2022 : ಏನಿದು ಕಾರ್ಡ್? ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಇರುತ್ತಾ? ರೈಟ್ ಟು ಮ್ಯಾಚ್ ಕಾರ್ಡ್ ಬಗ್ಗೆ ನಿಮಗೆ ಗೊತ್ತಿದೆಯೇ?ಈ ಬಾರಿಯ ಹರಾಜಿನಲ್ಲಿ ಇರೋದಿಲ್ಲ ಆರ್ ಟಿಎಂಬೆಂಗಳೂರಿನಲ್ಲಿ ನಡೆಯುತ್ತಿರುವ 2022 ಐಪಿಎಲ್ ಹರಾಜು ಬೆಂಗಳೂರು (ಫೆ. 12):ಐಪಿಎಲ್ 2022 ರ ಮೆಗಾ ಹರಾಜಿಗೆ ರೈಟ್ ಟು ಮ್ಯಾಚ್ ಕಾರ್ಡ್ (--) ಅನ್ವಯಿಸುವುದಿಲ್ಲ ಎಂದು ಬಿಸಿಸಿಐ () ತಿಳಿಸಿದೆ. ಇದರಿಂದಾಗಿ ಐಪಿಎಲ್ ಪರಿಧಿಗೆ ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳಿಗೆ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಆಯ್ಕೆ ಮಾಡುವ ಸಮಾನ ಅವಕಾಶವನ್ನು ಪಡೆಯಲಿದೆ.2018 ರಲ್ಲಿ ನಡೆದ ಕೊನೆಯ ಮೆಗಾ ಹರಾಜಿನಲ್ಲಿ, ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಆಟಗಾರರನ್ನು ಉಳಿಸಿಕೊಳ್ಳಲು ಐಪಿಎಲ್ ತಂಡಗಳಿಗೆ ಅವಕಾಶವಿತ್ತು. ರೈಟ್ ಟು ಮ್ಯಾಚ್ ಕಾರ್ಡ್‌ಗಳು ಫ್ರಾಂಚೈಸಿಗಳಿಗೆ ತಾವು ಹರಾಜಿಗೆ ಬಿಡುಗಡೆ ಮಾಡಿದ ಆಟಗಾರನನ್ನು ಮತ್ತೊಮ್ಮೆ ತಂಡದಲ್ಲಿಯೇ ಉಳಿಸಿಕೊಳ್ಳುವ ಅವಕಾಶವನ್ನು ನೀಡುತ್ತಿತ್ತು. ಹರಾಜಿನಲ್ಲಿ ಸ್ವೀಕರಿಸಿದ ಬಿಡ್ ಮೊತ್ತಕ್ಕೆ ಉಳಿಸಿಕೊಳ್ಳಲು ಕಾರ್ಡ್ ಅವಕಾಶ ನೀಡುತ್ತದೆ. ಹಿಂದಿನ ಕೆಲವು ಐಪಿಎಲ್ ಹರಾಜಿನಲ್ಲಿ ಆರ್ ಟಿಎಂ ಮೂಲಕವೇ ಫ್ರಾಂಚೈಸಿಗಳು ತನ್ನ ಪ್ಲೇಯರ್ ಗಳನ್ನು ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದವು.ಈ ಬಾರಿ, 2022 ರ ಮೆಗಾ ಹರಾಜಿಗೆ ರೈಟ್ ಟು ಮ್ಯಾಚ್ ಕಾರ್ಡ್ ಅನ್ವಯಿಸುವುದಿಲ್ಲ, ಇದು ಎರಡು ಹೊಸ ತಂಡಗಳಿಗೆ ಬಲಿಷ್ಠ ತಂಡವನ್ನು ನಿರ್ಮಿಸಲು ಸಮಾನ ಅವಕಾಶವನ್ನು ನೀಡುತ್ತದೆ. 2022 : ಐಪಿಎಲ್ ಮೆಗಾ ಹರಾಜು ಆರಂಭ, ಇಂದು ಅಗ್ರ 161 ಆಟಗಾರರ ಅದೃಷ್ಟ ಪರೀಕ್ಷೆಐಪಿಎಲ್‌ ಮೆಗಾ ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳುತ್ತಿದ್ದು, ಈ ಪೈಕಿ 48 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ರುಪಾಯಿಗೆ ನಿಗದಿ ಮಾಡಿಕೊಂಡಿದ್ದರೆ, 20 ಆಟಗಾರರು 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದಾರೆ. ಇನ್ನು 34 ಆಟಗಾರರ ಮೂಲ ಬೆಲೆ 1 ಕೋಟಿ ರುಪಾಯಿ ಇದೆ. ಐಪಿಎಲ್ 2022 ರ ಮೆಗಾ ಹರಾಜಿನ ಒಂದು ದಿನ ಮುನ್ನ ಬಿಸಿಸಿಐ ಹರಾಜು ರಿಜಿಸ್ಟರ್‌ಗೆ ಮತ್ತೆ 10 ಹೆಸರುಗಳನ್ನು ಸೇರಿಸಿದೆ, ಇದರೊಂದಿಗೆ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಸಂಖ್ಯೆ 600ಕ್ಕೆ ಏರಿದೆ. ಆರನ್ ಹಾರ್ಡಿ, ಲ್ಯಾನ್ಸ್ ಮೋರಿಸ್, ನಿವೇತನ್ ರಾಧಾಕೃಷ್ಣನ್, ಅಗ್ನಿವೇಶ್ ಅಯಾಚಿ, ಹಾರ್ದಿಕ್ ತಮೋರ್, ನಿತೀಶ್ ಕುಮಾರ್ ರೆಡ್ಡಿ, ಮಿಹಿರ್ ಹಿರ್ವಾನಿ, ಮೋನು ಕುಮಾರ್, ರೋಹನ್ ರಾಣಾ, ಸಾಯಿರಾಜ್ ಪಾಟೀಲ್ ಸೇರ್ಪಡೆಗೊಂಡ ಆಟಗಾರರು. ಹಾರ್ಡಿ, ಮೋರಿಸ್ ಮತ್ತು ರಾಧಾಕೃಷ್ಣನ್ ಆಸ್ಟ್ರೇಲಿಯಾದವರಾಗಿದ್ದರೆ, ಉಳಿದವರೆಲ್ಲರೂ ಭಾರತದ ಆಟಗಾರರಾಗಿದ್ದಾರೆ. 2022: ಮೊದಲಿಗೆ ಹರಾಜಿಗೆ ಬರಲಿದ್ದಾರೆ ಈ 10 ಸ್ಟಾರ್ ಕ್ರಿಕೆಟಿಗರು..!ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯರು ಹರಾಜಿಗಿಲ್ಲಬಿಸಿಸಿಐ () ನಿಯಮದ ಕಾರಣ ಇತ್ತೀಚೆಗೆ ವೆಸ್ಟ್ ಇಂಡೀಸ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಜಯಿಸಿದ ಭಾರತ ತಂಡದ ಪ್ರಮುಖ ಆಟಗಾರರು ಈ ಬಾರಿ ಹರಾಜಿನಲ್ಲಿ ಇರುವುದಿಲ್ಲ. ಭಾರತದ ಅಂಡರ್ 19 ತಂಡದ ಉಪನಾಯಕ ಶೇಕ್ ರಶೀದ್ ( ), ವಿಕೆಟ್‌ಕೀಪರ್ ದಿನೇಶ್ ಬಾನಾ ( ), ರವಿಕುಮಾರ್ ( ), ನಿಶಾಂತ್ ಸಿಂಧು ( ), ಆಂಗ್‌ಕ್ರಿಶ್ ರಘುವಂಶಿ ( ), ಮಾನವ್ ಪರಾಖ್ ( ), ಗರ್ವ್ ಸಾಂಗ್ವಾನ್ ( ), ಸಿದ್ಧಾರ್ಥ್ ಯಾದವ್ ( ), ಆರಾಧ್ಯ ಯಾದವ್ ( ) ಹೆಸರು ಹರಾಜು ಪಟ್ಟಿಯಲ್ಲಿ ಇರುವುದಿಲ್ಲ. ಅಂಡರ್ 19 ಪ್ಲೇಯರ್ ಗಳು ಹರಾಜಿನಲ್ಲಿ ಭಾಗಿಯಾಗಲು, ಕನಿಷ್ಠ ಒಂದು ಪ್ರಥಮ ದರ್ಜೆ ಪಂದ್ಯ ಅಥವಾ ಲಿಸ್ಟ್ ಎ ಪಂದ್ಯವನ್ನು ಆಡಿರಬೇಕು ಎಂದು ಬಿಸಿಸಿಐ ಹೇಳಿದೆ. ದೇಶೀಯ ಕ್ರಿಕೆಟ್ ನಲ್ಲಿ ಆಡಿದ ಅನುಭವ ಇಲ್ಲದೇ ಇದ್ದಲ್ಲಿ ಆಯಾ ಆಟಗಾರ ಹರಾಜು ನಡೆಯುವ ಮುನ್ನ 19 ವರ್ಷ ವಯಸ್ಸಿನವರಾಗಿರಬೇಕು ಎಂದು ಬಿಸಿಸಿಐ ಹೇಳಿದೆ.ಈ ಬಾರಿಯಿಂದ ಟಾಟಾ ಐಪಿಎಲ್:ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಈ ಬಾರಿ ಬದಲಾಗಿದೆ. ಇಲ್ಲಿವರೆಗೂ ವಿವೋ ಐಪಿಎಲ್ ಹೆಸರಿನಿಂದ ಗುರುತಿಸಿಕೊಂಡಿದ್ದ ಟೂರ್ನಿ ಈ ಬಾರಿಯಿಂದ ಟಾಟಾ ಐಪಿಎಲ್ ಎನ್ನುವ ಹೆಸರಿನಲ್ಲಿ ಗುರುತಿಸಿಕೊಳ್ಳಲಿದೆ. 2022ರ ಆವೃತ್ತಿಗೂ ಮುನ್ನ ಐಪಿಎಲ್ ನ ಟೈಟಲ್ ಸ್ಪಾನ್ಸರ್ ಆಗಿದ್ದ ವಿವೋ ತನ್ನ ಪ್ರಾಯೋಜಕತ್ವ ಒಪ್ಪಂದವನ್ನು ಟಾಟಾಗೆ ನೀಡಿದ್ದು, ಐಪಿಎಲ್ ಆಡಳಿತ ಮಂಡಳಿ ಕೂಡ ಇದಕ್ಕೆ ಅನುಮೋದನೆ ನೀಡಿದೆ.ಐಪಿಎಲ್ ಆಟಗಾರರ ಹರಾಜು ಎರಡು ದಿನಗಳ ಕಾಲ ನಡೆಯಲಿದ್ದು, ಮಿಲಿಯನ್ ಡಾಲರ್ ಕ್ರಿಕೆಟ್‌ ಟೂರ್ನಿಯ ಮೆಗಾ ಹರಾಜಿಗೆ ಬೆಂಗಳೂರಿನ ಖಾಸಗಿ ಹೋಟೆಲ್‌ ಆತಿಥ್ಯ ವಹಿಸಿದೆ. ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳಲಿದ್ದು, ಇದರಲ್ಲಿ 380 ಭಾರತೀಯ ಹಾಗೂ 220 ವಿದೇಶಿ ಆಟಗಾರರಾಗಿದ್ದಾರೆ. 228 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾರೆ. 355 ಆಟಗಾರರು ಈ ವರೆಗೂ ಅಂ.ರಾ.ಕ್ರಿಕೆಟ್‌ನಲ್ಲಿ ಆಡಿಲ್ಲ. ಐಸಿಸಿ ಅಸೋಸಿಯೇಟ್‌ ರಾಷ್ಟ್ರಗಳ ಒಟ್ಟು 7 ಆಟಗಾರರು ಹರಾಜಿನಲ್ಲಿದ್ದಾರೆ.