: ಮೂರನೇ ಸುತ್ತಿಗೆ ರಾಫೆಲ್‌ ನಡಾಲ್ ಲಗ್ಗೆ * ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟ ನಡಾಲ್‌ * ಮಹಿಳಾ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್‌ ನವೊಮಿ ಒಸಾಕ 3ನೇ ಸುತ್ತಿಗೆ ಪ್ರವೇಶ * ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಆಸ್ಪ್ರೇಲಿಯಾದ ಬಾರ್ಟಿ ಕೂಡಾ ಮೂರನೇ ಸುತ್ತು ಪ್ರವೇಶ ಮೆಲ್ಬರ್ನ್(ಜ.20)‌: ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ ( ) ಟೂರ್ನಿಯಲ್ಲಿ 6ನೇ ಶ್ರೇಯಾಂಕಿತ ರಾಫೆಲ್‌ ನಡಾಲ್‌( ), ವಿಶ್ವ ನಂ.1 ಆಶ್ಲೆ ಬಾರ್ಟಿ( ), ಹಾಲಿ ಚಾಂಪಿಯನ್‌ ನವೊಮಿ ಒಸಾಕ( ) 3ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಜರ್ಮನಿಯ ಯಾನಿಕ್‌ ಹಾನ್ಸ್‌ಫಮನ್‌ ವಿರುದ್ಧ 6-2, 6-3, 6-4 ಸೆಟ್‌ಗಳಲ್ಲಿ ಜಯಗಳಿಸಿದರು. 3ನೇ ಸುತ್ತಿನಲ್ಲಿ ಸ್ಪೇನ್‌ನ ನಡಾಲ್‌ಗೆ ರಷ್ಯಾದ ಕಚನೊವ್‌ ಎದುರಾಗಲಿದ್ದಾರೆ. ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಆಸ್ಪ್ರೇಲಿಯಾದ ಬಾರ್ಟಿ, ಇಟಲಿಯ ಲುಸಿಯಾ ಬ್ರೊನ್ಜೆಟಿ ವಿರುದ್ಧ 6-1, 6-1ರಲ್ಲಿ ಜಯಿಸಿದರ. ಅಮೆರಿಕದ ಮ್ಯಾಡಿಸನ್‌ ಬ್ರೆಂಗಲ್‌ ವಿರುದ್ಧ ಒಸಾಕ 6-0, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಬೋಪಣ್ಣ ಜೋಡಿಗೆ ಸೋಲು:ಭಾರತದ ರೋಹನ್‌ ಬೋಪಣ್ಣ ( ) ಹಾಗೂ ಫ್ರಾನ್ಸ್‌ನ ರೋಜರ್‌ ವ್ಯಾಸಲಿನ್‌ ಪುರುಷರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಫಿಲಿಪ್ಪೀನ್ಸ್‌ನ ಟ್ರೀಟ್‌ ಹ್ಯುಯಿ ಹಾಗೂ ಇಂಡೋನೇಷ್ಯಾದ ಕ್ರಿಸ್ಟೋಫರ್‌ ವಿರುದ್ಧ 6-3, 6-7, 2-6 ಸೆಟ್‌ಗಳಲ್ಲಿ ಸೋಲುಂಡರು. ಬ್ಯಾಡ್ಮಿಂಟನ್‌: ಸಿಂಧು 2ನೇ ಸುತ್ತಿಗೆ ಪ್ರವೇಶ ಲಖನೌ: ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧು ( ) 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಬುಧವಾರ ಮೊದಲ ಸುತ್ತಿನಲ್ಲಿ ಭಾರತದವರೇ ಆದ ತಾನ್ಯ ಹೇಮಂತ್‌ ವಿರುದ್ಧ 21-9, 21-9 ಗೇಮ್‌ಗಳಲ್ಲಿ ಗೆದ್ದರು. 2ನೇ ಸುತ್ತಿನಲ್ಲಿ ಸಿಂಧುಗೆ ಅಮೆರಿಕದ ಲಾರೆನ್‌ ಲಾಮ್‌ ಎದುರಾಗಲಿದ್ದಾರೆ. : ಟೆನಿಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಟೋಕಿಯೋ ಒಲಿಂಪಿಕ್ಸ್‌ ( ) ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ಪಿ ವಿ ಸಿಂಧು, ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಡ್ಮಿಂಟನ್‌: ಲಕ್ಷ್ಯ ಸೆನ್‌ ವಿಶ್ವ ನಂ.13! ನವದೆಹಲಿ: ಭಾರತದ 20 ವರ್ಷದ ಶಟ್ಲರ್‌ ಲಕ್ಷ್ಯ ಸೆನ್‌ ( ), ವಿಶ್ವ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ತಮ್ಮ ವೃತ್ತಿಬದುಕಿನ ಶ್ರೇಷ್ಠ 13ನೇ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗೆ ಇಂಡಿಯಾ ಓಪನ್‌ ( ) ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಅವರು, ಪರಿಷ್ಕೃತ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 4 ಸ್ಥಾನ ಏರಿಕೆ ಕಂಡಿದ್ದಾರೆ. ಲಕ್ಷ್ಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ 8ನೇ ಸ್ಥಾನಕ್ಕೇರಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು 7ನೇ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ 10ನೇ ಸಾನದಲ್ಲಿ ಮುಂದುವರಿದಿದ್ದಾರೆ. ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ( ) 8ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್‌ ( ) ಮೊದಲ ಗೆಲುವು ಸಾಧಿಸಿದೆ. ಬುಧವಾರ ಜೈಪುರ ಪಿಂಕ್ ಪ್ಯಾಂಥರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ 35-34ರ ರೋಚಕ ಸಾಧಿಸಿತು. ಮೊದಲ 10 ಪಂದ್ಯಗಳಲ್ಲಿ ಟೈಟಾನ್ಸ್‌ ಟೈಟಾನ್ಸ್ 8 ಸೋಲು, 2 ಟೈ ಕಂಡಿತ್ತು. ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ವಿರುದ್ಧ ಹರ್ಯಾಣ ಸ್ಟೀಲರ್ಲ್ಸ್‌ 37-30ರಲ್ಲಿ ಗೆಲುವು ಸಾಧಿಸಿತು. ಇಂದಿನ ಪಂದ್ಯ:ತಲೈವಾಸ್‌-ಗುಜರಾತ್‌ ಸಂಜೆ 7.30ಕ್ಕೆ,ಬೆಂಗಳೂರು-ಬೆಂಗಾಲ್‌ ರಾತ್ರಿ 8.30ಕ್ಕೆ.