ಪ್ರಖ್ಯಾತ ಮಾಡೆಲ್‌ ತಾನಿಯಾ ಸಿಂಗ್‌ ಆತ್ಮಹತ್ಯೆ, ವಿಚಾರಣೆಗೆ ಬರುವಂತೆ ಸ್ಟಾರ್‌ ಐಪಿಎಲ್‌ ಕ್ರಿಕೆಟಿಗನಿಗೆ ಸಮನ್ಸ್‌! : ಮಾಡೆಲ್ ತಾನಿಯಾ ಸಿಂಗ್ ಅವರ ಆತ್ಮಹತ್ಯೆಯ ನಂತರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಪರ ಆಡುತ್ತಿರುವ ಆಟಗಾರ ಪೊಲೀಸ್‌ ರಾಡಾರ್‌ಗೆ ಸಿಲುಕಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ 6.5 ಕೋಟಿಗೆ ಮಾರಾಟವಾಗಿರುವ ಆಟಗಾರನಿಗೆ ತನಿಖೆ ಬರುವಂತೆ ನೋಟಿಸ್‌ ನೀಡಿದೆ. ನವದೆಹಲಿ (ಫೆ.21):ಐಪಿಎಲ್‌ ಟೀಮ್‌ ಸನ್‌ರೈಸರ್ಸ್ ಹೈದರಾಬಾದ್ () ತಂಡದ ಆಟಗಾರ ಅಭಿಷೇಕ್ ಶರ್ಮಾ ವಿವಾದಗಳಲ್ಲಿ ಸಿಲುಕಿದ್ದಾರೆ. ಸೂರತ್‌ನ ಖ್ಯಾತ ಮಾಡೆಲ್ ತಾನಿಯಾ ಸಿಂಗ್ ಅವರ ಆತ್ಮಹತ್ಯೆಯ ಕೇಸ್‌ನಲ್ಲಿ ಸ್ಥಳೀಯ ಪೊಲೀಸರು ವಿಚಾರಣೆಗೆ ಬರುವಂತೆ ಸಮನ್ಸ್‌ ಜಾರಿ ಮಾಡಿದ್ದಾರೆ. ಮಾಡೆಲ್‌ ತಾನಿಯಾ ಸಿಂಗ್‌ ತನ್ನ ಕೊನೆಯ ಕರೆಯನ್ನು 23 ವರ್ಷದ ಅಭಿಷೇಕ್‌ ಶರ್ಮಗೆ ಮಾಡಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ಹಲವು ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 28 ವರ್ಷದ ತಾನಿಯಾ ಫ್ಯಾಷನ್ ಡಿಸೈನಿಂಗ್ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಇನ್ಸ್‌ಟಾಗ್ರಾಮ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದು, ಅವರು ಡಿಸ್ಕ್ ಜಾಕಿ, ಮೇಕಪ್ ಕಲಾವಿದೆ ಮತ್ತು ಮಾಡೆಲ್ ಎಂದು ತಮ್ಮ ಇನ್ಸ್‌ಟಾಗ್ರಾಮ್‌ ಬಯೋದಲ್ಲಿ ಬರೆದುಕೊಂಡಿದ್ದಾರೆ. ತಾನಿಯಾ ಆತ್ಮಹತ್ಯೆಯ ನಂತರ, ಪೊಲೀಸರು ಸೂರತ್‌ನಲ್ಲಿ ತಮ್ಮ ತನಿಖೆಯನ್ನು ಆರಂಭ ಮಾಡಿದ್ದಾರೆ, ಈ ಸಮಯದಲ್ಲಿ, ಐಪಿಎಲ್‌ ಟೀಮ್‌ ಸನ್‌ರೈಸರ್ಸ್‌ ತಂಡದ ಆಟಗಾರ ಅಭಿಷೇಕ್ ಶರ್ಮಾ ಹೆಸರು ಕೇಳಿ ಬಂದಿದೆ. ಅಭಿಷೇಕ್ ತಾನಿಯಾ ಸಿಂಗ್ ಜೊತೆ ಸಂಪರ್ಕದಲ್ಲಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.