: ಪುಣೇರಿ ಪಲ್ಟನ್‌ಗೆ ಹ್ಯಾಟ್ರಿಕ್‌ ಜಯ * ಪ್ರೊ ಕಬಡ್ಡಿ ಲೀಗ್‌ನಲ್ಲಿ ಪುಣೇರಿ ಪಲ್ಟಾನ್ ತಂಡಕ್ಕೆ ಹ್ಯಾಟ್ರಿಕ್ ಜಯ * ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದ ಪಲ್ಟಾನ್ ತಂಡ * ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಪ್ರದೀಪ್ ನರ್ವಾಲ್ ಬೆಂಗಳೂರು(ಜ.28): 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ( ) ಪುಣೇರಿ ಪಲ್ಟನ್‌ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದು, ಒಟ್ಟು 7 ಜಯದೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ. ಗುರುವಾರ ನಡೆದ ಯು.ಪಿ.ಯೋಧಾ ( ) ವಿರುದ್ಧದ ಪಂದ್ಯದಲ್ಲಿ ಪುಣೆ 44-38 ಅಂಕಗಳಿಂದ ಗೆದ್ದಿತು. ಸತತ 2ನೇ ಸೋಲುಂಡ ಯೋಧಾ ಸದ್ಯ 7ನೇ ಸ್ಥಾನದಲ್ಲಿದೆ. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಪುಣೆ ಮೊದಲಾರ್ಧಕ್ಕೆ 21-18 ಅಂಕಗಳಿಂದ ಮುಂದಿತ್ತು. ಮೋಹಿತ್‌ ಗೋಯತ್‌ 14, ಅಸ್ಲಂ 9 ರೈಡ್‌ ಅಂಕ ಗಳಿಸಿದರು. ಯೋಧಾದ ತಾರಾ ರೈಡರ್‌ ಪ್ರದೀಪ್‌ ನರ್ವಾಲ್‌(06 ಅಂಕ) ಮತ್ತೊಮ್ಮೆ ವಿಫಲರಾದರು. ಸುರೇಂದ್ರ ಗಿಲ್‌(16)ಏಕಾಂಗಿ ಹೋರಾಟ ವ್ಯರ್ಥವಾಯಿತು. ಸದ್ಯ ಬೆಂಗಳೂರು ಬುಲ್ಸ್ ( ) ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ದಬಾಂಗ್ ಡೆಲ್ಲಿ, ಹರ್ಯಾಣ ಸ್ಟೀಲರ್ಸ್ ಹಾಗೂ ಯು ಮುಂಬಾ ಮೊದಲ ನಾಲ್ಕರೊಳಗೆ ಸ್ಥಾನ ಪಡೆದಿವೆ. ಇನ್ನು ಟೂರ್ನಿಯಲ್ಲಿ ಕೇವಲ ಒಂದು ಗೆಲುವು ದಾಖಲಿಸಿರುವ ತೆಲುಗು ಟೈಟಾನ್ಸ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ. ಇಂದಿನ ಪಂದ್ಯ: ತಲೈವಾಸ್‌-ಪಾಟ್ನಾಸಮಯ: ಸಂಜೆ 7.30ಕ್ಕೆ ಏಷ್ಯಾಕಪ್‌ ಹಾಕಿ: ಇಂದು ಕಂಚಿಗೆ ಭಾರತ ಸೆಣಸು ಮಸ್ಕಟ್‌: ಏಷ್ಯಾ ಕಪ್‌ ಮಹಿಳಾ ಹಾಕಿ ಟೂರ್ನಿಯಲ್ಲಿ ( ' ) ಪ್ರಶಸ್ತಿ ಉಳಿಕೊಳ್ಳಲು ವಿಫಲವಾಗಿರುವ ಭಾರತ, ಶುಕ್ರವಾರ ಕಂಚಿನ ಪದಕದ ಪಂದ್ಯದಲ್ಲಿ ಚೀನಾ ವಿರುದ್ಧ ಸೆಣಸಾಡಲಿದೆ. ಗುಂಪು ಹಂತದಲ್ಲಿ ಮಲೇಷ್ಯಾ ಹಾಗೂ ಸಿಂಗಾಪುರದ ವಿರುದ್ಧ ಭರ್ಜರಿಯಾಗಿ ಗೆದ್ದು, ಜಪಾನ್‌ ವಿರುದ್ಧ ಸೋತಿದ್ದ ಭಾರತ, ಸೆಮೀಸ್‌ನಲ್ಲಿ ದ.