ನಮಗೆ ಲತಾ ಮಂಗೇಶ್ಕರ್ ಮಾತ್ರ ಗೊತ್ತು, ಪಾಕಿಸ್ತಾನಿ ಗಾಯಕಿ ಅಹಂ ಇಳಿಸಿದ್ದ ಸುನಿಲ್ ಗವಾಸ್ಕರ್! ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಅಗಲಿಕೆ ನೋವು ಭಾರತೀಯರಲ್ಲಿ ಮಡುಗಟ್ಟಿದೆ. ಇದೀಗ ಲತಾ ಮಂಗೇಶ್ಕರ್ ಕುರಿತ ಹಲವು ರೋಚಕ ವಿಚಾರಗಳು ಮತ್ತೆ ಸದ್ದು ಮಾಡುತ್ತಿದೆ. ಇದರಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪಾಕಿಸ್ತಾನ ಗಾಯಕಿಗೆ ನೀಡಿದ ತಿರುಗೇಟು ವಿಡಿಯೋ ವೈರಲ್ ಆಗಿದೆ. ಮುಂಬೈ(ಫೆ.07): ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಅಗಲಿಕೆ ನೋವು ಭಾರತೀಯರಲ್ಲಿ ಮಡುಗಟ್ಟಿದೆ. ಇದೀಗ ಲತಾ ಮಂಗೇಶ್ಕರ್ ಕುರಿತ ಹಲವು ರೋಚಕ ವಿಚಾರಗಳು ಮತ್ತೆ ಸದ್ದು ಮಾಡುತ್ತಿದೆ. ಇದರಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪಾಕಿಸ್ತಾನ ಗಾಯಕಿಗೆ ನೀಡಿದ ತಿರುಗೇಟು ವಿಡಿಯೋ ವೈರಲ್ ಆಗಿದೆ.ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಅಭಿವೃದ್ಧಿಗೆ 1982ರಲ್ಲಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳಿತ್ತು. ಟೀಂ ಇಂಡಿಯಾ ಮ್ಯಾನೇಜರ್ ಬರೋಡಾ ಮಹರಾಜ್ ಫತೇಸಿನ್ಹ ರಾವ್ ಗಾಯಕ್ವಾಡ್ , ಲಾಹೋರ್‌ನಲ್ಲಿ ದೊಡ್ಡ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಪಾಕಿಸ್ತಾನ ಸಿನಿ ಕ್ಷೇತ್ರದ ಸೆಲೆಬ್ರಿಟಿಗಳು, ಗಣ್ಯರು, ಉದ್ಯಮಿಗಳನ್ನು ಆಹ್ವಾನಿಸಲಾಗಿತ್ತು.ಕಾರ್ಯಕ್ರಮದಲ್ಲಿ ಬರೋಡಾ ಮಹರಾಜ್, ಪಾಕಿಸ್ತಾನ ಗಾಯಕಿ ನೂರ್ ಜೆಹಾನ್‌ಗೆ ಗವಾಸ್ಕರ್ ಅವರನ್ನು ಪರಿಚಯಿಸಿದರು. ಇವರು ನಮ್ಮ ನಾಯಕ ಸುನಿಲ್ ಗವಾಸ್ಕರ್, ನಿಮಗೆ ಗೊತ್ತಿರಬಹುದು ಎಂದು ಪರಿಚಯಿಸಿದರು. ಆದರೆ ಪಾಕ್ ಗಾಯಕಿ ನನಗೆ ಇಮ್ರಾನ್ ಖಾನ್ ಹಾಗೂ ಜಹೀರ್ ಅಬ್ಬಾಸ್ ಮಾತ್ರ ಗೊತ್ತು ಎಂದಿದ್ದರು. ಇನ್ನು ಸುನಿಲ್ ಗವಾಸ್ಕರ್‌ಗೆ ಇದು ಪಾಕ್ ಗಾಯಕಿ ನೂರ್ ಜೆಹಾನ್, ನೀವು ಕೇಳಿರಬಹುದು ಎಂದರು. ಇದಕ್ಕೆ ಉತ್ತರಿಸಿದ ಗವಾಸ್ಕರ್, ಇಲ್ಲ ನಾನು ಕೇಳಿಲ್ಲ, ನಮಗೆ ಲತಾ ಮಂಗೇಶ್ಕರ್ ಮಾತ್ರ ಗೊತ್ತು ಎಂದಿದ್ದರು. ಮುಂಬೈ(ಫೆ.07): ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಅಗಲಿಕೆ ನೋವು ಭಾರತೀಯರಲ್ಲಿ ಮಡುಗಟ್ಟಿದೆ. ಇದೀಗ ಲತಾ ಮಂಗೇಶ್ಕರ್ ಕುರಿತ ಹಲವು ರೋಚಕ ವಿಚಾರಗಳು ಮತ್ತೆ ಸದ್ದು ಮಾಡುತ್ತಿದೆ. ಇದರಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪಾಕಿಸ್ತಾನ ಗಾಯಕಿಗೆ ನೀಡಿದ ತಿರುಗೇಟು ವಿಡಿಯೋ ವೈರಲ್ ಆಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಅಭಿವೃದ್ಧಿಗೆ 1982ರಲ್ಲಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳಿತ್ತು. ಟೀಂ ಇಂಡಿಯಾ ಮ್ಯಾನೇಜರ್ ಬರೋಡಾ ಮಹರಾಜ್ ಫತೇಸಿನ್ಹ ರಾವ್ ಗಾಯಕ್ವಾಡ್ , ಲಾಹೋರ್‌ನಲ್ಲಿ ದೊಡ್ಡ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಪಾಕಿಸ್ತಾನ ಸಿನಿ ಕ್ಷೇತ್ರದ ಸೆಲೆಬ್ರಿಟಿಗಳು, ಗಣ್ಯರು, ಉದ್ಯಮಿಗಳನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬರೋಡಾ ಮಹರಾಜ್, ಪಾಕಿಸ್ತಾನ ಗಾಯಕಿ ನೂರ್ ಜೆಹಾನ್‌ಗೆ ಗವಾಸ್ಕರ್ ಅವರನ್ನು ಪರಿಚಯಿಸಿದರು. ಇವರು ನಮ್ಮ ನಾಯಕ ಸುನಿಲ್ ಗವಾಸ್ಕರ್, ನಿಮಗೆ ಗೊತ್ತಿರಬಹುದು ಎಂದು ಪರಿಚಯಿಸಿದರು. ಆದರೆ ಪಾಕ್ ಗಾಯಕಿ ನನಗೆ ಇಮ್ರಾನ್ ಖಾನ್ ಹಾಗೂ ಜಹೀರ್ ಅಬ್ಬಾಸ್ ಮಾತ್ರ ಗೊತ್ತು ಎಂದಿದ್ದರು. ಇನ್ನು ಸುನಿಲ್ ಗವಾಸ್ಕರ್‌ಗೆ ಇದು ಪಾಕ್ ಗಾಯಕಿ ನೂರ್ ಜೆಹಾನ್, ನೀವು ಕೇಳಿರಬಹುದು ಎಂದರು. ಇದಕ್ಕೆ ಉತ್ತರಿಸಿದ ಗವಾಸ್ಕರ್, ಇಲ್ಲ ನಾನು ಕೇಳಿಲ್ಲ, ನಮಗೆ ಲತಾ ಮಂಗೇಶ್ಕರ್ ಮಾತ್ರ ಗೊತ್ತು ಎಂದಿದ್ದರು.