ತಾನಿಯಾ ಮತ್ತು ಅಭಿಷೇಕ್ ಕೆಲವು ಸಮಯದಿಂದ ಸಂಪರ್ಕದಲ್ಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ, ಆದರೆ ಪೊಲೀಸರು ಅಭಿಷೇಕ್ ಅವರ ಸ್ನೇಹಿತನಾಗಿದ್ದರಿಂದ ವಿಚಾರಣೆಗೆ ಕರೆದಿದ್ದಾರೆ. ಫೆಎಬ್ರವರಿ 20 ರಂದು ಮನೆಗೆ ತಡವಾಗಿ ಆಗಮಿಸಿದ್ದ ಮಾಡೆಲ್‌ ತಾನಿಯಾ ಶರ್ಮ, ಬಳಿಕ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯಲ್ಲೇ ಮಗಳ ಸಾವನ್ನು ಕಂಡಿದ್ದ ತಾನಿಯಾ ಸಿಂಗ್‌ ಕುಟುಂಬ ಕಂಗಾಲಾಗಿತ್ತು.ಅಭಿಷೇಕ್‌ ಶರ್ಮಗೆ ಕೊನೆಯ ಕರೆ: ಈ ವೇಳೆ ತಾನಿಯಾ ಕಾಲ್ ಡಿಟೇಲ್ಸ್ ನಲ್ಲಿ ಹಲವು ರಹಸ್ಯಗಳು ಅಡಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೇ ಅವರ ಕೊನೆಯ ಕರೆ ಕೂಡ ಅಭಿಷೇಕ್ ಶರ್ಮಾಗೆ ಆಗಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ. ಹೀಗಾಗಿ ಪ್ರೇಮ ಪ್ರಕರಣವೇ ಆತ್ಮಹತ್ಯೆಗೆ ಕಾರಣವೇ ಎಂಬ ಬಗ್ಗೆ ಸದ್ಯ ಪೊಲೀಸರು ಈ ಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ. ಸೂರತ್‌ನ ವೆಸು ರಸ್ತೆಯಲ್ಲಿ ವಾಸಿಸುತ್ತಿದ್ದ 28 ವರ್ಷದ ಮಾಡೆಲ್ ತಾನಿಯಾ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದೂವರೆ ಎರಡು ವರ್ಷಗಳಿಂದ ಫ್ಯಾಷನ್ ಡಿಸೈನಿಂಗ್ ಮತ್ತು ಮಾಡೆಲಿಂಗ್ ಅಭ್ಯಾಸ ಮಾಡುತ್ತಿದ್ದರು ಎನ್ನುವ ಮಾಹಿತಿ ಬಂದಿದೆ. ಮಾಡೆಲ್ ತಾನಿಯಾ ಆತ್ಮಹತ್ಯೆ ಮಾಡಿಕೊಂಡ ನಂತರವೇ ಪೊಲೀಸರು ಪ್ರಾಥಮಿಕ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಚಿನ್‌ ತೆಂಡುಲ್ಕರ್ ಬಳಿಕ ವಿರಾಟ್‌ ಕೊಹ್ಲಿಗೂ ತಟ್ಟಿದ ಡೀಪ್‌ ಫೇಕ್‌ ಬಿಸಿ! ಆ ವಿಡಿಯೋ ಅವರದ್ದಲ್ಲ..! ಅಭಿಷೇಕ್ ಶರ್ಮಾ ಪ್ರಸ್ತುತ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆಲ್ರೌಂಡ್‌ ಆಟಗಾರ. ಅವರು ಐಪಿಎಲ್‌ನಲ್ಲಿ 47 ಪಂದ್ಯಗಳಲ್ಲಿ 137.38 ಸ್ಟ್ರೈಕ್ ರೇಟ್‌ನಲ್ಲಿ 893 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 75 ರನ್. ಐಪಿಎಲ್‌ನಲ್ಲಿ ಇದುವರೆಗೆ 4 ಅರ್ಧ ಶತಕ ಹಾಗೂ 9 ವಿಕೆಟ್‌ಗಳನ್ನು ಪಡೆದಿದ್ದಾರೆ. 2022ರ ಐಪಿಎಲ್ ಹರಾಜಿನಲ್ಲಿ ಅಭಿಷೇಕ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 6.5 ಕೋಟಿ ರೂ.ಗೆ ಖರೀದಿಸಿತ್ತು.\ ಮಗು ಆಗಿ 5 ದಿನ ಆದ್ಮೇಲೆ ವಿಷ್ಯ ಬಹಿರಂಗ, ಪ್ರೆಗ್ನೆನ್ಸಿ ವಿಷಯಾನೂ ವಿರುಷ್ಕಾ ಗುಟ್ಟಲ್ಲಿಟ್ಟಿದ್ದೇಕೆ?