ಲಂಕಾದ ಟೈಮ್ ಔಟ್ ಸೆಲೆಬ್ರೇಷನ್‌ಗೆ ತಿರುಗೇಟು, ಹೆಲ್ಮೆಟ್ ಹಿಡಿದು ಗೆಲುವು ಸಂಭ್ರಮಿಸಿದ ಬಾಂಗ್ಲಾ! ಕ್ರಿಕೆಟ್‌ನಲ್ಲಿ ಭಾರತ-ಪಾಕಿಸ್ತಾನ ವೈರತ್ವ, ಸ್ಲೆಡ್ಜಿಂಗ್ ಇತ್ತೀಚೆಗೆ ಕೊಂಚ ತಣ್ಣಗಾಗಿದೆ. ಆದರೆ ಇದೀಗ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ರೈವಲ್ರಿ ಮಾತ್ರ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಬಾಂಗ್ಲಾಗೆ ತಿರುಗೇಟು ನೀಡಿಲು ಟೈಮ್ ಔಟ್ ಸೆಲೆಬ್ರೇಷನ್ ಮಾಡಿದ್ದ ಶ್ರೀಲಂಕಾ ವಿರುದ್ದ ಬಾಂಗ್ಲಾ ಸೇಡು ತೀರಿಸಿಕೊಂಡಿದೆ. ಸರಣಿ ಗೆಲುವಿನ ಸಂಭ್ರಮದ ಈ ವಿಡಿಯೋ ಭಾರಿ ವೈರಲ್ ಆಗಿದೆ. ಚಿತ್ತೋಗ್ರಾಂ(ಮಾ.18)ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ವೈರತ್ವ, ಸ್ಲೆಡ್ಜಿಂಗ್ ಇದೀಗ ಮತ್ತೊಂದು ಹಂತ ತಲುಪಿದೆ. ಬಾಂಗ್ಲಾದೇಶ ಕ್ರಿಕೆಟ್ ಆಟ ಇತರ ಎಲ್ಲಾ ತಂಡಕ್ಕಿಂತ ಭಿನ್ನ. ಮೈದಾನದಲ್ಲಿ ಸ್ಲೆಡ್ಜಿಂಗ್, ಕಿತ್ತಾಟಗಳು ಇದ್ದೇ ಇರುತ್ತೆ. ಇತ್ತ ಬಾಂಗ್ಲಾದೇಶ ಅಭಿಮಾನಿಗಳು ಕೂಡ ಕೊಂಚ ಅಗ್ರೆಸ್ಸೀವ್ ಸೆಲೆಬ್ರೇಷನ್ ಮಾಡುತ್ತಾರೆ. ಇದೀಗ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿನ ವೈರತ್ವದ ವಿಡಿಯೋ ಭಾರಿ ವೈರಲ್ ಆಗಿದೆ.ಇತ್ತೀಚೆಗೆ ಶ್ರೀಲಂಕಾ ತಂಡ ಟಿ20 ಸರಣಿ ಗೆಲುವಿನ ಬಳಿಕ ಬಾಂಗ್ಲಾದೇಶದ ನಡೆ ಟೀಕಿಸಲು ವಾಚ್ ಮೇಲೆ ಬೆರಳಿಟ್ಟು ಟೈಮ್ ಔಟ್ ಸೆಲೆಬ್ರೇಷನ್ ಮಾಡಿದ್ದರು. ಇದೀಗ ಏಕದಿನ ಸರಣಿಯಲ್ಲಿ ಲಂಕಾ ಮಣಿಸಿದ ಬಾಂಗ್ಲಾದೇಶ ಎಂಜಲೋ ಮ್ಯಾಥ್ಯೂಸ್ ಹೆಲ್ಮೆಟ್ ಕಾರಣ ನೀಡಿದ್ದನ್ನು ಮಿಮಿಕ್ರಿ ಮಾಡಿ ಬಾಂಗ್ಲಾ ತಂಡ ಸಂಭ್ರಮಿಸಿದೆ. ಶ್ರೀಲಂಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ 2-1 ಅಂತರದಲ್ಲಿ ಗೆಲುವು ದಾಖಲಿಸಿದೆ. ಗೆಲುವಿನ ಬಳಿಕ ಟ್ರೋಫಿ ಪಡೆದು ಸಂಭ್ರಮ ಆಚರಿಸಿದ ಬಾಂಗ್ಲಾದೇಶ ಈ ಹೆಲ್ಮೆಟ್ ಸಂಭ್ರಮ ಆಚರಿಸಿದೆ. ಈ ಸಂಭ್ರಮದ ವಿರುದ್ಧ ರೋಚಕ ಕತೆ ಇದೆ. ಇದು ನೇವಾಗಿ ಲಂಕಾ ತಂಡಕ್ಕೆ ನೀಡಿದ ತಿರುಗೇಟು. 