ಸ್ಯಾಫ್ ಫುಟ್ಬಾಲ್: ಭಾರತಕ್ಕೆ ಇಂದು ಮಾಲ್ಡೀವ್ಸ್‌ ಸವಾಲು ಅಂಡರ್- 17 ಸ್ಯಾಫ್ ಚಾಂಪಿಯನ್‌ಶಿಪ್ ಫುಟ್ಬಾಲ್ ಟೂರ್ನಿಯಲ್ಲಿ ಸತತ 2ನೇ ಜಯದೊಂದಿಗೆ ಸೆಮೀಸ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಭಾರತ ಕಾಯುತ್ತಿದೆ. ಥಿಂಪು(ಭೂತಾನ್): ಈ ಬಾರಿ ಅಂಡರ್- 17 ಸ್ಯಾಫ್ ಚಾಂಪಿಯನ್‌ಶಿಪ್ ಫುಟ್ಬಾಲ್ ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ 5 ಬಾರಿ ಚಾಂಪಿಯನ್ ಭಾರತ ತಂಡ, ಗುಂಪು ಹಂತದ 2ನೇ ಪಂದ್ಯದಲ್ಲಿ ಗುರುವಾರ ಮಾಲೀವ್ ವಿರುದ್ಧ ಸೆಣಸಾಡಲಿದೆ. ಸತತ 2ನೇ ಜಯದೊಂದಿಗೆ ಸೆಮೀಸ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಭಾರತ ಕಾಯುತ್ತಿದೆ. 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 1-0 ಗೋಲಿನ ಅಂತರದಲ್ಲಿ ಗೆದ್ದಿತ್ತು. ಆ ಬಳಿಕ ಮಾಲೀವ್ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ 1-1 ಗೋಲಿನಿಂದ ಡ್ರಾಗೊಂಡ ಕಾರಣ, ಬಾಂಗ್ಲಾ ಟೂರ್ನಿಯಿಂದಲೇ ಹೊರಬಿದ್ದಿದೆ. ಭಾರತ ಹಾಗೂ ಮಾಲೀವ್ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿವೆ. ಸಬ್‌ ಜೂನಿಯರ್ ಫುಟ್ಬಾಲ್‌: ಚೊಚ್ಚಲ ಬಾರಿ ಕರ್ನಾಟಕ ಚಾಂಪಿಯನ್‌ ಮತ್ತೊಂದು ಗುಂಪಿನಲ್ಲಿ ಪಾಕಿಸ್ತಾನ ಸೇರಿ 4 ತಂಡಗಳಿದ್ದು, ಅಗ್ರ-2 ತಂಡಗಳು ಸೆಮೀಸ್‌ಗೇರಲಿವೆ. ಸೆ.28ಕ್ಕೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಪಿ.ವಿ.ಸಿಂಧುಗೆ ಅನೂಪ್‌ ಶ್ರೀಧರ್‌ ಹೊಸ ಕೋಚ್‌ ನವದೆಹಲಿ: ಭಾರತದ ತಾರಾ ಬ್ಯಾಡ್ಮಿಂಟನ್‌ ಪಟು ಪಿ.ವಿ. ಸಿಂಧು ಇನ್ನು ಮುಂದೆ ಹೊಸ್‌ ಕೋಚ್ ಜೊತೆ ತರಬೇತಿ ಪಡೆಯಲಿದ್ದಾರೆ. ಈ ಬಗ್ಗೆ ಸಿಂಧು ತಂದೆ ಪಿ.ವಿ. ರಮಣ ಮಾಹಿತಿ ನೀಡಿದ್ದು, ಅನೂಪ್‌ ಶ್ರೀಧರ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದಿದ್ದಾರೆ. ‘ಸಿಂಧು ಇನ್ನು ಬೆಂಗಳೂರು ಬದಲು ಹೈದರಾಬಾದ್‌ನಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಅ.8ರಿಂದ ಆರ್ಕ್‌ಟಿಕ್‌ ಓಪನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವರೆಗೆ ಕೋಚ್‌ ಆಗಿದ್ದ ಇಂಡೋನೇಷ್ಯಾದ ಆಗುಸ್ ಡ್ವಿ ಸಾಂಟೊಸ್ ಅವಧಿ ಮುಕ್ತಾಯಗೊಳ್ಳುತ್ತಿದ್ದೆ. ಹೀಗಾಗಿ ಅನೂಪ್‌ ಶ್ರೀಧರ್‌ ಜೊತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದಿದ್ದಾರೆ. 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇಥ ಸಿಂಧು ಇತ್ತೀಚೆಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 2ನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಪಾದ್ರಿಯಾಗಬೇಕೆಂದು ಬಯಸಿದ್ದ ಈ ಕ್ರಿಕೆಟಿಗ ವಿಶ್ವದ ಅಪಾಯಕಾರಿ ವೇಗಿ; ಈತನ ದಾಳಿಗೆ ಎದುರಾಳಿ ಪಡೆ 38 ರನ್‌ಗೆ ಆಲೌಟ್! ಚಿನ್ನ ಗೆದ್ದ ಚೆಸ್‌ ಸಾಧಕರು ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳ ಆಟಗಾರರು ಟ್ರೋಫಿ ಜೊತೆ ಸಂಭ್ರಮಿಸಿದರು. . 🇮🇳- " " .../rItbI45M8z ಭಾರತ ಚಾಂಪಿಯನ್‌ಶಿಪ್‌ನಲ್ಲಿ ಮುಕ್ತ, ಮಹಿಳಾ ವಿಭಾಗದ ಜೊತೆ ಸಮಗ್ರ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ. ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಡಿ.ಗುಕೇಶ್‌, ಅರ್ಜುನ್‌ ಎರಿಗೈಸಿ, ದಿವ್ಯಾ ದೇಶ್‌ಮುಖ್‌, ವಂತಿಕಾ ಅಗರ್‌ವಾಲ್‌ ಚಿನ್ನದ ಪದಕ ಗೆದ್ದರು.