2022 : ಇಶಾನ್ ಕಿಶನ್ ಗೆ ಪಟ್ಟುಬಿಡದ ಮುಂಬೈ, ದಾಖಲೆಯ ಮೊತ್ತಕ್ಕೆ ಮಾರಾಟ! ಇಶಾನ್ ಕಿಶನ್ ಗೆ ಮುಂಬೈ ಇಂಡಿಯನ್ಸ್ ಬಿಗ್ ಬಿಡ್ಪಟ್ಟು ಬಿಡದ ಪಂಜಾಬ್ ಕಿಂಗ್ಸ್ ನಿಂದಲೂ ಸಖತ್ ಫೈಟ್2022 ಐಪಿಎಲ್ ನ ಈವರೆಗಿನ ದುಬಾರಿ ಆಟಗಾರ ಬೆಂಗಳೂರು (ಫೆ. 12):ನಿರೀಕ್ಷೆಯಂತೆಯೇ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಾರ್ಖಂಡ್ ನ ಇಶಾನ್ ಕಿಶನ್ ಐಪಿಎಲ್ 2022 ಹರಾಜಿನ ಈವರೆಗಿನ ದುಬಾರಿ ಆಟಗಾರ ಎನಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ತಂಡದಿಂದ ದೊಡ್ಡ ಮೊತ್ತದ ಬಿಡ್ ಪಡೆದುಕೊಂಡ ಇಶಾನ್ ಕಿಶನ್ 15. 25 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾದರು.2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಇಶಾನ್ ಕಿಶನ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಶತಾಯಗತಾಯ ಇಶಾನ್ ಕಿಶನ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಪೈಪೋಟಿ ನಡೆಸಿದ್ದ ಆರಂಭದಿಂದಲೂ ದೊಡ್ಡ ಮೊತ್ತದ ಬಿಡ್ ಮಾಡಿ ಗಮನಸೆಳೆಯಿತು. ಇದರ ನಡುವೆ ಇಶಾನ್ ಕಿಶನ್ ಖರೀದಿಸಲು 14.50 ಕೋಟಿ ರುಪಾಯಿ ಬಿಡ್‌ ಮಾಡಿ ಸನ್‌ರೈಸರ್ಸ್‌ ಹೈದರಾಬಾದ್ ಅಚ್ಚರಿ ಮೂಡಿಸಿತು. 2022 : ಶ್ರೇಯಸ್ ಅಯ್ಯರ್ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜು, ಹರ್ಷಲ್ 10.75 ಕೋಟಿಗೆ ಮಾರಾಟ!...ಐಪಿಎಲ್ ಹರಾಜಿನಲ್ಲಿ ಈವರೆಗೂ 15 ಕೋಟಿ ಮೊತ್ತದ ಗಡಿ ದಾಟಿದ ಕೆಲವೇ ಕೆಲವು ಪ್ಲೇಯರ್ ಗಳಲ್ಲಿ ಇಶಾನ್ ಕಿಶನ್ ಒಬ್ಬರಾಗಿದ್ದಾರೆ. ಯುವರಾಜ್ ಸಿಂಗ್ 16 ಕೋಟಿಗೆ ಮಾರಾಟವಾಗಿದ್ದರೆ, ಕ್ರಿಸ್ ಮೊರಿಸ್ 16.25 ಕೋಟಿ ರೂಪಾಯಿಗೆ ಖರೀದಿಯಾಗಿದ್ದರು. ಆದರೆ, ಬೆನ್ ಸ್ಟೋಕ್ಸ್ ಅವರ 14.50 ಕೋಟಿ ರೂಪಾಯಿ ದಾಖಲೆಯನ್ನು ಇಶಾನ್ ಕಿಶನ್ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. 2016ರ ಐಪಿಎಲ್ ನಲ್ಲ 35 ಲಕ್ಷಕ್ಕೆ ಮಾರಾಟವಾಗಿದ್ದ ಇಶಾನ್ ಕಿಶನ್,2018ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 6.2 ಕೋಟಿ ರೂಪಾಯಿಗೆ ಸೇರಿದ್ದರು, ಈಗ ಅದೇ ತಂಡಕ್ಕೆ ದುಪ್ಪಟ್ಟುಮೊತ್ತಕ್ಕಿಂತಲೂ ಅಧಿಕ ಬೆಲೆಗೆ ಇಶಾನ್ ಕಿಶನ್ ಸೇರಿದ್ದಾರೆ.