😂../pkzmuV5ROp 2 ನಿಮಿಷ ತಡ ಮಾಡಿದ ಮ್ಯಾಥ್ಯೂಸ್ ಟೈಮ್ ಔಟ್, ಕ್ರಿಕೆಟ್ ಇತಿಹಾಸದಲ್ಲೇ ಮೊದಲು! ಏಕದಿನ ಸರಣಿಗೂ ಮೊದಲು ಟಿ20 ಸರಣಿ ನಡೆದಿತ್ತು. 3 ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಸರಣಿ ಗೆದ್ದಿತ್ತು. ಆದರೆ ಟಿ20 ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟಿಗ ಏಂಜಲೋ ಮ್ಯಾಥ್ಯೂಸ್‌ಗೆ ಟೈಮ್ ಔಟ್ ತೀರ್ಪು ನೀಡಲಾಗಿದೆ. ಕ್ರೀಸ್‌ಗೆ ತಡವಾಗಿ ಆಗಮಿಸಿದ್ದಾರೆ ಅನ್ನೋ ಕಾರಣಕ್ಕೆ ಮ್ಯಾಥ್ಯೂಸ್‌ಗೆ ಔಟ್ ತೀರ್ಪು ನೀಡಲಾಗಿತ್ತು. ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅಂಪೈರ್‌ಗೆ ಬಳಿ ಅಪೀಲ್ ಮಾಡಿದ್ದರು. ಈ ವೇಳೆ ತನ್ನ ಹೆಲ್ಮೆಟ್ ಸಮಸ್ಯೆ ಕಾರಣದಿಂದ ತಡವಾಗಿದೆ ಎಂದು ಏಂಜಲೋ ಮ್ಯಾಥ್ಯೂಸ್ ವಿವರಿಸಿದ್ದರು. ಹೆಲ್ಮೆಟ್ ಹಿಡಿದು ಸಮಸ್ಯೆ ವಿವರಿಸುವ ಪ್ರಯತ್ನ ಮಾಡಿದ್ದರು. ಆದರೆ ಶಕೀಬ್ ಮಾತ್ರ ಈ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಇತ್ತ ಅಪೀಲ್ ಹಿಂಪಡೆಯಲಿಲ್ಲ. ಹೀಗಾಗಿ ಅಂಪೈರ್ ಔಟ್ ತೀರ್ಪು ನೀಡಿದ್ದರು. ಇದರ ಬಳಿಕ ಕ್ರೀಡಾ ಸ್ಪೂರ್ತಿ ಚರ್ಚೆಯೂ ಎದ್ದಿತ್ತು. ಏಂಜೆಲೋ ಮ್ಯಾಥ್ಯೂಸ್‌ ಕಾಲೆಳೆದ ವಿಲಿಯಮ್ಸನ್‌, ಬೌಲ್ಟ್‌..! ಆದರೆ ಈ ಟಿ20 ಸರಣಿಯಲ್ಲಿ ಬಾಂಗ್ಲಾ ತಂಡವನ್ನು ಮಣಿಸಿದ ಶ್ರೀಲಂಕಾ ಟ್ರೋಫಿ ಹಿಡಿದು ಸಂಭ್ರಮಿಸಿತ್ತು. ಇದೇ ವೇಳೆ ತಮ್ಮ ವಾಚ್ ಮೇಲೆ ಕೈಯಿಟ್ಟು ಟೈಮ್ ಔಟ್ ಸನ್ನೆ ಮಾಡಿದ್ದರು. ಈ ಮೂಲಕ ಬಾಂಗ್ಲಾಗೆ ತಿರುಗೇಟು ನೀಡಿದ್ದರು. ಇದೀಗ ಬಾಂಗ್ಲಾದೇಶ ಏಕದಿನ ಸರಣಿ ಗೆದ್ದು, ಅಂದು ಏಂಜಲೋ ಮ್ಯಾಥ್ಯೂಸ್ ಪರಿಪರಿಯಾಗಿ ತನ್ನ ಹೆಲ್ಮೆಟ್ ಸಮಸ್ಯೆಯನ್ನು ವಿವರಿಸಿ ಬೇಡಿಕೊಳ್ಳುತ್ತಿರುವದನ್ನು ಮಿಮಿಕ್ರಿ ಮಾಡಿರುವ ಬಾಂಗ್ಲಾದೇಶ ಕ್ರಿಕೆಟಿಗರು, ಲಂಕಾಗೆ ತಿರುಗೇಟು ನೀಡಿದ್ದಾರೆ. ..🔥😎 ' - 😂###../