'ಮಹಾನಟಿ' ಫಿನಾಲೆಗೆ ಕ್ಷಣಗಣನೆ, ಯಾರ ಮುಡಿಗೆ ಸೇರಲಿದೆ ಮಹಾನಟಿ ಕಿರೀಟ? ಝೀ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಮಹಾನಟಿ ಫಿನಾಲೆ ಹಂತ ತಲುಪಿದ್ದು, ಮಹಾನಟಿ ಕಿರೀಟ ಯಾರ ಮುಡಿ ಸೇರಲಿದೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ನಿಮ್ಮ ಆಯ್ಕೆಯ ಮಹಾನಟಿ ಯಾರು? ಝೀ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಮಹಾನಟಿ ಫಿನಾಲೆ ಹಂತ ತಲುಪಿದ್ದು, ಮಹಾನಟಿ ಕಿರೀಟ ಯಾರ ಮುಡಿ ಸೇರಲಿದೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ನಿಮ್ಮ ಆಯ್ಕೆಯ ಮಹಾನಟಿ ಯಾರು? ಕಳೆದ 3 ತಿಂಗಳಿನಿಂದ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಿದಂತಹ ರಿಯಾಲಿಟಿ ಶೋ ಮಹಾನಟಿ ( ). ಕಳೆದ ವಾರವಷ್ಟೇ ಸೆಮಿ ಫಿನಾಲೆ ಮುಗಿದಿದ್ದು, ಐವರು ಪ್ರತಿಭಾನ್ವಿತ ನಟಿಯರು ಫಿನಾಲೆ ಹಂತ ತಲುಪಿದ್ದಾರೆ. ಇದೀಗ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಕನ್ನಡಿಗರಿಗೆ ಸಖತ್ ಮನರಂಜನೆ ನೀಡಿ, ಮೂರು ತಿಂಗಳ ಕಾಲ ರಸದೌತಣ ನೀಡಿದ ಮಹಾನಟಿ ರಿಯಾಲಿಟಿ ಶೋ ಕೊನೆಯ ಹಂತ ತಲುಪಿದ್ದು, ಮಹಾಫಿನಾಲೆಗೆ ಎಲ್ಲಾ ತಯಾರಿ ನಡೆಯುತ್ತಿದೆ. ಯಾರ ಮುಡಿಗೇರಲಿದೆ ಮಹಾನಟಿ ಕಿರೀಟ ಎನ್ನುವ ಕಾತುರ ಎಲ್ಲರಲ್ಲೂ ಮನೆ ಮಾಡಿದೆ. ಮಹಾನಟಿ ರಿಯಾಲಿಟಿ ಶೋ ಆರಂಭವಾದಾಗಿನಿಂದಲೂ ಜನರಿಗೆ ತುಂಬಾ ಇಷ್ಟವಾಗಿತ್ತು, ಅದರಲ್ಲೂ ಅನುಶ್ರೀಯವರ ನಿರೂಪಣೆಯಲ್ಲಿ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿತ್ತು. ಜೊತೆಗೆ ಜಡ್ಜ್ ಗಳಾಗಿ ರಮೇಶ್ ಅರವಿಂದ್ ( ), ಪ್ರೇಮಾ, ತರುಣ್ ಸುಧೀರ್ ಮತ್ತು ನಿಶ್ವಿಕಾ ನಾಯ್ಡು ಅವರು ಕಾರ್ಯಕ್ರಮಕ್ಕೆ ಹೊಸ ಕಳೆ ತಂದಿದ್ದರು. ಆರಂಭದಿಂದ ಅದ್ಭುತವಾಗಿ ನಟಿಸುವ ಮೂಲಕ, ಜನಮನ ಗೆದ್ದ ಐವರು ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆ ತಲುಪಿದ್ದಾರೆ. ಚಿತ್ರದುರ್ಗದ ಗಗನ, ಮೈಸೂರಿನ ಪ್ರಿಯಾಂಕ, ಕಾರವಾರದ ಶ್ವೇತಾ ಭಟ್​, ಮೂಡಬಿದಿರೆಯ ಆರಾಧನಾ ಭಟ್( )​ ಹಾಗೂ ತರಿಕೆರೆಯ ಧನ್ಯಶ್ರೀ ಫಿನಾಲೆ ತಲುಪಿದ ಸ್ಪರ್ಧಿಗಳು. ಐವರು ಸ್ಪರ್ಧಿಗಳು ಸಹ ತಮ್ಮ ಅಮೋಘ ನಟನೆಯ ಮೂಲಕ ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸುತ್ತಾ, ಸೀರಿಯಲ್ ಗಳಲ್ಲಿ ಅದ್ಭುತವಾಗಿ ನಟಿಸುತ್ತಾ, ರೊಮ್ಯಾಂಟಿಕ್ ಹಾಡುಗಳಿಗೆ ಮೈ ಬಳಕಿಸುತ್ತಾ, ಫೈಟಿಂಗ್ ದೃಶ್ಯಗಳಲ್ಲಿ ತಮ್ಮ ಖದರ್ ತೋರಿಸುತ್ತಾ ನವರಸಗಳನ್ನು ಅದ್ಭುತವಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರು ಮಹಾನಟಿ ಕಿರೀಟ ಮುಡಿಗೇರಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ. ಜನರ ಕಾಮೆಂಟ್, ಅಭಿನಯ ಎಲ್ಲಾ ನೋಡಿದ್ರೆ ಪ್ರಿಯಾಂಕಗೆ () ಜನರು ಹೆಚ್ಚಿನ ಬೆಂಬಲ ತೋರಿಸಿದ್ದಾರೆ. ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಕರ್ನಾಟಕದ ಕ್ರಶ್ ಆಗಿರು ಪ್ರಿಯಾಂಕಾ ಅವರೇ ಮೊದಲ ಮಹಾನಟಿ ವಿನ್ನರ್ ಆಗಿ ಹೊರಹೊಮ್ಮುತ್ತಾರೆ ಎಂಬುದು 7 ಕೋಟಿ ಕನ್ನಡಿಗರ ಆಸೆಯಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಾರು ಆ ಸ್ಥಾನ ಪಡೆಯಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು. ಇನ್ನು ಜುಲೈ 11 ರಂದು ಗ್ರ್ಯಾಂಡ್ ಫಿನಾಲೆ ( ) ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಚಂದನವನದ ಹೆಸರಾಂತ ನಿರ್ದೆಶಕರಾದ ಶಶಾಂಕ್, ಮಂಸೋರೆ, ಅಲೆಮಾರಿ ಸಂತು, ಜಯತೀರ್ಥ, ಪನ್ನಗಾಭರಣ ಐವರು ಫೈನಲಿಸ್ಟ್ ಗಳಿಗಾಗಿ ಕಿರುಚಿತ್ರ ನಿರ್ದೇಶಿಸಿದ್ದು, ಗುರುವಾರ ಜುಲೈ 11 ರಂದು ಕಿರುಚಿತ್ರ ಪ್ರದರ್ಶನವಾಗಲಿದೆ. ವೀಕ್ಷಕರಿಗೂ ಮಹಾನಟಿಯರು ಮತ್ತು ಜಡ್ಜಸ್ ಗಳ ಜೊತೆ ಕುಳಿತು ಸಿನಿಮಾ ನೋಡುವ ಅವಕಾಶವೂ ಇದೆ. ನಿಮಗೂ ಭಾಗವಹಿಸೋ ಆಸಕ್ತಿ ಇದ್ರೆ ಇವತ್ತೆ ಬುಕ್ ಮಾಡಿ.