: ಶಿಖರ್ ಧವನ್, ಶ್ರೇಯಸ್‌ ಅಯ್ಯರ್ ಕೋವಿಡ್ ಟೆಸ್ಟ್ ನೆಗೆಟಿವ್, ಅಭ್ಯಾಸ ಆರಂಭ * ಕೋವಿಡ್‌ನಿಂದ ಗುಣಮುಖರಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್ * ವಿಂಡೀಸ್‌ ಸರಣಿಗೂ ಮುನ್ನ ಟೀಂ ಇಂಡಿಯಾ ಪಾಳಯದಲ್ಲಿ ಕೋವಿಡ್ ಭೀತಿ ಎದುರಾಗಿತ್ತು. * ಕೋವಿಡ್‌ನಿಂದ ಚೇತರಿಸಿಕೊಂಡಿದ್ದರೂ ಸಹಾ ಈ ಇಬ್ಬರು ಆಟಗಾರರು ಎರಡನೇ ಪಂದ್ಯಕ್ಕೆ ಅಲಭ್ಯ ಅಹಮದಾಬಾದ್‌(ಫೆ.08): ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೂ ಮುನ್ನ ಕೋವಿಡ್‌ ಭೀತಿ ಎದುರಿಸಿದ್ದ ಟೀಂ ಇಂಡಿಯಾ ( ) ಪಾಲಿಗೆ ಇದೀಗ ಸಮಾಧಾನಕರವಾದ ಸುದ್ದಿಯೊಂದು ಹೊರಬಿದ್ದಿದ್ದು, ಭಾರತ ಕ್ರಿಕೆಟ್ ತಂಡದ ( ) ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ( ) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್ ಅಯ್ಯರ್ ( ) ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಇದೀಗ ಈ ಇಬ್ಬರು ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ವೆಸ್ಟ್‌ ಇಂಡೀಸ್ ವಿರುದ್ದದ ಸರಣಿಗೂ ಮುನ್ನ ಶಿಖರ್ ಧವನ್‌, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್‌, ನವದೀಪ್ ಸೈನಿ ಜತೆಗೆ ನಾಲ್ವರು ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ 19 ( 19) ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಇವರೆಲ್ಲರೂ ಐಸೋಲೇಷನ್‌ಗೆ ಒಳಗಾಗಿದ್ದರು ಹಾಗೂ ವೆಸ್ಟ್ ಇಂಡೀಸ್ ವಿರುದ್ದ ಫೆಬ್ರವರಿ 06ರಂದು ನಡೆದ ಪಂದ್ಯದಿಂದ ಹೊರಬಿದ್ದಿದ್ದರು. ಇದೀಗ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಅವರ ಕೋವಿಡ್ ಟೆಸ್ಟ್ ( ) ರಿಪೋರ್ಟ್ ನೆಗೆಟಿವ್ ಬಂದಿದ್ದರೂ ಸಹಾ ವೆಸ್ಟ್ ಇಂಡೀಸ್ ವಿರುದ್ದ ಫೆಬ್ರವರಿ 09ರಂದು ನಡೆಯಲಿರುವ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದರ ಹೊರತಾಗಿಯೂ ಮೊಟೇರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ( ) ಈ ಆಟಗಾರರು ಅಭ್ಯಾಸವನ್ನು ಆರಂಭಿಸಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ( ) ತಂಡಗಳ ನಡುವಿನ ಮೂರು ಪಂದ್ಯಗಳ ಸಂಪೂರ್ಣ ಏಕದಿನ ಸರಣಿಗೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಈ ಇಬ್ಬರು ಆಟಗಾರರಿಗೆ ಪ್ರೋಟೋಕಾಲ್‌ನಂತೆಯೇ ಲಘು ಅಭ್ಯಾಸ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಇದರ ಹೊರತಾಗಿಯೂ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯು ಇವರ ಮೇಲೆ ನಿಗಾ ಇಟ್ಟಿದ್ದಾರೆ. ಈ ಇಬ್ಬರು ಆಟಗಾರರು ಆಯ್ಕೆಗೆ ಯಾವಾಗ ಲಭ್ಯರಾಗಲಿದ್ದಾರೆ ಎನ್ನುವುದನ್ನು ವೈದ್ಯಕೀಯ ಸಿಬ್ಬಂದಿಗಳು ತಿಳಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ದ ಹಿಂದೂ ವೆಬ್‌ಸೈಟ್ ವರದಿ ಮಾಡಿದೆ. : 2ನೇ ಏಕದಿನಕ್ಕೆ ತಂಡ ಕೂಡಿಕೊಂಡ ರಾಹುಲ್‌, ಮಯಾಂಕ್‌ ಕಠಿಣ ಅಭ್ಯಾಸ ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಈ ಇಬ್ಬರು ಆಟಗಾರರ ಅಲಭ್ಯತೆ ಹೆಚ್ಚು ಹಿನ್ನಡೆಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯುಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್ ಹಾಗೂ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡವು ಮೊದಲ ಏಕದಿನ ಪಂದ್ಯದಲ್ಲಿ ಕೇವಲ 176 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 4 ವಿಕೆಟ್‌ ಕಳೆದುಕೊಂಡು ಅನಾಯಾಸವಾಗಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಎರಡನೇ ಏಕದಿನ ಪಂದ್ಯಕ್ಕೆ ಕೆ.ಎಲ್. ರಾಹುಲ್ ( ) ಹಾಗೂ ಮಯಾಂಕ್ ಅಗರ್‌ವಾಲ್ ( ) ಇಬ್ಬರೂ ಸಹಾ ಆಯ್ಕೆಗೆ ಲಭ್ಯರಾಗಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಜತೆ ಇಶಾನ್ ಕಿಶನ್‌ ಟೀಂ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಉಪನಾಯಕ ಕೆ.ಎಲ್. ರಾಹುಲ್‌ ಆಯ್ಕೆಗೆ ಲಭ್ಯವಾಗಿರುವುದರಿಂದ ಬಹುತೇಕ ಇಶಾನ್ ಕಿಶನ್ ಇಲ್ಲವೇ ದೀಪಕ್ ಹೂಡಾ ಈ ಇಬ್ಬರಲ್ಲಿ ಒಬ್ಬರು ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗಬಹುದು.