2022: ಇಂದು, ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ ಐಪಿಎಲ್ ಮೆಗಾ ಹರಾಜು..! * ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭ * ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಟಗಾರರ ಹರಾಜು ಫೆಬ್ರವರಿ 12 ಹಾಗೂ 13ರಂದು ನಡೆಯಲಿದೆ. * ಹರಾಜಿನಲ್ಲಿ ಒಟ್ಟು 600 ಆಟಗಾರರು ಭಾಗಿ ಬೆಂಗಳೂರು(ಫೆ.12): ಬಹುನಿರೀಕ್ಷಿತ ಐಪಿಎಲ್‌ ಆಟಗಾರರ ಮೆಗಾ ಹರಾಜು ( 2022) ಪ್ರಕ್ರಿಯೆ ಶನಿವಾರ ಮತ್ತು ಭಾನುವಾರ ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ನಡೆಯಲಿದೆ. ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಹಾಗೂ ಅಹಮದಾಬಾದ್‌ ಸೇರಿ ಒಟ್ಟು 10 ಫ್ರಾಂಚೈಸಿಗಳು ಕೋಟಿ ಕೋಟಿ ರು. ಹಣ ಖರ್ಚು ಮಾಡಿ ಬಲಿಷ್ಠ ತಂಡ ಕಟ್ಟಲು ಎದುರು ನೋಡುತ್ತಿವೆ. ಈ ವರ್ಷ ಹರಾಜಿನಲ್ಲಿ ಹಲವು ಆಟಗಾರರು ಕೋಟ್ಯಧಿಪತಿಗಳಾಗಲಿದ್ದಾರೆ. ಕನಿಷ್ಠ 10 ಆಟಗಾರರು 10 ಕೋಟಿ ರು.ಗಿಂತ ಹೆಚ್ಚು ಮೊತ್ತಕ್ಕೆ ಬಿಡ್‌ ಆಗುವ ನಿರೀಕ್ಷೆ ಇದೆ. ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಆಟಗಾರರ ಮೌಲ್ಯ 20 ಕೋಟಿ ರು. ತಲುಪಿದರೂ ಅಚ್ಚರಿಯಿಲ್ಲ. ಶನಿವಾರ 161 ಆಟಗಾರರ ಹರಾಜು ನಡೆಯಲಿದ್ದು, ಭಾನುವಾರ ಉಳಿದ ಆಟಗಾರರ ಹರಾಜು ನಡೆಯಲಿದೆ. ಒಂದು ತಂಡ ಗರಿಷ್ಠ 90 ಕೋಟಿ ರು. ಖರ್ಚು ಮಾಡಬಹುದಾಗಿದ್ದು, ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಗೆ ಈಗಾಗಲೇ ತಂಡಗಳು ಒಂದಷ್ಟುಹಣ ವೆಚ್ಚ ಮಾಡಿವೆ. ಸೂಪರ್‌ ಸ್ಟಾರ್‌ಗಳಾದ ಎಂ.ಎಸ್‌.ಧೋನಿ ( ), ವಿರಾಟ್‌ ಕೊಹ್ಲಿ ( ), ರೋಹಿತ್‌ ಶರ್ಮಾ ( ) ಅವರನ್ನು ಅವರವರ ತಂಡಗಳು ಈಗಾಗಲೇ ರೀಟೈನ್‌ ಮಾಡಿಕೊಂಡಿವೆ. ಕೆ.ಎಲ್‌.ರಾಹುಲ್‌( ), ರಿಷಭ್‌ ಪಂತ್‌ ( ), ಶುಭ್‌ಮನ್‌ ಗಿಲ್‌ ಸಹ ಹರಾಜಿಗೆ ಲಭ್ಯರಿಲ್ಲ. ಹೀಗಾಗಿ ಎಲ್ಲರ ಕಣ್ಣು ಶ್ರೇಯಸ್‌ ಅಯ್ಯರ್‌ ( ), ಇಶಾನ್‌ ಕಿಶನ್‌ ( ), ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌, ಯಜುವೇಂದ್ರ ಚಹಲ್‌ ಸೇರಿ ಹಲವು ಭಾರತೀಯ ತಾರೆಯರು, ಡೇವಿಡ್‌ ವಾರ್ನರ್‌( ), ಜೇಸನ್‌ ಹೋಲ್ಡರ್‌, ಜಾನಿ ಬೇರ್‌ಸ್ಟೋವ್‌ ಸೇರಿ ಕೆಲ ಪ್ರಮುಖ ವಿದೇಶಿ ಆಟಗಾರರ ಮೇಲಿದೆ. 