-19 : ಪಂದ್ಯ ನಡೆಯುತ್ತಿದ್ದ ವೇಳೆಯೇ ಭೂಕಂಪನ..! * ಅಂಡರ್ 19 ವಿಶ್ವಕಪ್ ಪಂದ್ಯ ನಡೆಯುತ್ತಿರುವಾಗಲೇ ಸಂಭವಿಸಿತು ಭೂಕಂಪ * ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಪ್ಲೇಟ್ ಹಂತದ ಪಂದ್ಯದ ವೇಳೆ ಘಟನೆ * ಟ್ರಿನಿಡಾಡ್ ಸುತ್ತಮುತ್ತ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲು ಟ್ರಿನಿಡಾಡ್‌(ಜ.30): ಅಂಡರ್-19 ಕ್ರಿಕೆಟ್ ವಿಶ್ವಕಪ್‌ನ ( -19 ) ಜಿಂಬಾಬ್ವೆ ಹಾಗೂ ಐರ್ಲೆಂಡ್ ( ) ತಂಡಗಳ ನಡುವಿನ ಪ್ಲೇಟ್ ಹಂತದ ಸೆಮಿಫೈನಲ್‌ ಪಂದ್ಯದ ವೇಳೆಯೇ ಭೂಕಂಪನ ಸಂಭವಿಸಿದೆ. ಶನಿವಾರ ಟ್ರಿನಿಡಾಡ್ ಸುತ್ತಮುತ್ತ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದ್ದು, ಕಾಮೆಂಟ್ರಿ ಬಾಕ್ಸ್‌ನಲ್ಲಿದ್ದ ಕಾಮೆಂಟೇಟರ್‌ಗಳಿಗೆ ಈ ಭೂಕಂಪನದ ಅನುಭವವಾಗಿದೆ. ಭೂಕಂಪನದ ವೇಳೆ ತಮ್ಮ ಮುಂದಿದ್ದ ಟೀವಿ ಅಲುಗಾಡುವ ವಿಡಿಯೋವೊಂದನ್ನು ಕಾಮೆಂಟೇಟರ್ ಒಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ತುಂಬಾ ಅಚ್ಚರಿಯ ವಿಚಾರವೆಂದರೆ ಮೈದಾನದಲ್ಲಿದ್ದ ಆಟಗಾರರಿಗೆ ಈ ಘಟನೆಯ ಮಾಹಿತಿಯೇ ಇರಲಿಲ್ಲ. ಇನ್ನು ಪಂದ್ಯ ಪ್ರಸಾರಕ್ಕೆ ಕೂಡಾ ಯಾವುದೇ ಅಡಚಣೆ ಆಗಲಿಲ್ಲ. ಸಿಎಸ್‌ಕೆ ಭಾರತದ ಅತಿ ಶ್ರೀಮಂತ ಕ್ರೀಡಾ ತಂಡ ನವದೆಹಲಿ: ಐಪಿಎಲ್‌ನ () ನಾಲ್ಕು ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ( ) ಭಾರತದ ಅತಿ ಶ್ರೀಮಂತ ಕ್ರೀಡಾ ತಂಡ ಎನಿಸಿಕೊಂಡಿದೆ. ತಂಡದ ಒಟ್ಟು ಮೌಲ್ಯ ಶುಕ್ರವಾರ 7,600 ಕೋಟಿ ರು. ದಾಟಿದೆ. ಚೆನ್ನೈ ತಂಡದ ಮೌಲ್ಯ ತಂಡದ ಮಾಲಿಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ಸ್‌ಗಿಂತಲೂ ( ) ಹೆಚ್ಚಾಗಿ ದಾಖಲೆ ಬರೆದಿದೆ. ಸದ್ಯ ಇಂಡಿಯಾ ಸಿಮೆಂಟ್‌ ಕಂಪೆನಿಯ ಮಾರುಕಟ್ಟೆಮೌಲ್ಯ 6,869 ಕೋಟಿ ರು. ಇದೆ. 