: ಬೆಂಗಳೂರು ಬುಲ್ಸ್‌ಗಿಂದು ಮಾಡು ಇಲ್ಲವೇ ಮಡಿ ಪಂದ್ಯ..! * ಮಹತ್ವದ ಪಂದ್ಯಕ್ಕೆ ಸಜ್ಜಾದ ಬೆಂಗಳೂರು ಬುಲ್ಸ್ ತಂಡ * ಬುಲ್ಸ್‌ ಪಡೆಗಿಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಜೈಪುರ ಸವಾಲು * ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಪವನ್ ಶೆರಾವತ್ ಪಡೆಗಿಂದು ಮಹತ್ವದ ಪಂದ್ಯ ಬೆಂಗಳೂರು: ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ ( ) ಪ್ಲೇ-ಆಫ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಬೆಂಗಳೂರು ಬುಲ್ಸ್‌ ( ) ಬಾಕಿ ಇರುವ ಮೂರೂ ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಶುಕ್ರವಾರ ಜೈಪುರ ಪಿಂಕ್‌ ಪ್ಯಾಂಥ​ರ್ಸ್‌ ( ) ತಂಡವನ್ನು ಎದುರಿಸಲಿರುವ ಬುಲ್ಸ್‌ಗೆ ಮುಂದಿನ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ಎದುರಾಗಲಿದೆ. ಈಗಾಗಲೇ 19 ಪಂದ್ಯಗಳನ್ನು ಆಡಿರುವ ಬುಲ್ಸ್‌ 9 ಗೆಲುವುಗಳೊಂದಿಗೆ ಒಟ್ಟು 55 ಅಂಕ ಕಲೆಹಾಕಿದೆ. ಇತರೆ ತಂಡಗಳು ಬುಲ್ಸ್‌ಗಿಂತ ಕಡಿಮೆ ಪಂದ್ಯಗಳನ್ನಾಡಿದ್ದು, ಅಂಕಗಳ ಅಂತರವೂ ಹೆಚ್ಚಿಲ್ಲ. ಹೀಗಾಗಿ, ಕೊನೆ ಮೂರೂ ಪಂದ್ಯಗಳನ್ನು ಬುಲ್ಸ್‌ ಗೆಲ್ಲದಿದ್ದರೆ ಲೀಗ್‌ ಹಂತದಲ್ಲೇ ಹೊರಬೀಳುವ ಆತಂಕ ಎದುರಾಗಿದೆ. ಪಾಟ್ನಾಗೆ ಜಯ:ಗುರುವಾರ ನಡೆದ ಪುಣೇರಿ ಪಲ್ಟನ್‌ ವಿರುದ್ಧದ ಪಂದ್ಯವನ್ನು 43-26ರಲ್ಲಿ ಗೆದ್ದ ಪಾಟ್ನಾ ಪೈರೇಟ್ಸ್‌ ಮೊದಲ ಸ್ಥಾನ ಕಾಯ್ದುಕೊಂಡಿದೆ. ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಹಾಗೂ ಬೆಂಗಾಲ್‌ ಬೆಂಗಾಲ್‌ 39-39ರಲ್ಲಿ ಟೈಗೆ ಸಮಾಧಾನಪಟ್ಟವು. ಬೆಂಗಳೂರು ಓಪನ್‌ ಟೆನಿಸ್‌: ಸೆಮೀಸ್‌ಗೆ ಸಾಕೇತ್‌-ರಾಮ್‌ ಬೆಂಗಳೂರು: ಎಟಿಪಿ ಬೆಂಗಳೂರು ಓಪನ್‌ ( ) ಟೆನಿಸ್‌ ಟೂರ್ನಿಯಲ್ಲಿ ಭಾರತದ ಸಾಕೇತ್‌ ಮೈನೇನಿ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಜೋಡಿ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದೆ. ಗುರುವಾರ ಕೆನಡಾದ ಸ್ಟೀವನ್‌ ಡಯಾಜ್‌, ಟ್ಯುನಿಶಿಯಾದ ಮಾಲೆಕ್‌ ಜಝೀರಿ ಪಂದ್ಯದಿಂದ ಹಿಂದೆ ಸರಿದಿದ್ದರಿಂದ ಸಾಕೇತ್‌-ರಾಮ್‌ಗೆ ವಾಕ್‌ ಓವರ್‌ ದೊರೆಯಿತು. ಇನ್ನುಳಿದ ಪಂದ್ಯಗಳಲ್ಲಿ ಗುರುವಾರ ಭಾರತೀಯರಿಗೆ ನಿರಾಸೆ ಉಂಟಾಯಿತು. ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ಪ್ರಜ್ನೇಶ್‌ ಗುಣೇಶ್ವರನ್‌, ಅಗ್ರ ಶ್ರೇಯಾಂಕಿತ ಚೆಕ್‌ ಗಣರಾಜ್ಯದ ಜಿರಿ ವೆಸ್ಲೆ ವಿರುದ್ಧ 6-3, 2-6, 1-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತೀಯರು ಸವಾಲು ಅಂತ್ಯಗೊಂಡಿತು. ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಪೂರವ್‌ ರಾಜಾ-ಜೀವನ್‌, ವಿಷ್ಣುವರ್ಧನ್‌-ಶ್ರೀರಾಮ್‌, ಯೂಕಿ ಭಾಂಬ್ರಿ-ದಿವಿಜ್‌ ಶರಣ್‌ ಜೋಡಿ ಸೋಲುಂಡಿತು. ಪ್ರೊ ಲೀಗ್ ಹಾಕಿ: 10-2ರಲ್ಲಿ ಗೆದ್ದ ಭಾರತ ಕೇಪ್‌ಟೌನ್‌: ಭಾರತ ಪುರುಷರ ತಂಡ 2021-22ರ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ( ) ದಕ್ಷಿಣ ಆಫ್ರಿಕಾ ವಿರುದ್ದ 10-2 ಗೋಲುಗಳಿಂದ ಭರ್ಜರಿ ಜಯ ಗಳಿಸಿದೆ. ಸತತ ಎರಡನೇ ಗೆಲುವು ಸಾಧಿಸಿದ ಭಾರತ, ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. : ದಾವಣಗೆರೆ ಮಣಿಸಿ ಬೆಂಗಳೂರು ಪೊಲೀಸರು ಕಬಡ್ಡಿ ಚಾಂಪಿಯನ್ಸ್ ಬುಧವಾರ ನಡೆದ ಪಂದ್ಯದಲ್ಲಿ ಭಾರತ ಪರ ಜುಗ್‌ರಾಜ್ ಸಿಂಗ್ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಗುರ್‌ಸಹಿಬ್ಜಿತ್ , ದಿಲ್ಪ್ರೀತ್ ಸಿಂಗ್ ತಲಾ 2, ಹರ್ಮನ್‌ಪ್ರೀತ್, ಅಭಿಷೇಕ್, ಮನ್ದೀಪ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸುವ ಮೂಲಕ ಭಾರತ ಹಾಕಿ ತಂಡವು ಭಾರೀ ಅಂತರದ ಗೆಲುವು ಸಾಧಿಸಲು ಕಾರಣರಾದರು. ಇನ್‌ಸ್ಟಾನಲ್ಲಿ ರೊನಾಲ್ಡೋಗೆ 40 ಕೋಟಿ ಹಿಂಬಾಲಕರು! ನವದೆಹಲಿ: ವಿಶ್ವದ ಶ್ರೀಮಂತ ಫುಟ್ಬಾಲಿಗ, ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ( ), ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ 40 ಕೋಟಿ ಹಿಂಬಾಲಕರನ್ನು ಹೊಂದಿದ ವಿಶ್ವದ ಮೊದಲ ವ್ಯಕ್ತಿ ಎನ್ನುವ ದಾಖಲೆ ಬರೆದಿದ್ದಾರೆ. ಅಮೆರಿಕದ ಮಾಡೆಲ್‌ ಕೈಲಿ ಜೆನ್ನೆರ್‌ 30.9 ಕೋಟಿ ಹಾಗೂ ಅರ್ಜೆಂಟೀನಾದ ಫುಟ್ಬಾಲಿಗ ಲಿಯೋನೆಲ್‌ ಮೆಸ್ಸಿ 30.6 ಕೋಟಿ ಹಿಂಬಾಲಕರೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ 23.7 ಕೋಟಿ ಹಿಂಬಾಲಕರನ್ನು ಹೊಂದಿದ್ದ ರೊನಾಲ್ಡೋ ಕೇವಲ 5 ತಿಂಗಳಲ್ಲಿ 40 ಕೋಟಿ ಮೈಲಿಗಲ್ಲು ತಲುಪಿದ್ದಾರೆ. ಮಾ.5ರಿಂದ ಬೆಂಗ್ಳೂರಲ್ಲಿ ಅಂಡರ್‌-15 ಫುಟ್ಬಾಲ್‌ ಬೆಂಗಳೂರು: 7ನೇ ಆವೃತ್ತಿಯ ಬಾಲಕರ ಹಾಗೂ 5ನೇ ಆವೃತ್ತಿಯ ಬಾಲಕಿಯರ ಆಲ್‌ ಇಂಡಿಯಾ ಅಂಡರ್‌-15 ಫುಟ್ಬಾಲ್‌ ಟೂರ್ನಿ ಬೆಂಗಳೂರಿನಲ್ಲಿ ಮಾರ್ಚ್‌ 5 ಮತ್ತು 6ಕ್ಕೆ ನಡೆಯಲಿದೆ. ನಗರದ ಎಫ್‌ಎಸ್‌ವಿ ಅರೇನಾದಲ್ಲಿ ಪಂದ್ಯಾವಳಿ ನಡೆಯಲಿದ್ದು, ಹೆಸರು ನೋಂದಾಯಿಸಲು ಫೆ.16 ಕೊನೆ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ 8095810030 ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.