2022 ಹರ್ಷಲ್ ಪಟೇಲ್‌ ಮತ್ತೆ ಆರ್‌ಸಿಬಿ ಪಾಲು, 10.75 ಕೋಟಿ ರೂಗೆ ಖರೀದಿ! ಬೆಂಗಳೂರು(ಫೆ.12):ಐಪಿಎಲ್ ಹರಾಜು( 2022) ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಳೆದು ತೂಗಿ ಆಟಗಾರರನ್ನು ಖರೀದಿಸುತ್ತಿದೆ. ದುಬಾರಿ ಬೆಲೆ ನೀಡಿ ಸೌತ್ ಆಫ್ರಿಕಾ ಬ್ಯಾಟ್ಸ್‌ಮನ್ ಫಾಫ್ ಡುಪ್ಲೆಸಿಸ್ ಖರೀದಿಸಿದ್ದ ಆರ್‌ಸಿಬಿ ಇದೀಗ ವೇಗಿ ಹರ್ಷಲ್ ಪಟೇಲ್‌ಗೆ 10.75 ಕೋಟಿ ರೂಪಾಯಿ ನೀಡಿದೆ. ಈ ಮೂಲಕ ಹರ್ಷಲ್ ಪಟೇಲ್ ಮತ್ತೆ ಆರ್‌ಸಿಬಿ ತಂಡಕ್ಕೆ ವಾಪಸ್ ಆಗಿದ್ದಾರೆ. ಹರ್ಷಲ್ ಪಟೇಲ್( ) ಖರೀದಿಸಲು ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ತೀವ್ರ ಪೈಪೋಟಿ ನಡೆಸಿತ್ತು. ಆದರೆ ಪಟ್ಟು ಬಿಡದ ಆರ್‌ಸಿಬಿ 10.75 ಕೋಟಿ ರೂಪಾಯಿ ನೀಡಿದ ಡೆತ್ ಓವರ್ ಸ್ಪೆಷಲಿಸ್ಟ್ ವೇಗಿಯನ್ನು ಖರೀದಿಸಿದೆ. 2022 : ಶ್ರೇಯಸ್ ಅಯ್ಯರ್ ಜಾಕ್ ಪಾಟ್, 7 ಕೋಟಿಗೆ ಸೇರಿದ ಡು ಪ್ಲೆಸಿಸ್ 2021ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು() ಪರ ಮಿಂಚಿನ ಪ್ರದರ್ಶನ ನೀಡಿದ್ದ ಹರ್ಷಲ್ ಪಟೇಲ್ 15 ಪಂದ್ಯದಿಂದ 32 ವಿಕೆಟ್ ಕಬಳಿಸಿದ್ದರು. ಈ ಮೂಲಕ ಪರ್ಪಲ್ ಕ್ಯಾಪ್ ಕಿರೀಟ ಪಡೆದುಕೊಂಡಿದ್ದರು. ಈ ಕಾರಣದಿಂದ ಹರ್ಷಲ್ ಪಟೇಲ್ ಖರೀದಿಗೆ ಹಲವು ಫ್ರಾಂಚೈಸಿಗಳು ಮುಗಿಬಿದ್ದಿತ್ತು. 2022 : ಪಂಜಾಬ್ ತಂಡಕ್ಕೆ ಧವನ್, ರಾಜಸ್ಥಾನ ಪಾಲಾದ ಅಶ್ವಿನ್ ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರಲು ಹರ್ಷಲ್ ಪಟೇಲ್ ಬೌಲಿಂಗ್ ಪ್ರದರ್ಶನ ಕೂಡ ಪ್ರಮುಖ ಕಾರಣವಾಗಿತ್ತು. ಇದು ವರೆಗೆ ಐಪಿಎಲ್ ಟೂರ್ನಿಯಲ್ಲಿ ಹರ್ಷಲ್ ಪಟೇಲ್ 63 ಪಂದ್ಯಗಳನ್ನು ಆಡಿದ್ದಾರೆ. ಓಟ್ಟು 78 ವಿಕೆಟ್ ಕಬಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ:ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿವಾನಿಂದು ಹಸರಂಗ : 10.75 ಕೋಟಿ ರೂಪಾಯಿದಿನೇಶ್ ಕಾರ್ತಿಕ್ : 5.50 ಕೋಟಿ ರೂಪಾಯಿಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿಆಕಾಶ್ ದೀಪ್ : 20 ಲಕ್ಷ ರೂಪಾಯಿಅನೂಜ್ ರಾವತ್ :3.40 ಕೋಟಿ ರುಪಾಯಿ ಐಪಿಎಲ್ ಟ್ರೋಫಿ2008: ರಾಜಸ್ಥಾನ ರಾಯಲ್ಸ್2009: ಡೆಕ್ಕನ್ ಚಾರ್ಜಸ್2010: ಚೆನ್ನೈ ಸೂಪರ್ ಕಿಂಗ್ಸ್2011: ಚೆನ್ನೈ ಸೂಪರ್ ಕಿಂಗ್ಸ್2012: ಕೋಲ್ಕತಾ ನೈಟ್ ರೈಡರ್ಸ್2013: ಮುಂಬೈ ಇಂಡಿಯನ್ಸ್2014: ಕೋಲ್ಕತಾ ನೈಟ್ ರೈಡರ್ಸ್2015: ಮುಂಬೈ ಇಂಡಿಯನ್ಸ್2016: ಸನ್‌ರೈಸರ್ಸ್ ಹದರಾಬಾದ್2017: ಮುಂಬೈ ಇಂಡಿಯನ್ಸ್2018: ಚೆನ್ನೈ ಸೂಪರ್ ಕಿಂಗ್ಸ್2019:ಮುಂಬೈ ಇಂಡಿಯನ್ಸ್2020: ಮುಂಬೈ ಇಂಡಿಯನ್ಸ್2021: ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ರನ್ನರ್ ಅಪ್2008: ಚೆನ್ನೈ ಸೂಪರ್ ಕಿಂಗ್ಸ್2009: ರಾಯಲ್ ಚಾಲೆಂಜರ್ಸ್ ಬೆಂಗಳೂರು2010: ಮುಂಬೈ ಇಂಡಿಯನ್ಸ್2011: ರಾಯಲ್ ಚಾಲೆಂಜರ್ಸ್ ಬೆಂಗಳೂರು2012: ಚೆನ್ನೈ ಸೂಪರ್ ಕಿಂಗ್ಸ್2013: ಚೆನ್ನೈ ಸೂಪರ್ ಕಿಂಗ್ಸ್2014: ಕಿಂಗ್ಸ್ ಇಲೆವೆನ್ ಪಂಜಾಬ್2015: ಚೆನ್ನೈ ಸೂಪರ್ ಕಿಂಗ್ಸ್2016: ರಾಯಲ್ ಚಾಲೆಂಜರ್ಸ್ ಬೆಂಗಳೂರು2017: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್2018: ಸನ್ ರೈಸರ್ಸ್ ಹೈದರಾಬಾದ್2019: ಚೆನ್ನೈ ಸೂಪರ್ ಕಿಂಗ್ಸ್2020: ಡೆಲ್ಲಿ ಕ್ಯಾಪಿಟಲ್ಸ್2021: ಕೋಲ್ಕತಾ ನೈಟ್ ರೈಡರ್ಸ್