2021: ವರ್ಷದ ಕ್ರೀಡಾಸ್ಪೂರ್ತಿ ಪ್ರಶಸ್ತಿಗೆ ಭಾಜನರಾದ ಡೇರಲ್ ಮಿಚೆಲ್ * ಐಸಿಸಿ ಕ್ರೀಡಾಸ್ಪೂರ್ತಿ ಪ್ರಶಸ್ತಿ ಜಯಿಸಿದ ಡೇರಲ್ ಮಿಚೆಲ್ * ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರೀಡಾ ಸ್ಪೂರ್ತಿ ಮೆರೆದಿದ್ದ ಕಿವೀಸ್ ಆಟಗಾರ * ಕ್ರೀಡಾ ಸ್ಪೂರ್ತಿ ಪ್ರಶಸ್ತಿ ಜಯಿಸಿದ ನ್ಯೂಜಿಲೆಂಡ್‌ನ 4ನೇ ಆಟಗಾರ ಮಿಚೆಲ್ ದುಬೈ(ಫೆ.02): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಬ್ಯಾಟರ್‌ ಡೇರಲ್ ಮಿಚೆಲ್‌ ( ) 2021ನೇ ಸಾಲಿನ ಐಸಿಸಿ ವರ್ಷದ ಕ್ರೀಡಾಸ್ಪೂರ್ತಿ ಪ್ರಶಸ್ತಿಗೆ ( 2021) ಭಾಜನರಾಗಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ( T20 ) ಟೂರ್ನಿಯ ಇಂಗ್ಲೆಂಡ್ ವಿರುದ್ದದ ಸೆಮಿಫೈನಲ್‌ ಪಂದ್ಯದಲ್ಲಿ ಕ್ರೀಡಾಸ್ಪೂರ್ತಿ ಮೆರೆದಿದ್ದ ಡೇರಲ್ ಮಿಚೆಲ್‌ಗೆ ಐಸಿಸಿಯ ಪ್ರತಿಷ್ಠಿತ ಕ್ರೀಡಾಸ್ಪೂರ್ತಿ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ಡೇನಿಯಲ್ ವೆಟ್ಟೋರಿ( ), ಬ್ರೆಂಡನ್ ಮೆಕ್ಕಲಂ ( ) ಹಾಗೂ ಕೇನ್‌ ವಿಲಿಯಮ್ಸನ್ ( ) ಬಳಿಕ ಐಸಿಸಿ ಕ್ರೀಡಾ ಸ್ಪೂರ್ತಿ ಪ್ರಶಸ್ತಿ ಜಯಿಸಿದ ನ್ಯೂಜಿಲೆಂಡ್‌ನ ನಾಲ್ಕನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಡೇರಲ್ ಮಿಚೆಲ್ ಪಾತ್ರರಾಗಿದ್ದಾರೆ. ಯುಎಇನಲ್ಲಿ ನಡೆದ 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ( ) ತಂಡಗಳು ಮುಖಾಮುಖಿಯಾಗಿದ್ದವು. ಇಂಗ್ಲೆಂಡ್ ನೀಡಿದ್ದ 167 ರನ್‌ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡವು ಗೆಲುವಿನತ್ತ ದಾಪುಗಾಲಿಡುತ್ತಿತ್ತು. ಇಂಗ್ಲೆಂಡ್‌ನ ಸ್ಪಿನ್ನರ್ ಆದಿಲ್ ರಶೀದ್ ( ) ಪಂದ್ಯದ 18ನೇ ಓವರ್‌ ಬೌಲಿಂಗ್‌ ಮಾಡುತ್ತಿದ್ದರು. ಸ್ಟ್ರೈಕ್‌ನಲ್ಲಿದ್ದ ಜೇಮ್ಸ್‌ ನೀಶಮ್ ನೇರವಾಗಿ ಚೆಂಡನ್ನು ಬಾರಿಸಿದರು. ಚೆಂಡನ್ನು ಹಿಡಿಯುವ ಯತ್ನದಲ್ಲಿದ್ದ ರಶೀದ್‌ಗೆ ನಾನ್‌ ಸ್ಟ್ರೈಕರ್‌ನಲ್ಲಿದ್ದ ಡೇರಲ್ ಮಿಚೆಲ್ ಅಡ್ಡಿ ಪಡಿಸಿದ್ದರು. ಬಳಿಕ ಒಂದು ರನ್ ಓಡುವ ಅವಕಾಶವಿದ್ದರೂ ಸಹಾ ಡೇರಲ್‌ ಮಿಚೆಲ್‌ ಕ್ರೀಡಾಸ್ಪೂರ್ತಿಯಿಂದಾಗಿ ರನ್‌ ಓಡಿರಲಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಸೆಮಿಫೈನಲ್ ಪಂದ್ಯದಲ್ಲಿ ಡೇರಲ್ ಮಿಚೆಲ್‌ 47 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 72 ರನ್ ಬಾರಿಸುವ ಮೂಲಕ. ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಐಸಿಸಿ ಕ್ರೀಡಾಸ್ಪೂರ್ತಿ ಪಡೆದುಕೊಂಡ ಬಳಿಕ ಮಾತನಾಡಿದ ಡೇರಲ್ ಮಿಚೆಲ್, ಐಸಿಸಿ ಕ್ರೀಡಾಸ್ಪೂರ್ತಿ ಪ್ರಶಸ್ತಿ ಸಿಕ್ಕಿರುವುದು ನನ್ನ ಪಾಲಿಗೆ ಅತಿದೊಡ್ಡ ಗೌರವದ ಸಂಗತಿಯಾಗಿದೆ. ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಭಾಗವಾಗಿದ್ದಕ್ಕೆ ನಿಜಕ್ಕೂ ಸಂತಸವಾಗುತ್ತಿದೆ. ಇಂಗ್ಲೆಂಡ್ ಎದುರಿನ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ ಪಂದ್ಯವು ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. ಪಂದ್ಯ ಮುಕ್ತಾಯಕ್ಕೆ ಕೆಲವೇ ಓವರ್‌ಗಳಿದ್ದಾಗ ಜೇಮ್ಸ್ ನೀಶಮ್ ಲಾಂಗ್ ಆನ್‌ನತ್ತ ಚೆಂಡನ್ನು ಬಾರಿಸಿ ಒಂದು ರನ್ ಗಳಿಸುವ ಯತ್ನದಲ್ಲಿದ್ದರು. ನಾನಾಗ ಚೆಂಡು ಹಿಡಿಯುವ ಯತ್ನದಲ್ಲಿದ್ದ ಆದಿಲ್‌ ರಶೀದ್‌ಗೆ ಅಡ್ಡಿಪಡಿಸಿದೆ ಎಂದೆನಿಸಿ ಒಂದು ರನ್ ಓಡಲು ಮುಂದಾಗಲಿಲ್ಲ ಎಂದು ಡೇರಲ್ ಮಿಚೆಲ್ ಹೇಳಿದ್ದಾರೆ. ಕೊಟ್ಟ ಅವಾರ್ಡ್‌ಗೆ ವಿರಾಟ್ ಕೊಹ್ಲಿ ಫುಲ್ ಶಾಕ್..! ಒಂದು ತಂಡವಾಗಿ ನಾವೆಲ್ಲಾ ಆಡುತ್ತಿರುವ ರೀತಿಯ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ವೈಯುಕ್ತಿಕವಾಗಿ ಹೇಳಬೇಕೆಂದರೆ, ಅದು ನಿಜಕ್ಕೂ ಕ್ರೀಡಾಸ್ಪೂರ್ತಿಯ ಕ್ಷಣ. ನಾವು ಪಂದ್ಯವನ್ನು ಗೆಲ್ಲಬೇಕು ನಿಜ, ಆದರೆ ಅದು ಒಳ್ಳೆಯ ರೀತಿಯಲ್ಲಿ ಗೆಲ್ಲಬೇಕು. ಹಾಗೂ ನಾವು ಆ ಪಂದ್ಯವನ್ನು ಒಳ್ಳೆಯ ರೀತಿಯಲ್ಲಿಯೇ ಜಯಿಸಿದೆವು ಎಂದು ಡೇರಲ್ ಮಿಚೆಲ್ ಹೇಳಿದ್ದಾರೆ. ನಾವು ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕೆಂದು ಬಯಸುತ್ತೇವೆ. ಆದರೆ ಕ್ರೀಡಾ ಮೌಲ್ಯಗಳಿಗೆ ವಿರುದ್ದವಾಗಿ ಪಂದ್ಯಗಳನ್ನು ಗೆಲ್ಲಲು ಬಯಸುವುದಿಲ್ಲ. ಕ್ರೀಡೆಯಲ್ಲ ಕ್ರೀಡಾಸ್ಪೂರ್ತಿ ಮುಖ್ಯವಾಗಿರುತ್ತದೆ. ನಾವು ಆಡುವ ರೀತಿಯನ್ನು ಯುವ ಕ್ರಿಕೆಟಿಗರು ನೋಡಿ ಅನುಕರಿಸುತ್ತಿರುತ್ತಾರೆ. ಹೀಗಾಗಿ ಸರಿಯಾದ ರೀತಿಯಲ್ಲಿ ಪಂದ್ಯವನ್ನು ಗೆಲ್ಲಬೇಕು ಹಾಗೂ ಕ್ರೀಡಾಸ್ಪೂರ್ತಿ ಪಾಲಿಸುವ ಮೂಲಕ ಯುವಕರಿಗೆ ಮಾದರಿಯಾಗಬೇಕು ಎಂದು ಡೇರಲ್ ಮಿಚೆಲ್ ಹೇಳಿದ್ದಾರೆ.