ಸಾರಾ ತೆಂಡೂಲ್ಕರ್ ಶುಭಮನ್ ಗಿಲ್ ಬ್ರೇಕಪ್ ಆಯ್ತಾ? ಡೇಟಿಂಗ್ ಆ್ಯಪ್‌ನಲ್ಲಿ ಕ್ರಿಕೆಟಿಗನ ಪ್ರೊಫೈಲ್ ಎಲ್ಲ ಸಾಕ್ಷಿಗಳೂ ಸಾರಾ ಶುಭಮನ್ ಜೋಡಿ ಎನ್ನುತ್ತಿರುವಾಗಲೇ ಡೇಟಿಂಗ್ ಆ್ಯಪ್‌ನಲ್ಲಿ ಶುಭಮನ್ ಪ್ರೊಫೈಲ್ ಹೊಂದಿರುವುದು ನೆಟ್ಟಿಗರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಎಲ್ಲ ಸಾಕ್ಷಿಗಳೂ ಸಾರಾ ಶುಭಮನ್ ಜೋಡಿ ಎನ್ನುತ್ತಿರುವಾಗಲೇ ಡೇಟಿಂಗ್ ಆ್ಯಪ್‌ನಲ್ಲಿ ಶುಭಮನ್ ಪ್ರೊಫೈಲ್ ಹೊಂದಿರುವುದು ನೆಟ್ಟಿಗರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯುವ ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಅವರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಸಾಕಷ್ಟು ಹರಡಿತ್ತು. ಇಬ್ಬರೂ ಸಾಕಷ್ಟು ಕಡೆ ಒಟ್ಟಿಗೇ ಕಾಣಿಸಿಕೊಂಡಿದ್ದರು. ನಂತರ ಶುಭ್‌ಮನ್ ಗಿಲ್ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಹೋಟೆಲ್‌ನಲ್ಲಿ ಕಾಣಿಸಿಕೊಂಡು ಮತ್ತಷ್ಟು ಅನುಮಾನಗಳು ಹುಟ್ಟಿದವು. ಯಾವ ಸಾರಾ ಜೊತೆ ಶುಭ್‌ಮನ್ ಡೇಟ್ ಮಾಡುತ್ತಿದ್ದಾರೆ ಎಂಬ ಗೊಂದಲ ಮೂಡಿತ್ತು. ನಂತರ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸಾರಾ ಅಲಿ ಖಾನ್ ತಾವು ಈ ಕ್ರಿಕೆಟಿಗನೊಂದಿಗೆ ಡೇಟ್ ಮಾಡುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದರು. ನಂತರ ಸಚಿನ್ ತೆಂಡೂಲ್ಕರ್ ಮಗಳು ಸಾರಾ ಮತ್ತು ಶುಭಮನ್ ಮತ್ತಷ್ಟು ಬಾರಿ ಜೊತೆಯಾಗಿ ಕಾಣಿಸಿಕೊಂಡರು. ಸಾರಾ ಅಥವಾ ಶುಭ್‌ಮನ್ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ತುಟಿ ಬಿಚ್ಚಿಲ್ಲವಾದರೂ ಎಲ್ಲರೂ ಇವರಿಬ್ಬರ ನಡುವೆ ಏನೋ ಇದೆ ಎಂದು ಸಾಕ್ಷಿಗಳನ್ನು ಕ್ರೋಡೀಕರಿಸತೊಡಗಿದರು. ಎಲ್ಲ ಸಾಕ್ಷಿಗಳೂ ಸಾರಾ ಶುಭಮನ್ ಜೋಡಿ ಎನ್ನುತ್ತಿರುವಾಗಲೇ ಡೇಟಿಂಗ್ ಆ್ಯಪ್‌ನಲ್ಲಿ ಶುಭಮನ್ ಪ್ರೊಫೈಲ್ ಹೊಂದಿರುವುದು ನೆಟ್ಟಿಗರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೌದು, ರೆಡ್ಡಿಟ್, ಇಂಟರ್ನೆಟ್ ಬಳಕೆದಾರರು ಡೇಟಿಂಗ್ ಅಪ್ಲಿಕೇಶನ್ ರಾಯದಲ್ಲಿ ಕ್ರಿಕೆಟಿಗ ಶುಭಮನ್ ಗಿಲ್ ಅವರ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ಸೆರೆ ಹಿಡಿದಿದ್ದಾರೆ. ಪ್ರೊಫೈಲ್‌ನಲ್ಲಿ ಅವರ ವಯಸ್ಸು 34 ಮತ್ತು ಅವರ ನಿವಾಸ ಮುಂಬೈ ಎಂದು ನಮೂದಿಸಲಾಗಿದೆ. ಕ್ರಿಕೆಟಿಗನು ತನ್ನ ಖಾತೆಯಲ್ಲಿ ಒಂದು ಸಣ್ಣ ಬಯೋವನ್ನು ಸಹ ಬರೆದಿದ್ದಾನೆ, 'ಪೇಂಟಿಂಗನ್ನು ಕಲಿತ ಕ್ರೀಡಾಪಟು, ನಾನೊಬ್ಬ ಕಲಾವಿದ ಎಂದು ರಾಯದಲ್ಲಿ ಹೇಳಿಕೊಳ್ಳುತ್ತೇನೆ' ಡೇಟಿಂಗ್ ಆ್ಯಪ್‌ನಲ್ಲಿ ಶುಬ್‌ಮನ್ ಪ್ರೊಫೈಲ್ ಹೊಂದಿದ್ದಕ್ಕೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ಅವರು ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ಮಾಡುತ್ತಿಲ್ಲವೇ ಎಂದು ಕೇಳಿದ್ದಾರೆ. ಡೇಟಿಂಗ್ ಅಪ್ಲಿಕೇಶನ್‌ನಲ್ಲಿನ ಅವರ ಪ್ರೊಫೈಲ್ ನೋಡಿದವರಲ್ಲಿ ಸಾರಾ ಹಾಗೂ ಶುಭಮನ್ ಬ್ರೇಕಪ್ ಆಗಿದ್ದಾರೆಯೇ ಎಂಬ ಅನುಮಾನ ಹುಟ್ಟಿದೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, 'ಅವನು ಸಾರಾ ಜೊತೆ ಡೇಟಿಂಗ್ ಮಾಡಲಿಲ್ಲವೇ? ಅಥವಾ ಸೆಲೆಬ್ರಿಟಿಗಳು ಮತ್ತು ಶ್ರೀಮಂತರು ರಾಯಾವನ್ನು ನೆಟ್‌ವರ್ಕ್ ಮಾಡಲು ಬಳಸುತ್ತಾರೆಯೇ?' ಎಂದಿದ್ದಾರೆ. ಈ ನಡುವೆ ಸಾರಾ ತೆಂಡೂಲ್ಕರ್ ಶುಭ್‌ಮನ್ ಗಿಲ್ ಅವರ ಆತ್ಮೀಯ ಸ್ನೇಹಿತ ಖುಷ್ಪ್ರೀತ್ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹೊಸತಾಗಿ ಹರಿದಾಡುತ್ತಿವೆ. ಕ್ರೀಡಾಂಗಣಗಳು ಮತ್ತು ರೆಡ್ ಕಾರ್ಪೆಟ್ ಈವೆಂಟ್‌ಗಳು ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸಾರಾ ಮತ್ತು ಖುಷ್‌ಪ್ರೀತ್ ಒಟ್ಟಿಗೆ ಕಾಣಿಸಿಕೊಳ್ಳತೊಡಗಿದ್ದಾರೆ.