2022: ಈ ಮೂವರು ವಿಂಡೀಸ್ ಸ್ಟಾರ್ ಆಟಗಾರರು ಅನ್‌ಸೋಲ್ಡ್‌ ಆಗಬಹುದು..! ಇನ್ನು ಡಾ. ಆರ್‌.ಪಿ. ಸಂಜೀವ್ ಗೋಯೆಂಕಾ ಒಡೆತನದ ಆರ್‌ಪಿಎಸ್‌ಜಿ ಗ್ರೂಪ್‌ ( ) 7,000+ ಕೋಟಿ ರುಪಾಯಿ ನೀಡಿ ಲಖನೌ ಫ್ರಾಂಚೈಸಿಯ ( ) ಮಾಲೀಕತ್ವ ಪಡಿದುಕೊಂಡಿತ್ತು. ಇನ್ನು ಸಿವಿಸಿ ಕ್ಯಾಪಿಟಲ್ ( ) ಗ್ರೂಪ್ 5,625 ಕೋಟಿ ರುಪಾಯಿ ಬಿಡ್‌ ಮಾಡಿ ಅಹಮದಾಬಾದ್ ತಂಡವನ್ನು ಖರೀದಿಸಿತ್ತು. ಇದರ ಬೆನ್ನಲ್ಲೇ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಶೇರು ಮೌಲ್ಯ ಕೂಡಾ ಹೆಚ್ಚಳವಾಗಿದೆ. ಈ ವರ್ಷವೂ ಚೆನ್ನೈಗೆ ಧೋನಿಯೇ ನಾಯಕ ಚೆನ್ನೈ: 2022ರ ಐಪಿಎಲ್‌ನಲ್ಲೂ ಎಂ.ಎಸ್‌.ಧೋನಿಯೇ( ) ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕರಾಗಿರಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಭವಿಷ್ಯದ ದೃಷ್ಟಿಯಿಂದ ಈಗಲೇ ಧೋನಿ, ರವೀಂದ್ರ ಜಡೇಜಾಗೆ ( ) ನಾಯಕತ್ವ ಬಿಟ್ಟುಕೊಡಲಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ‘ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈಗ ಧೋನಿಯೇ ತಂಡದ ನಾಯಕ. ಮುಂದೆ ನಾಯಕತ್ವ ಬಿಡುವುದಾದರೆ ಅವರೇ ಅದನ್ನು ಘೋಷಿಸಲಿದ್ದಾರೆ’ ಎಂದು ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಫೆಬ್ರವರಿ 12 ಹಾಗೂ 13ಕ್ಕೆ ನಡೆಯಲಿರುವ ಐಪಿಎಲ್ ಮೆಗಾ ಹರಾಜು ( ) ಪ್ರಕ್ರಿಯೆಗೆ ಸಿದ್ಧತೆ ನಡೆಸಲು ಧೋನಿ ಚೆನ್ನೈಗೆ ತೆರಳಿದ್ದಾರೆ. : ಫಲಿತಾಂಶದ ಮೇಲಲ್ಲ, ಪ್ರಕ್ರಿಯೆ ಮೇಲೆ ಹೆಚ್ಚಿನ ಗಮನ ನೀಡಿ! ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ, ಮೋಯಿನ್ ಅಲಿ( ) ಹಾಗೂ ಋತುರಾಜ್ ಗಾಯಕ್ವಾಡ್ ಅವರನ್ನು ರೀಟೈನ್‌ ಮಾಡಿಕೊಂಡಿದೆ. ಇನ್ನು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ನಾಯಕ ಮಹೇಂದ್ರ ಸಿಂಗ್ ಧೋನಿ ಈಗಿನಿಂದಲೇ ರಣತಂತ್ರ ಹೆಣೆಯಲಾರಂಭಿಸಿದ್ದಾರೆ.