ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳಾಪಟ್ಟಿ ಪ್ರಕಟ: ಬೆಂಗಳೂರು ಕ್ರಿಕೆಟ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್..! ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಬೆಂಗಳೂರು ಹಾಗೂ ಡೆಲ್ಲಿಯಲ್ಲಿ ನಡೆಯಲಿದ್ದು, ಮೊದಲ ಹಂತದ ಪಂದ್ಯಗಳು ಬೆಂಗಳೂರಿನಲ್ಲೇ ನಡೆದರೆ, ದ್ವಿತಿಯಾರ್ಧ ಹಾಗೂ ನಾಕೌಟ್ & ಫೈನಲ್ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಎಲಿಮಿನೇಟರ್ ಪಂದ್ಯವು ಮಾರ್ಚ್ 15ರಂದು ನಡೆದರೆ, ಫೈನಲ್ ಪಂದ್ಯವು ಮಾರ್ಚ್ 17ರಂದು ನಡೆಯಲಿದೆ. ಮುಂಬೈ(ಜ.23): ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಬಿಸಿಸಿಐ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ್ದು, ಬೆಂಗಳೂರು ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ನೀಡಿದೆ. ಚೊಚ್ಚಲ ಆವೃತ್ತಿಯ ಸಂಪೂರ್ಣ ವುಮೆನ್ಸ್ ಪ್ರೀಮಿಯರ್ ಲೀಗ್ ಮುಂಬೈನಲ್ಲಿ ನಡೆದಿತ್ತು. ಆದರೆ ಇದೀಗ ಎರಡನೇ ಆವೃತ್ತಿಯ ಟೂರ್ನಿ ಅರ್ಧ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ನಮ್ಮ ಕ್ರಿಕೆಟ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ನೀಡಿದೆ. ಹೌದು, ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಮುಂಬರುವ ಫೆಬ್ರವರಿ 23ರಿಂದ ಆರಂಭವಾಗಲಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಲಿವೆ. ಸಂಜೆ 7.30ರಿಂದ ಪಂದ್ಯ ಆರಂಭವಾಗಲಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ರೆಡಿ..! ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಬೆಂಗಳೂರು ಹಾಗೂ ಡೆಲ್ಲಿಯಲ್ಲಿ ನಡೆಯಲಿದ್ದು, ಮೊದಲ ಹಂತದ ಪಂದ್ಯಗಳು ಬೆಂಗಳೂರಿನಲ್ಲೇ ನಡೆದರೆ, ದ್ವಿತಿಯಾರ್ಧ ಹಾಗೂ ನಾಕೌಟ್ & ಫೈನಲ್ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಎಲಿಮಿನೇಟರ್ ಪಂದ್ಯವು ಮಾರ್ಚ್ 15ರಂದು ನಡೆದರೆ, ಫೈನಲ್ ಪಂದ್ಯವು ಮಾರ್ಚ್ 17ರಂದು ನಡೆಯಲಿದೆ. . , . . @@wplt20pic../h6oDlJuazm ಕಳೆದ ಬಾರಿಯಂತೆ ಈ ಬಾರಿ ಕೂಡಾ 5 ಮಹಿಳಾ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಒಟ್ಟು 22 ಪಂದ್ಯಗಳ ಪೈಕಿ 11 ಪಂದ್ಯಗಳು ಬೆಂಗಳೂರು ಹಾಗೂ 11 ಪಂದ್ಯಗಳು ಡೆಲ್ಲಿಯಲ್ಲಿ ನಡೆಯಲಿವೆ. ಫೆಬ್ರವರಿ 23ರಿಂದ ಮಾರ್ಚ್ 04ರವರೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟಗಳು ನಡೆಯಲಿವೆ. ಇದಾದ ಬಳಿಕ ಟೂರ್ನಿಯು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು 24 ದಿನಗಳ ಅವಧಿಯ ಈ ಟೂರ್ನಿಯಲ್ಲಿ ಪ್ರತಿದಿನ ಒಂದೊಂದು ಪಂದ್ಯ ನಡೆಯಲಿದೆ. ಸಾನಿಯಾಗೆ ಮಲಿಕ್ ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ, ಆದ್ರೂ ಪಾಕ್ ಕ್ರಿಕೆಟಿಗನ ಬಲೆಗೆ ಬಿದ್ದಿದ್ದು ಹೇಗೆ? ವೇಳಾಪಟ್ಟಿ ಹೀಗಿದೆ ನೋಡಿ ಬೆಂಗಳೂರು ಚರಣದ ಪಂದ್ಯಗಳು 23: 24: 25: 26: 27: 28: 29: 1: 2: 3: 4: ಡೆಲ್ಲಿ ಚರಣದ ಪಂದ್ಯಗಳು 5: 6: 7: 8: 9: 10: 11: 12: 13: 15: ಎಲಿಮಿನೇಟರ್ ಪಂದ್ಯ 17: ಫೈನಲ್ ಪಂದ್ಯ