2022: ಮೆಗಾ ಹರಾಜಿಗಾಗಿ ಬೆಂಗಳೂರಿಗೆ ಬಂದಿಳಿದ ಫ್ರಾಂಚೈಸಿಗಳು..! ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳಲಿದ್ದು, ಇದರಲ್ಲಿ 380 ಭಾರತೀಯ ಹಾಗೂ 220 ವಿದೇಶಿ ಆಟಗಾರರಾಗಿದ್ದಾರೆ. 228 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾರೆ. 355 ಆಟಗಾರರು ಈ ವರೆಗೂ ಅಂ.ರಾ.ಕ್ರಿಕೆಟ್‌ನಲ್ಲಿ ಆಡಿಲ್ಲ. ಐಸಿಸಿ ಅಸೋಸಿಯೇಟ್‌ ರಾಷ್ಟ್ರಗಳ ಒಟ್ಟು 7 ಆಟಗಾರರು ಹರಾಜಿನಲ್ಲಿದ್ದಾರೆ. 48 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ರು.ಗೆ ನಿಗದಿ ಮಾಡಿಕೊಂಡಿದ್ದರೆ, 20 ಆಟಗಾರರು 1.5 ಕೋಟಿ ರು. ಮೂಲಬೆಲೆ ಹೊಂದಿದ್ದಾರೆ. 34 ಆಟಗಾರರ ಮೂಲ ಬೆಲೆ 1 ಕೋಟಿ ರು. ಇದೆ. ವಿದೇಶಿ ಆಟಗಾರರಿಗೂ ಇರಲಿದೆ ಭಾರೀ ಬೇಡಿಕೆ ಡೇವಿಡ್‌ ವಾರ್ನರ್‌, ಕ್ವಿಂಟನ್‌ ಡಿ ಕಾಕ್‌, ಕಗಿಸೋ ರಬಾಡ( ), ಜೇಸನ್‌ ಹೋಲ್ಡರ್‌, ಜೇಸನ್‌ ರಾಯ್‌, ಜಾನಿ ಬೇರ್‌ಸ್ಟೋವ್‌, ಪ್ಯಾಟ್‌ ಕಮಿನ್ಸ್‌ ಸೇರಿ ಇನ್ನೂ ಅನೇಕ ವಿದೇಶಿ ಆಟಗಾರರು ಹರಾಜಿಗೆ ಲಭ್ಯರಿದ್ದು ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದೆ. 2022: ಮೆಗಾ ಹರಾಜು ಆರಂಭ ಎಷ್ಟು ಗಂಟೆಯಿಂದ..? ಇಲ್ಲಿದೆ ಉತ್ತರ ಹರಾಜಿಗೆ 17ರ ನೂರ್‌, 43ರ ಇಮ್ರಾನ್‌ ತಾಹಿರ್‌! ಈ ವರ್ಷ ಐಪಿಎಲ್‌ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಅತಿಕಿರಿಯ ಆಟಗಾರ ಎಂದರೆ ಅದು ಅಷ್ಘಾನಿಸ್ತಾನದ 17 ವರ್ಷದ ಸ್ಪಿನ್ನರ್‌ ನೂರ್‌ ಅಹ್ಮದ್‌. ದ.ಆಫ್ರಿಕಾದ 43 ವರ್ಷದ ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಅತಿಹಿರಿಯ ಆಟಗಾರ ಎನಿಸಿದ್ದಾರೆ. ಹರಾಜು ಆರಂಭ: ಮಧ್ಯಾಹ್ನ 12ಕ್ಕೆನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