2024 ಗುಜರಾತ್ ಟೈಟಾನ್ಸ್ ಎದುರು ಗೆಲ್ಲುತ್ತಾ ಪಂಜಾಬ್‌ ಕಿಂಗ್ಸ್..? ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಗುಜರಾತ್‌ ತಂಡ ರಶೀದ್‌ ಖಾನ್‌ ಮೇಲೆ ಅತಿಯಾಗಿ ಅವಲಂಬಿತಗೊಂಡಿದ್ದರೆ, ಶಶಾಂಕ್‌ ಸಿಂಗ್‌ ಹಾಗೂ ಅಶುತೋಷ್‌ ಶರ್ಮಾರನ್ನು ಪಂಜಾಬ್‌ ನೆಚ್ಚಿಕೊಂಡಿದೆ. ಮುಲ್ಲಾನ್‌ಪುರ್‌(ಏ21): ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ಭಾನುವಾರ ಪರಸ್ಪರ ಎದುರಾಗಲಿದ್ದು, ಗೆಲುವಿನ ಹಳಿಗೆ ಮರಳಲು ಹಪಹಪಿಸುತ್ತಿವೆ. ಪಂಜಾಬ್‌ ಸತತ 3 ಸೋಲು ಅನುಭವಿಸಿ, ಒಟ್ಟಾರೆ ಕೇವಲ 2 ಜಯಗಳೊಂದಿಗೆ 9ನೇ ಸ್ಥಾನದಲ್ಲಿದ್ದರೆ, ಕಳೆದ 4 ಪಂದ್ಯಗಳಲ್ಲಿ 3ರಲ್ಲಿ ಸೋತಿರುವ ಗುಜರಾತ್‌ 8ನೇ ಸ್ಥಾನದಲ್ಲಿ ಬಾಕಿಯಾಗಿದೆ. ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಗುಜರಾತ್‌ ತಂಡ ರಶೀದ್‌ ಖಾನ್‌ ಮೇಲೆ ಅತಿಯಾಗಿ ಅವಲಂಬಿತಗೊಂಡಿದ್ದರೆ, ಶಶಾಂಕ್‌ ಸಿಂಗ್‌ ಹಾಗೂ ಅಶುತೋಷ್‌ ಶರ್ಮಾರನ್ನು ಪಂಜಾಬ್‌ ನೆಚ್ಚಿಕೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಒಟ್ಟು 4 ಬಾರಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ತಲಾ ಎರಡು ಬಾರಿ ಗೆಲುವಿನ ನಗೆ ಬೀರಿದೆ. ಇಂದಿನ ಪಂದ್ಯದಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ. ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ ನೋಡಿ: ಪಂಜಾಬ್ ಕಿಂಗ್ಸ್: ಪ್ರಭಸಿಮ್ರನ್ ಸಿಂಗ್, ರಿಲೇ ರೂಸ್ಸೌ, ಸ್ಯಾಮ್ ಕರ್ರನ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಆಶುತೋಷ್ ಶರ್ಮಾ, ಹಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ಆರ್ಶದೀಪ್ ಸಿಂಗ್. ಗುಜರಾತ್ ಟೈಟಾನ್ಸ್: ಶುಭ್‌ಮನ್ ಗಿಲ್‌(ನಾಯಕ), ವೃದ್ದಿಮಾನ್ ಸಾಹ(ವಿಕೆಟ್ ಕೀಪರ್), ಸಾಯಿ ಸುದರ್ಶನ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹಮದ್, ಸ್ಪೆನ್ಸರ್ ಜಾನ್ಸನ್, ಸಂದೀಪ್ ವಾರಿಯರ್. ಪಂದ್ಯ ಆರಂಭ: ಸಂಜೆ 7.30ಕ್ಕೆನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