿದ್ದು, ಈ ಪೈಕಿ 48 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ರುಪಾಯಿಗೆ ನಿಗದಿ ಮಾಡಿಕೊಂಡಿದ್ದರೆ, 20 ಆಟಗಾರರು 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದಾರೆ. ಇನ್ನು 34 ಆಟಗಾರರ ಮೂಲ ಬೆಲೆ 1 ಕೋಟಿ ರುಪಾಯಿ ಇದೆ. ಐಪಿಎಲ್ 2022 ರ ಮೆಗಾ ಹರಾಜಿನ ಒಂದು ದಿನ ಮುನ್ನ ಬಿಸಿಸಿಐ ಹರಾಜು ರಿಜಿಸ್ಟರ್‌ಗೆ ಮತ್ತೆ 10 ಹೆಸರುಗಳನ್ನು ಸೇರಿಸಿದೆ, ಇದರೊಂದಿಗೆ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಸಂಖ್ಯೆ 600ಕ್ಕೆ ಏರಿದೆ. ಆರನ್ ಹಾರ್ಡಿ, ಲ್ಯಾನ್ಸ್ ಮೋರಿಸ್, ನಿವೇತನ್ ರಾಧಾಕೃಷ್ಣನ್, ಅಗ್ನಿವೇಶ್ ಅಯಾಚಿ, ಹಾರ್ದಿಕ್ ತಮೋರ್, ನಿತೀಶ್ ಕುಮಾರ್ ರೆಡ್ಡಿ, ಮಿಹಿರ್ ಹಿರ್ವಾನಿ, ಮೋನು ಕುಮಾರ್, ರೋಹನ್ ರಾಣಾ, ಸಾಯಿರಾಜ್ ಪಾಟೀಲ್ ಸೇರ್ಪಡೆಗೊಂಡ ಆಟಗಾರರು. ಹಾರ್ಡಿ, ಮೋರಿಸ್ ಮತ್ತು ರಾಧಾಕೃಷ್ಣನ್ ಆಸ್ಟ್ರೇಲಿಯಾದವರಾಗಿದ್ದರೆ, ಉಳಿದವರೆಲ್ಲರೂ ಭಾರತದ ಆಟಗಾರರಾಗಿದ್ದಾರೆ. 2022 ದಿಢೀರ್ ಕುಸಿದ ಬಿದ್ದ ಹರಾಜುದಾರ ಹ್ಯೂ ಎಡ್ಮೀಡ್ಸ್, ಐಪಿಎಲ್ ಹರಾಜು ತಾತ್ಕಾಲಿಕ ಸ್ಥಗಿತ!ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯರು ಹರಾಜಿಗಿಲ್ಲಬಿಸಿಸಿಐ () ನಿಯಮದ ಕಾರಣ ಇತ್ತೀಚೆಗೆ ವೆಸ್ಟ್ ಇಂಡೀಸ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಜಯಿಸಿದ ಭಾರತ ತಂಡದ ಪ್ರಮುಖ ಆಟಗಾರರು ಈ ಬಾರಿ ಹರಾಜಿನಲ್ಲಿ ಇರುವುದಿಲ್ಲ. ಭಾರತದ ಅಂಡರ್ 19 ತಂಡದ ಉಪನಾಯಕ ಶೇಕ್ ರಶೀದ್ ( ), ವಿಕೆಟ್‌ಕೀಪರ್ ದಿನೇಶ್ ಬಾನಾ ( ), ರವಿಕುಮಾರ್ ( ), ನಿಶಾಂತ್ ಸಿಂಧು ( ), ಆಂಗ್‌ಕ್ರಿಶ್ ರಘುವಂಶಿ ( ), ಮಾನವ್ ಪರಾಖ್ ( ), ಗರ್ವ್ ಸಾಂಗ್ವಾನ್ ( ), ಸಿದ್ಧಾರ್ಥ್ ಯಾದವ್ ( ), ಆರಾಧ್ಯ ಯಾದವ್ ( ) ಹೆಸರು ಹರಾಜು ಪಟ್ಟಿಯಲ್ಲಿ ಇರುವುದಿಲ್ಲ. 2022 ಹರ್ಷಲ್ ಪಟೇಲ್‌ ಮತ್ತೆ ಆರ್‌ಸಿಬಿ ಪಾಲು, 10.75 ಕೋಟಿ ರೂಗೆ ಖರೀದಿ!ಅಂಡರ್ 19 ಪ್ಲೇಯರ್ ಗಳು ಹರಾಜಿನಲ್ಲಿ ಭಾಗಿಯಾಗಲು, ಕನಿಷ್ಠ ಒಂದು ಪ್ರಥಮ ದರ್ಜೆ ಪಂದ್ಯ ಅಥವಾ ಲಿಸ್ಟ್ ಎ ಪಂದ್ಯವನ್ನು ಆಡಿರಬೇಕು ಎಂದು ಬಿಸಿಸಿಐ ಹೇಳಿದೆ. ದೇಶೀಯ ಕ್ರಿಕೆಟ್ ನಲ್ಲಿ ಆಡಿದ ಅನುಭವ ಇಲ್ಲದೇ ಇದ್ದಲ್ಲಿ ಆಯಾ ಆಟಗಾರ ಹರಾಜು ನಡೆಯುವ ಮುನ್ನ 19 ವರ್ಷ ವಯಸ್ಸಿನವರಾಗಿರಬೇಕು ಎಂದು ಬಿಸಿಸಿಐ ಹೇಳಿದೆ.