ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ, ಚಿರಾಗ್-ಸಾತ್ವಿಕ್‌ಗೆ ಖೇಲ್ ರತ್ನ! 2023ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟಗೊಂಡಿದೆ. ವೇಗಿ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಭಾಜನರಾಗಿದ್ದರೆ, ಬ್ಯಾಡ್ಮಿಂಟನ್ ಪಟುಗಳಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿ ರಾಜ್ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿಯ ಕ್ರೀಡಾ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಲಿಸ್ಟ್ ಇಲ್ಲಿದೆ. ನವದೆಹಲಿ(ಡಿ.20) ಕೇಂದ್ರ ಕ್ರೀಡಾ ಸಚಿವಾಲಯ ಪ್ರಸಕ್ತ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟಿಸಿದೆ. ಮೇಜನ್ ಧ್ಯಾನ್‌ಚಂದ್ ಖೇಲ್ ರತ್ನಿ ಪ್ರಶ್ತಿಗೆ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿರಾಕ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿ ರಾಜ್‌ ಆಯ್ಕೆಯಾಗಿದ್ದಾರೆ. ಇನ್ನು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ದಾಳಿ ಸಂಘಟಿಸಿ ದಾಖಲೆ ಬರೆದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅರ್ಜು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಮಿ ಸೇರಿದಂತೆ 26 ಕ್ರೀಡಾ ಸಾಧಕರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜನವರಿ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. 2023ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ. ಅರ್ಜುನ್ ಪ್ರಶಸ್ತಿ:ಒಜಸ್ ಪ್ರವೀಣ್ ಡಿಯೋಟಾಲೆ: ಆರ್ಚರಿಆದಿತಿ ಗೋಪಿಚಂದ್ ಸ್ವಾಮಿ: ಆರ್ಚರಿಶ್ರೀಶಂಕರ್ ಎಂ: ಅಥ್ಲೆಟಿಕ್ಸ್ಪಾರುಲ್ ಚೌಧರಿ: ಅಥ್ಲೆಟಿಕ್ಸ್ಮೊಹಮ್ಮದ್ ಹುಸಾಮುದ್ದೀನ್: ಬಾಕ್ಸಿಂಗ್ಆರ್ ವೈಶಾಲಿ: ಚೆಸ್ಮೊಹಮ್ಮದ್ ಶಮಿ: ಕ್ರಿಕೆಟ್ಅನುಷ್ ಅಗರ್ವಾಲ್: ಕುದುರೆ ಸವಾರಿದಿವ್ಯಾಕೃತಿ ಸಿಂಗ್: ಇಕ್ವೆಸ್ಟ್ರಿಯನ್ ಡ್ರೆಸ್ಸೇಜ್ದೀಕ್ಷಾ ದಾಗರ್: ಗಾಲ್ಫ್ಕ್ರಿಶನ್ ಬಹದ್ದೂರ್ ಪಾಠಕ್: ಹಾಕಿಪುಖ್ರಂಬಂ ಸುಶೀಲಾ ಚಾನು: ಹಾಕಿಪವನ್ ಕುಮಾರ್: ಕಬಡ್ಡಿರಿತು ನೇಗಿ: ಕಬಡ್ಡಿನಸ್ರೀನ್: ಖೋ-ಖೋಪಿಂಕಿ: ಲಾನ್ ಬೌಲ್ಸ್ಐಶ್ವರಿ ಪ್ರತಾಪ್ ಸಿಂಗ್ ತೋಮರ್: ಶೂಟಿಂಗ್ಇಶಾ ಸಿಂಗ್ :ಶೂಟಿಂಗ್ಹರಿಂದರ್ ಪಾಲ್ ಸಿಂಗ್ ಸಂಧು : ಸ್ಕ್ವಾಷ್ಅಹಿಕಾ ಮುಖರ್ಜಿ: ಟೇಬಲ್ ಟೆನಿಸ್ಸುನೀಲ್ ಕುಮಾರ್: ಕುಸ್ತಿಆಂಟಿಮ್: ಕುಸ್ತಿನವೋರೆಮ್ ರೋಶಿಬಿನಾ ದೇವಿ: ವುಶುಶೀತಲ್ ದೇವಿ : ಪ್ಯಾರಾ ಆರ್ಚರಿಅಜಯ್ ಕುಮಾರ್ ರೆಡ್ಡಿ : ಅಂಧರ ಕ್ರಿಕೆಟ್ಪ್ರಾಚಿ ಯಾದವ್ : ಪ್ಯಾರಾ ಕ್ಯಾನೋಯಿಂಗ್ ಬೆಂಗಳೂರು ಬುಲ್ ಭರತ್‌ಗೆ ಪುಟ್ಟ ಬಾಲಕ ಹೇಗೆ ಹುರಿದುಂಬಿಸ್ತಿದ್ದಾನೆ ನೋಡಿ: ವೀಡಿಯೋ ಸಖತ್ ವೈರಲ್‌ ದ್ರೋಣಾಚಾರ್ಯ ಪ್ರಶಸ್ತಿ( ಸಾಮಾನ್ಯ ವಿಭಾಗ)ಲಲಿತ್ ಕುಮಾರ್: ಕುಸ್ತಿಆರ್‌ಬಿ ರಮೇಶ್: ಚೆಸ್ಮಹವೀರ್ ಪ್ರಸಾದ್ ಸೈನಿ: ಪ್ಯಾರಾ ಅಥ್ಲೆಟಿಕ್ಸ್ಶಿವೇಂದ್ರ ಸಿಂಗ್: ಹಾಕಿಗಣೇಶ್ ಪ್ರಭಾಕರ್ : ಮಲ್ಲಕಂಬ ದ್ರೋಣಾಚಾರ್ಯ ಪ್ರಶಸ್ತಿ(ಜೀವನಮಾನ ಶ್ರೇಷ್ಠ ಸಾಧನೆ)ಜಸ್ಕೀಕರತ್ ಸಿಂಗ್ ಗ್ರೆವಾಲ್ : ಗಾಲ್ಫ್ಭಾಸ್ಕರನ್ ಇ : ಕಬಡ್ಡಿಜಯಂತ್ ಕುಮಾರ್ ಪುಶಿಲಾಲ್ : ಟೇಬಲ್ ಟೆನಿಸ್ ಧ್ಯಾನ್ ಚಂದ್ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಮಂಜೂಷ ಕನ್ವಾರ್ : ಬ್ಯಾಡ್ಮಿಂಟನ್ವೀನಿತ್ ಕುಮಾರ್ ಶರ್ಮಾ : ಹಾಕಿಕವಿತಾ ಸೆಲ್ವರಾಜ್ : ಕಬಡ್ಡಿ ಮೂವರು ದಿಗ್ಗಜರಿಗೆ ಕೊನೆಯ ಐಪಿಎಲ್..! ಟ್ರೋಫಿಯೊಂದಿಗೆ ವಿದಾಯ ಹೇಳ್ತಾರಾ ತ್ರಿಮೂರ್ತಿಗಳು..? ಮೌಲಾನಾ ಅಬುಲ್ ಕಲಾಮ್ ಅಜಾದ್ ಟ್ರೋಫಿ 2023ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ, ಓವರಾಲ್ ವಿನ್ನರ್ಲವ್ಲಿ ಪ್ರೊಫೆಶನ್ ಯೂನಿವರ್ಸಿಟಿ, ಪಂಜಾಬ್, ಮೊದಲ ರನ್ನರ್ ಅಪ್ಕುರುಕ್ಷೇತ್ರ ವಿಶ್ವಿವಿದ್ಯಾಲಯ, ಕುರುಕ್ಷೇತ್ರ, 2ನೇ ರನ್ನರ್ ಅಪ್