ಈ ಆಟಗಾರನ ಜತೆ ಫೋಟೋ ಶೇರ್ ಮಾಡಿದ ಸಾನಿಯಾ ಮಿರ್ಜಾ..! ಆ ದಿನಗಳನ್ನು ಮೆಲುಕುಹಾಕಿದ ಮೂಗುತಿ ಸುಂದರಿ ಭಾರತದ ದಿಗ್ಗಜ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ಖ್ಯಾತ ಟೆನಿಸಿಗನೊಂದಿಗೆ ಫೋಟೋ ಹಂಚಿಕೊಂಡು ಆತನ ಗುಣಗಾನ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಭಾರತದ ದಿಗ್ಗಜ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ಖ್ಯಾತ ಟೆನಿಸಿಗನೊಂದಿಗೆ ಫೋಟೋ ಹಂಚಿಕೊಂಡು ಆತನ ಗುಣಗಾನ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ 14 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಶೋಯೆಬ್ ಮಲಿಕ್ ಅವರಿಂದ ಬೇರ್ಪಟ್ಟ ಬೆನ್ನಲ್ಲೇ ಭಾರತೀಯ ಫ್ಯಾನ್ಸ್‌ಗಳಿಂದ ಸಾನಿಯಾ ಮಿರ್ಜಾಗೆ ಸಾಕಷ್ಟು ಸಪೋರ್ಟ್ ಸಿಕ್ಕಿದೆ. ಇದೆಲ್ಲದರ ನಡುವೆ ಮೂಗುತಿ ಸುಂದರಿ ಸಾನಿಯಾ ಮಿರ್ಜಾ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೌದು ಟೆನಿಸ್ ತಾರೆ ಸಾನಿಯಾ ಮಿರ್ಜಾ, ಭಾರತದ ಟೆನಿಸ್ ದಂತಕಥೆಯಾಗಿರುವ ರೋಹನ್ ಬೋಪಣ್ಣ ಅವರ ಜತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಬೋಪಣ್ಣ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "25 ವರ್ಷಗಳ ಹಿಂದೆ ನ್ಯಾಷನಲ್ ಲೆವೆಲ್ ಸ್ಪರ್ಧೆಯಲ್ಲಿ ಡಬಲ್ಸ್ ಆಡಿದ ಇಬ್ಬರು ಮಕ್ಕಳಿಗೆ ನಾವಿಬ್ಬರೂ ಮುಂದೊಂದು ದಿನ ವಿಶ್ವದ ನಂಬರ್ 1 ಆಗುತ್ತೇವೆ ಎಂದು ಯಾರಾದರೂ ಹೇಳಿದರೆ, ನಾವು ಅದನ್ನು ತಮಾಷೆ ಎಂದು ಭಾವಿಸಿ ಮುಂದಿನ ಚಿತ್ರದಲ್ಲಿರುವಂತೆ ನಗುತ್ತಿದ್ದೆವು ಎಂದು ಕ್ಯಾಪ್ಷನ್ ನೀಡಿದ್ದಾರೆ. ನೀವದನ್ನು ಸಾಧಿಸಿದ್ದೀರ. ಅಭಿನಂದನೆಗಳು ನಿಮಗೆ" ಎಂದು ಸಾನಿಯಾ ಬರೆದುಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ನಡೆದ 2024ರ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ, ಮ್ಯಾಥ್ಯೂ ಏಯ್ಡನ್ ಜತೆಗೂಡಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ 43 ವರ್ಷದ ರೋಹನ್ ಬೋಪಣ್ಣ ಓಪನ್ ಎರಾದಲ್ಲಿ ಗ್ರ್ಯಾನ್‌ ಸ್ಲಾಂ ಜಯಿಸಿದ ಅತ್ಯಂತ ಹಿರಿಯ ಪುರುಷ ಟೆನಿಸಿಗ ಎನ್ನುವ ಕೀರ್ತಿಗೆ ಭಾಜನರಾಗಿದ್ದರು. ಬೋಪಣ್ಣ ಅವರ ಈ ಅದ್ಭುತ ಪ್ರದರ್ಶನದ ನೆರವಿನಿಂದ ಪುರುಷರ ಡಬಲ್ಸ್‌ ವಿಭಾಗದಲ್ಲಿ ನಂ.1 ಶ್ರೇಯಾಂಕಿತ ಟೆನಿಸಿಗ ಎನಿಸಿಕೊಂಡರು.