: 45,000 ಕೋಟಿ ರುಪಾಯಿ ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ..! * ಐಪಿಎಲ್ ಮಾಧ್ಯಮ ಹಕ್ಕು ಖರೀದಿಸಲು ಹಲವು ಕಂಪನಿಗಳ ಪೈಪೋಟಿ * ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ ಸ್ಟಾರ್‌ ನೆಟ್‌ವರ್ಕ್ ಜೊತೆ ರಿಲಯನ್ಸ್‌ ವಿಯಾಕೊಮ್‌ 18 ಸೇರಿ ಹಲವು ಸಂಸ್ಥೆಗಳ ಪೈಪೋಟಿ * ಬಿಸಿಸಿಐ ಪ್ರಸಾರ ಹಕ್ಕಿನಿಂದ 40ರಿಂದ 45,000 ಕೋಟಿ ರುಪಾಯಿ ಗಳಿಸುವ ನಿರೀಕ್ಷೆಯಲ್ಲಿದೆ ನವದೆಹಲಿ(ಫೆ.03): 2 ಹೊಸ ತಂಡಗಳ ಸೇರ್ಪಡೆಯಿಂದ ಬಂಪರ್‌ ಹಣ ಸಂಪಾದಿಸಿರುವ ಬಿಸಿಸಿಐ(), ಇದೀಗ ಐಪಿಎಲ್‌ನ ಪ್ರಸಾರ ಹಕ್ಕು ( ) ಒಪ್ಪಂದದ ಮೂಲಕ ಮತ್ತೊಮ್ಮೆ ಬಂಪರ್‌ ಹೊಡೆಯುವ ನಿರೀಕ್ಷೆಯಲ್ಲಿದೆ. ವರದಿಗಳ ಪ್ರಕಾರ ಬಿಸಿಸಿಐ ಪ್ರಸಾರ ಹಕ್ಕಿನಿಂದ 40ರಿಂದ 45,000 ಕೋಟಿ ರು. ಗಳಿಸಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಸಿಸಿಐ ಪ್ರಸಾರ ಹಕ್ಕು ಬಿಡ್‌ ವಿತರಿಸಿದ್ದು, 15ನೇ ಆವೃತ್ತಿಯ ಐಪಿಎಲ್‌ಗೂ () ಮುನ್ನ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ( ), ಡಿಸ್ನಿ ಸ್ಟಾರ್‌ ನೆಟ್‌ವರ್ಕ್ ಜೊತೆ ರಿಲಯನ್ಸ್‌ ವಿಯಾಕೊಮ್‌ 18, ಅಮೆಜಾನ್‌ ಸೇರಿದಂತೆ ಇತರೆ ಸಂಸ್ಥೆಗಳೂ ಕೂಡಾ ಪ್ರಸಾರ ಹಕ್ಕು ಪಡೆಯಲು ಪೈಪೋಟಿ ನಡೆಯುತ್ತಿದೆ. 2018-22ರ ಅವಧಿಗೆ ಪ್ರಸಾರ ಹಕ್ಕನ್ನು ಪಡೆದುಕೊಂಡಿದ್ದ ಸ್ಟಾರ್‌ ಇಂಡಿಯಾ ( ) ಸಂಸ್ಥೆ ಇದಕ್ಕಾಗಿ ಬಿಸಿಸಿಐಗೆ 16,347 ಕೋಟಿ ರುಪಾಯಿ ಪಾವತಿಸಿತ್ತು. ಅದಕ್ಕೂ ಮೊದಲು ಸೋನಿ ಪಿಕ್ಚ​ರ್ಸ್‌ ನೆಟ್‌ವರ್ಕ್ 8,200 ಕೋಟಿಗೆ ಪ್ರಸಾರ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಆದರೆ 2023-2027ರ ಅವಧಿಗೆ ಪ್ರಸಾರ ಹಕ್ಕು ಪಡೆಯುವ ಸಂಸ್ಥೆಯಿಂದ ಬಿಸಿಸಿಐ ಕಳೆದ ಬಾರಿಗಿಂತ 3 ಪಟ್ಟು ಹೆಚ್ಚಿನ ಹಣ ನಿರೀಕ್ಷಿಸುತ್ತಿದೆ. ವರದಿಗಳ ಪ್ರಕಾರ ಬಿಸಿಸಿಐ ಸುಮಾರು 45,000 ಕೋಟಿ ರುಪಾಯಿ ಪಡೆಯುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ( ) ಪ್ರಸಾರ ಹಕ್ಕಿನ ಮೂಲಕ 35,000 ಕೋಟಿ ಗಳಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದರು. ಆದರೆ 40ರಿಂದ 45,000 ಕೋಟಿ ಗಳಿಸಿದರೆ ಅಚ್ಚರಿಯಿಲ್ಲ ಎಂದು ಬಿಸಿಸಿಐ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಶ್ರೇಯಸ್‌ಗಾಗಿ ಆರ್‌ಸಿಬಿ 20 ಕೋಟಿ ತೆಗೆದಿಟ್ಟಿದೆ: ಆಕಾಶ್‌ ನವದೆಹಲಿ: ಭಾರತದ ತಾರಾ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ರನ್ನು ( ) ಹರಾಜಿನಲ್ಲಿ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) ( ) ತಂಡ ಖರೀಸುವ ಬಗ್ಗೆ ಭಾರತ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ( ) ಸುಳಿವು ನೀಡಿದ್ದಾರೆ. ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, ‘ಹರಾಜಿನಲ್ಲಿ ಶ್ರೇಯಸ್‌ 15-16 ಕೋಟಿಗೆ ಮಾರಾಟವಾಗುವ ಎಲ್ಲಾ ಸಾಧ್ಯತೆಗಳಿವೆ. ಶ್ರೇಯಸ್‌ಗಾಗಿ ಆರ್‌ಸಿಬಿ 20 ಕೋಟಿ ರು. ಮೀಸಲಿಟ್ಟಿದೆ ಎಂದು ಒಬ್ಬರು ನನಗೆ ಹೇಳಿದ್ದಾರೆ. ಕೆಕೆಆರ್‌ () ಮತ್ತು ಆರ್‌ಸಿಬಿ () ನಾಯಕನಾಗುವ ಎಲ್ಲಾ ಸಾಮರ್ಥ್ಯ ಅವರಿಗಿದೆ. ಹರಾಜಿನಲ್ಲಿ ಅವರೇ ದುಬಾರಿ ಆಟಗಾರ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. 2022: ಹರಾಜಿನಲ್ಲಿ ಪಾಲ್ಗೊಳ್ಳಲು ಕ್ರಿಸ್‌ ಗೇಲ್‌ಗೆ ಗಾಳ ಹಾಕಿದ್ದ ಫ್ರಾಂಚೈಸಿಗಳು..! 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ( ) ಕೋಲ್ಕತಾ ನೈಟ್‌ ರೈಡರ್ಸ್‌( ), ಪಂಜಾಬ್ ಕಿಂಗ್ಸ್‌( ), ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿವೆ. ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ( ) ಅವರನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಬಹುನಿರೀಕ್ಷಿತ ಐಪಿಎಲ್ ಆಟಗಾರರ ಹರಾಜು ( ) ಫೆಬ್ರವರಿ 12 ಹಾಗೂ 13ರಂದು ನಡೆಯಲಿದೆ. ಮಿಲಿಯನ್ ಡಾಲರ್‌ ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಯಾವ ಆಟಗಾರರು ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.