ಮುಂಬೈ ತಂಡದೊಳಗೆ ರೋಹಿತ್‌ ಶರ್ಮಾ ಹಾರ್ದಿಕ್‌ ಪಾಂಡ್ಯ ಬಣ? ಹಿಟ್‌ಮ್ಯಾನ್ ಬಣದಲ್ಲಿ ಯಾರಿದ್ದಾರೆ? ತಂಡದೊಳಗೆ ಈಗಾಗಲೇ ಎರಡು ಬಣಗಳಾಗಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿವೆ. ಮಾಜಿ ನಾಯಕ ರೋಹಿತ್‌ ಶರ್ಮಾ ಬಣ ಒಂದು ಕಡೆಯಾದರೆ, ಹೊಸದಾಗಿ ನಾಯಕನಾಗಿ ನೇಮಕಗೊಂಡಿರುವ ಹಾರ್ದಿಕ್‌ ಪಾಂಡ್ಯ ಬಣ ಮತ್ತೊಂದು ಕಡೆ ಎಂದು ಹೇಳಲಾಗುತ್ತಿದೆ. ನವದೆಹಲಿ(ಮಾ.29): 17ನೇ ಆವೃತ್ತಿಗೂ ಮುನ್ನ ನಾಯಕನನ್ನು ಬದಲಿಸಿದ 5 ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡದೊಳಗೆ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ. ತಂಡದೊಳಗೆ ಈಗಾಗಲೇ ಎರಡು ಬಣಗಳಾಗಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿವೆ. ಮಾಜಿ ನಾಯಕ ರೋಹಿತ್‌ ಶರ್ಮಾ ಬಣ ಒಂದು ಕಡೆಯಾದರೆ, ಹೊಸದಾಗಿ ನಾಯಕನಾಗಿ ನೇಮಕಗೊಂಡಿರುವ ಹಾರ್ದಿಕ್‌ ಪಾಂಡ್ಯ ಬಣ ಮತ್ತೊಂದು ಕಡೆ ಎಂದು ಹೇಳಲಾಗುತ್ತಿದೆ. ರೋಹಿತ್‌ ಬಣದಲ್ಲಿ ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಸೇರಿ ಇನ್ನೂ ಹಲವರಿದ್ದರೆ, ಹಾರ್ದಿಕ್‌ ಪಾಂಡ್ಯ ಬಣದಲ್ಲಿ ಇಶಾನ್‌ ಕಿಶನ್‌ ಸೇರಿ ಕೆಲವು ಆಟಗಾರರಿದ್ದಾರೆ ಎನ್ನಲಾಗಿದೆ. 2024 ಬೆಂಗಳೂರಿನಲ್ಲಿಂದು ಹೈವೋಲ್ಟೇಜ್ ಫೈಟ್ಇದೇ ವೇಳೆ ಹಾರ್ದಿಕ್‌ರ ನಾಯಕತ್ವದ ಬಗ್ಗೆ ತಂಡದ ಕೋಚ್‌ಗಳಿಗೂ ಅಸಮಾಧಾನವಿದ್ದು, ಪ್ರಮುಖವಾಗಿ ಬೌಲರ್‌ಗಳ ನಿರ್ವಹಣೆಯಲ್ಲಿ ಹಾರ್ದಿಕ್‌ ಪಾಂಡ್ಯ ಪದೇಪದೇ ಎಡವಟ್ಟು ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾರ್ದಿಕ್‌ರ ಮೇಲೆ ಬೌಲಿಂಗ್‌ ಕೋಚ್‌ ಲಸಿತ್‌ ಮಾಲಿಂಗ ಸಿಟ್ಟು ಮಾಡಿಕೊಂಡು ಎದ್ದು ಹೋಗುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಮುಂಬೈ ಪರ ರೋಹಿತ್ 200 ಐಪಿಎಲ್‌ ಪಂದ್ಯ ಹೈದರಾಬಾದ್‌: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ 200 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎನ್ನುವ ಹಿರಿಮೆಗೆ ರೋಹಿತ್‌ ಶರ್ಮಾ ಪಾತ್ರರಾದರು. ಬುಧವಾರ ಸನ್‌ರೈಸರ್ಸ್‌ ವಿರುದ್ಧ ಕಣಕ್ಕಿಳಿಯುವ ಮೂಲಕ ರೋಹಿತ್‌ ಈ ಮೈಲಿಗಲ್ಲು ತಲುಪಿದರು. ಐಪಿಎಲ್‌ನಲ್ಲಿ ಒಂದು ತಂಡದ ಪರ 200 ಪಂದ್ಯಗಳನ್ನು ಆಡಿದ 3ನೇ ಆಟಗಾರ ರೋಹಿತ್‌. ಆರ್‌ಸಿಬಿ ಪರ ಕೊಹ್ಲಿ 239, ಚೆನ್ನೈ ಪರ ಧೋನಿ 222 ಪಂದ್ಯಗಳನ್ನಾಡಿದ್ದಾರೆ. ರಾಜಸ್ಥಾನ ವಿರುದ್ಧ ಪಂತ್ ದಾಖಲೆ, ಈ ಸಾಧನೆ ಮಾಡಿದ ಮೊದಲ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟಿಗ! ಇನ್ನೂ ಕೆಲ ಪಂದ್ಯಕ್ಕೆ ಸೂರ್ಯಕುಮಾರ್ ಗೈರು? ನವದೆಹಲಿ: ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವಿಶ್ವ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್‌ ಯಾದವ್‌ ಐಪಿಎಲ್‌ನ ಮುಂಬೈ ಇಂಡಿಯನ್ಸ್‌ನ ಇನ್ನಷ್ಟು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ಸದ್ಯ 33 ವರ್ಷದ ಸೂರ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿದ್ದು, ಇನ್ನಷ್ಟೇ ಅವರಿಗೆ ಆಡಲು ಅನುಮತಿ ಸಿಗಬೇಕಿದೆ. ಅವರು ಮುಂದಿನ ವಾರ ಮುಂಬೈ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ. ನಿಧಾನಗತಿ ಬೌಲಿಂಗ್‌: ಗಿಲ್‌ಗೆ ₹12 ಲಕ್ಷ ದಂಡ ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ, ತಂಡದ ನಾಯಕ ಶುಭ್‌ಮನ್‌ ಗಿಲ್‌ಗೆ ಐಪಿಎಲ್‌ ಆಡಳಿತ ಮಂಡಳಿ 12 ಲಕ್ಷ ರು. ದಂಡ ವಿಧಿಸಿದೆ.