: ಮುಂಬಾಗೆ ಮತ್ತೆ ಶರಣಾದ ಬೆಂಗಳೂರು ಬುಲ್ಸ್‌ ಪ್ರೊ ಕಬಡ್ಡಿ: 34-45ರಲ್ಲಿ ಸೋಲುಈ ಆವೃತ್ತಿಯಲ್ಲಿ 2ನೇ ಬಾರಿ ಪರಾಭವಪವನ್ ಶೇರಾವತ್ ಏಕಾಂಗಿ ಹೋರಾಟ ಬೆಂಗಳೂರು (ಜ. 27):ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ ( ) ಬೆಂಗಳೂರು ಬುಲ್ಸ್‌ ( ) 2ನೇ ಬಾರಿಗೆ ಯು ಮುಂಬಾ ( )ವಿರುದ್ಧ ಸೋಲುಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ 34-45 ಅಂಕಗಳ ಹೀನಾಯ ಸೋಲಿಗೆ ಬುಲ್ಸ್‌ ಶರಣಾಯಿತು. ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬುಲ್ಸ್‌ 16 ಅಂಕಗಳಿಂದ ಸೋಲುಂಡಿತ್ತು.ಪವನ್‌ ಶೆರಾವತ್‌ ( )ಏಕಾಂಗಿ ಹೋರಾಟ(14 ರೈಡ್‌ ಅಂಕ) ಬುಲ್ಸ್‌ಗೆ ಗೆಲುವು ತಂದುಕೊಡಲಿಲ್ಲ. ಜೊತೆಗೆ ಡಿಫೆಂಡರ್‌ಗಳ ದಯನೀಯ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು. ಪಂದ್ಯದಲ್ಲಿ ಬುಲ್ಸ್‌ ಡಿಫೆಂಡರ್‌ಗಳು ಒಟ್ಟು 18 ವಿಫಲ ಯತ್ನಗಳನ್ನು ಮಾಡಿದರು. ತಂಡ ಒಟ್ಟು ಗಳಿಸಿದ್ದು 7 ಟ್ಯಾಕಲ್‌ ಅಂಕಗಳನ್ನು ಮಾತ್ರ. ಪ್ರತಿ ಬಾರಿ ಪವನ್‌ ಔಟಾಗಿ ಹೊರಹೋದಾಗಲೂ ಬುಲ್ಸ್‌ ಹೆಚ್ಚೆಚ್ಚು ಅಂಕಗಳನ್ನು ಕಳೆದುಕೊಂಡಿದ್ದು, ತಂಡ ಅವರ ಮೇಲೆ ಎಷ್ಟುಅವಲಂಬಿತಗೊಂಡಿದೆ ಎನ್ನುವುದನ್ನು ಮತ್ತೊಮ್ಮೆ ತೋರಿಸಿತು.ಪಂದ್ಯದ 4ನೇ ನಿಮಿಷದಲ್ಲೇ ಆಲೌಟ್‌ ಆದ ಬುಲ್ಸ್‌ 17ನೇ ನಿಮಿಷದಲ್ಲಿ ಮುಂಬಾವನ್ನು ಆಲೌಟ್‌ ಮಾಡಿ 18-18ರಲ್ಲಿ ಸಮಬಲ ಸಾಧಿಸಿತು. ಮೊದಲಾರ್ಧದ ಮುಕ್ತಾಯಕ್ಕೆ 20-22ರ ಹಿನ್ನಡೆ ಅನುಭವಿಸಿದ ಬುಲ್ಸ್‌, ದ್ವಿತೀಯಾರ್ಧ ಆರಂಭಗೊಂಡ ಒಂದೂವರೆ ನಿಮಿಷದಲ್ಲಿ ಮತ್ತೆ ಆಲೌಟ್‌ ಆಗಿ 7 ಅಂಕಗಳ ಹಿನ್ನಡೆ ಅನುಭವಿಸಿತು. ಅಲ್ಲಿಂದ ಮುಂದಕ್ಕೆ ತಂಡ ಚೇತರಿಕೆ ಕಾಣಲಿಲ್ಲ. ಮುಂಬಾ ಪರ ಅಭಿಷೇಕ್‌ ಸಿಂಗ್‌ 11 ರೈಡ್‌ ಅಂಕ ಗಳಿಸಿದರೆ, ರಾಹುಲ್‌ ಸೇಥ್‌ಪಾಲ್‌ 7 ಟ್ಯಾಕಲ್‌ ಅಂಕಗಳನ್ನು ಕಲೆಹಾಕಿದರು. ಮುಂಬಾ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರೆ, ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಸೋತರೂ ಬುಲ್ಸ್‌ ಅಗ್ರಸ್ಥಾನದಲ್ಲೇ ಉಳಿದಿದೆ. ಏಷ್ಯಾ ಕಪ್‌ ಮಹಿಳಾ ಹಾಕಿ ಪಂದ್ಯಾವಳಿ, ಭಾರತದ ಪ್ರಶಸ್ತಿ ಕನಸು ಭಗ್ನಮಸ್ಕಟ್‌:ಏಷ್ಯಾ ಕಪ್‌ ( ) ಉಳಿಸಿಕೊಳ್ಳುವ ಭಾರತ ಮಹಿಳಾ ತಂಡದ ಕನಸು ಭಗ್ನಗೊಂಡಿದೆ. ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ( ) ಹಾಲಿ ಚಾಂಪಿಯನ್‌ ಭಾರತ (), ದಕ್ಷಿಣ ಕೊರಿಯಾ ( ) ವಿರುದ್ಧ 2-3 ಗೋಲುಗಳ ಅಂತರದಲ್ಲಿ ಸೋಲುಂಡಿತು. ಪಂದ್ಯದ 28 ನಿಮಿಷದಲ್ಲಿ ವಂದನಾ ಕಟಾರಿಯಾ ( ) ಬಾರಿಸಿದ ಗೋಲಿನ ನೆರವಿನಿಂದ ಭಾರತ ಮುನ್ನಡೆ ಸಾಧಿಸಿತು.ದ್ವಿತೀಯಾರ್ಧದಲ್ಲಿ ಕೊರಿಯಾ 3 ಗೋಲು ಗಳಿಸಿತು. 31ನೇ ನಿಮಿಷದಲ್ಲಿ ಎನುಬಿ ಚಿಯೊನ್‌, 45ನೇ ನಿಮಿಷದಲ್ಲಿ ಸೆಯುಂಗ್‌ ಜು ಲೀ ಹಾಗೂ 47ನೇ ನಿಮಿಷದಲ್ಲಿ ಹೆಜಿನ್‌ ಚೊ ಗೋಲು ಗಳಿಸಿದರು. ಪಂದ್ಯ ಮುಕ್ತಾಯಗೊಳ್ಳಲು 6 ನಿಮಿಷ ಬಾಕಿ ಇದ್ದಾಗ ಲಾಲ್ರೆಮ್ಸಯಾಮಿ ಗೋಲು ಬಾರಿಸಿ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಆದರೆ ಮತ್ತೊಂದು ಗೋಲು ಗಳಿಸಿ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ಯಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಕೋವಿಡ್‌: ಸಂತೋಷ್‌ ಟ್ರೋಫಿ ಮುಂದೂಡಿಕೆನವದೆಹಲಿ:ದೇಶದಲ್ಲಿ ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಬರದ ಕಾರಣ ಫೆ.20ರಿಂದ ಮಾ.6ರ ವರೆಗೂ ಕೇರಳದ ಮಲ್ಲಪುರಂನಲ್ಲಿ ನಡೆಯಬೇಕಿದ್ದ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯನ್ನು ( ) ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಅನಿರ್ದಿಷ್ಟಅವಧಿಗೆ ಮುಂದೂಡಿದೆ. ಮುಂದಿನ ತಿಂಗಳ ಅಂತ್ಯದಲ್ಲಿ ಪರಿಸ್ಥಿತಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಎಐಎಫ್‌ಎಫ್‌ ತಿಳಿಸಿದೆ.