ಐಪಿಎಲ್‌ ಮೆಗಾ ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳುತ್ತಿದ್ದು, ಈ ಪೈಕಿ 48 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ರುಪಾಯಿಗೆ ನಿಗದಿ ಮಾಡಿಕೊಂಡಿದ್ದರೆ, 20 ಆಟಗಾರರು 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದಾರೆ. ಇನ್ನು 34 ಆಟಗಾರರ ಮೂಲ ಬೆಲೆ 1 ಕೋಟಿ ರುಪಾಯಿ ಇದೆ. ಐಪಿಎಲ್ 2022 ರ ಮೆಗಾ ಹರಾಜಿನ ಒಂದು ದಿನ ಮುನ್ನ ಬಿಸಿಸಿಐ ಹರಾಜು ರಿಜಿಸ್ಟರ್‌ಗೆ ಮತ್ತೆ 10 ಹೆಸರುಗಳನ್ನು ಸೇರಿಸಿದೆ, ಇದರೊಂದಿಗೆ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಸಂಖ್ಯೆ 600ಕ್ಕೆ ಏರಿದೆ. ಆರನ್ ಹಾರ್ಡಿ, ಲ್ಯಾನ್ಸ್ ಮೋರಿಸ್, ನಿವೇತನ್ ರಾಧಾಕೃಷ್ಣನ್, ಅಗ್ನಿವೇಶ್ ಅಯಾಚಿ, ಹಾರ್ದಿಕ್ ತಮೋರ್, ನಿತೀಶ್ ಕುಮಾರ್ ರೆಡ್ಡಿ, ಮಿಹಿರ್ ಹಿರ್ವಾನಿ, ಮೋನು ಕುಮಾರ್, ರೋಹನ್ ರಾಣಾ, ಸಾಯಿರಾಜ್ ಪಾಟೀಲ್ ಸೇರ್ಪಡೆಗೊಂಡ ಆಟಗಾರರು. ಹಾರ್ಡಿ, ಮೋರಿಸ್ ಮತ್ತು ರಾಧಾಕೃಷ್ಣನ್ ಆಸ್ಟ್ರೇಲಿಯಾದವರಾಗಿದ್ದರೆ, ಉಳಿದವರೆಲ್ಲರೂ ಭಾರತದ ಆಟಗಾರರಾಗಿದ್ದಾರೆ. 2022 : ಶ್ರೀಲಂಕಾದ ಈವರೆಗಿನ ದುಬಾರಿ ಆಟಗಾರ ವಾನಿಂದು, ಇಷ್ಟು ಮೊತ್ತ ಕೊಟ್ಟಿದ್ದೇಕೆ?ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯರು ಹರಾಜಿಗಿಲ್ಲಬಿಸಿಸಿಐ () ನಿಯಮದ ಕಾರಣ ಇತ್ತೀಚೆಗೆ ವೆಸ್ಟ್ ಇಂಡೀಸ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಜಯಿಸಿದ ಭಾರತ ತಂಡದ ಪ್ರಮುಖ ಆಟಗಾರರು ಈ ಬಾರಿ ಹರಾಜಿನಲ್ಲಿ ಇರುವುದಿಲ್ಲ. ಭಾರತದ ಅಂಡರ್ 19 ತಂಡದ ಉಪನಾಯಕ ಶೇಕ್ ರಶೀದ್ ( ), ವಿಕೆಟ್‌ಕೀಪರ್ ದಿನೇಶ್ ಬಾನಾ ( ), ರವಿಕುಮಾರ್ ( ), ನಿಶಾಂತ್ ಸಿಂಧು ( ), ಆಂಗ್‌ಕ್ರಿಶ್ ರಘುವಂಶಿ ( ), ಮಾನವ್ ಪರಾಖ್ ( ), ಗರ್ವ್ ಸಾಂಗ್ವಾನ್ ( ), ಸಿದ್ಧಾರ್ಥ್ ಯಾದವ್ ( ), ಆರಾಧ್ಯ ಯಾದವ್ ( ) ಹೆಸರು ಹರಾಜು ಪಟ್ಟಿಯಲ್ಲಿ ಇರುವುದಿಲ್ಲ. ಅಂಡರ್ 19 ಪ್ಲೇಯರ್ ಗಳು ಹರಾಜಿನಲ್ಲಿ ಭಾಗಿಯಾಗಲು, ಕನಿಷ್ಠ ಒಂದು ಪ್ರಥಮ ದರ್ಜೆ ಪಂದ್ಯ ಅಥವಾ ಲಿಸ್ಟ್ ಎ ಪಂದ್ಯವನ್ನು ಆಡಿರಬೇಕು ಎಂದು ಬಿಸಿಸಿಐ ಹೇಳಿದೆ. ದೇಶೀಯ ಕ್ರಿಕೆಟ್ ನಲ್ಲಿ ಆಡಿದ ಅನುಭವ ಇಲ್ಲದೇ ಇದ್ದಲ್ಲಿ ಆಯಾ ಆಟಗಾರ ಹರಾಜು ನಡೆಯುವ ಮುನ್ನ 19 ವರ್ಷ ವಯಸ್ಸಿನವರಾಗಿರಬೇಕು ಎಂದು ಬಿಸಿಸಿಐ ಹೇಳಿದೆ.