ಕೊರಿಯಾಗೆ 2-3 ಗೋಲುಗಳ ಅಂತರದಲ್ಲಿ ಶರಣಾಗಿತ್ತು. ಹಾಕಿ ದಿಗ್ಗಜ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟ ನಾಯಕ ಚರಣಜಿತ್ ಸಿಂಗ್ ನಿಧನ! ಮತ್ತೊಂದು ಸೆಮೀಸ್‌ನಲ್ಲಿ ಚೀನಾ, ಜಪಾನ್‌ ವಿರುದ್ಧ ಸೋಲನುಭವಿಸಿತ್ತು. ಕಳೆದ ಆವೃತ್ತಿಯ ಫೈನಲ್‌ನ ಉಭಯ ತಂಡಗಳ ನಡುವಿನ ಮುಖಾಮುಖಿಯಲ್ಲಿ ಗೆದ್ದಿದ್ದ ಭಾರತ, ಈ ಬಾರಿ ಮತ್ತೊಮ್ಮೆ ಚೀನಾವನ್ನು ಸೋಲಿಸಿ 3ನೇ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದೆ. ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಜಪಾನ್‌-ದ.ಕೊರಿಯಾ ಮುಖಾಮುಖಿಯಾಗಲಿವೆ. ಕೋವಿಡ್‌: ಸಂತೋಷ್‌ ಟ್ರೋಫಿ ಮುಂದೂಡಿಕೆ ನವದೆಹಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳು () ನಿಯಂತ್ರಣಕ್ಕೆ ಬರದ ಕಾರಣ ಫೆ.20ರಿಂದ ಮಾ.6ರ ವರೆಗೂ ಕೇರಳದ ಮಲ್ಲಪುರಂನಲ್ಲಿ ನಡೆಯಬೇಕಿದ್ದ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯನ್ನು ( ) ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಅನಿರ್ದಿಷ್ಟಅವಧಿಗೆ ಮುಂದೂಡಿದೆ. ಮುಂದಿನ ತಿಂಗಳ ಅಂತ್ಯದಲ್ಲಿ ಪರಿಸ್ಥಿತಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಎಐಎಫ್‌ಎಫ್‌ ತಿಳಿಸಿದೆ. ಏಷ್ಯನ್‌ ಕಪ್‌ನಿಂದ ಭಾರತ ಹೊರಬೀಳಲು ಎಎಫ್‌ಸಿ ಕಾರಣ: ಕೋಚ್‌ ಮುಂಬೈ: ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯಿಂದ ( ) ಭಾರತ ಮಹಿಳಾ ತಂಡ ಹೊರಬೀಳಲು ಏಷ್ಯನ್‌ ಫುಟ್ಬಾಲ್‌ ಕಾನ್ಫೆಡರೇಷನ್‌(ಎಎಫ್‌ಸಿ)ನ ನಿರ್ಲಕ್ಷ್ಯವೇ ಕಾರಣ ಎಂದು ತಂಡದ ಕೋಚ್‌ ಥಾಮಸ್‌ ಡೆನೆರ್ಬಿ ಆರೋಪಿಸಿದ್ದಾರೆ. ತಂಡದ 12ಕ್ಕೂ ಹೆಚ್ಚು ಆಟಗಾರ್ತಿಯರಲ್ಲಿ ಕೊರೋನಾ ಸೋಂಕು ಪತ್ತೆಯಾದ ಕಾರಣ, ಭಾರತ ಟೂರ್ನಿಯಿಂದ ಹೊರನಡೆಯಬೇಕಾಯಿತು. : ಫೈನಲ್‌ಗೆ ಆ್ಯಶ್ಲೆ ಬಾರ್ಟಿ, ಡೇನಿಯಲ್‌ ಕಾಲಿನ್ಸ್‌ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಡೆನೆರ್ಬಿ, ‘ತಂಡ ಉಳಿದುಕೊಂಡಿದ್ದ ಹೋಟೆಲ್‌ ಸಿಬ್ಬಂದಿಗೆ ಜ.17ರಂದು ಪರೀಕ್ಷೆ ನಡೆಸಲಾಗಿತ್ತು. ಜ.18ಕ್ಕೆ 7 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟರೂ ಜ.19ರ ಮಧ್ಯಾಹ್ನದ ವರೆಗೂ ವಿಷಯ ಬಹಿರಂಗಪಡಿಸಿರಲಿಲ್ಲ. ಹೋಟೆಲ್‌ ಸಿಬ್ಬಂದಿಯಿಂದಲೇ ನಮ್ಮ ಆಟಗಾರ್ತಿಯರಿಗೆ ಸೋಂಕು ತಗುಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ದುರ್ಬಲ ಬಯೋಬಬಲ್‌ ವ್ಯವಸ್ಥೆ, ನಿರ್ಲಕ್ಷ್ಯವೇ ನಾವು ಹೊರಬೀಳಲು ಕಾರಣ’ ಎಂದು ಆರೋಪಿಸಿದ್ದಾರೆ.