ಆಷಾಢ ನೆಪದಲ್ಲಿ ತವರು ಸೇರಿ ಇವ್ರ ಜೊತೆ ರೊಮಾನ್ಸಾ? ಅಮೃತಧಾರೆ ಭೂಮಿಕಾ ಕಾಲೆಳೆದ ನೆಟ್ಟಿಗರು! ಅಮೃತಧಾರೆಯಲ್ಲಿ ಭೂಮಿಕಾ-ಗೌತಮ್​ ದೂರದೂರವಾಗಿ ವಿರಹವೇದನೆ ಅನುಭವಿಸುತ್ತಿದ್ದರೆ, ತವರು ಸೇರಿದ ಭೂಮಿಕಾ ಹೀಗೆ ಮಾಡೋದಾ? ಕಾಲೆಳೆಯುತ್ತಿರುವ ನೆಟ್ಟಿಗರು. ಸದ್ಯ ಭೂಮಿಕಾ ಮತ್ತು ಗೌತಮ್​ ವಿರಹ ವೇದನೆ ಅನುಭವಿಸುತ್ತಿದ್ದಾರೆ. ಆಷಾಢ ಎನ್ನುವ ಕಾರಣಕ್ಕೆ ಭೂಮಿಕಾ ಮನೆಯವರು ಮಗಳನ್ನು ತವರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇವಳು ಇಲ್ಲದೇ ಅವನು, ಅವನು ಇಲ್ಲದೇ ಇವಳು ಇರಲು ಆಗ್ತಿಲ್ಲ. ಕರೆಂಟ್​ ಹೋದಾಗ ಅತ್ತ ಗೌತಮ್​ಗೆ ಭೂಮಿಕಾ ನೆನಪಾದ್ರೆ, ಡುಮ್ಮ ಸರ್​ ಗೊರಕೆ ಸದ್ದು ಇಲ್ಲದೇ ಭೂಮಿಗೆ ನಿದ್ದೆ ಬರ್ತಿಲ್ಲ. ಅಂತೂ ಆನಂದ್​ಗೆ ಹೇಳಿ ಗೌತಮ್​ನ ಗೊರಕೆ ಶಬ್ದವನ್ನು ರೆಕಾರ್ಡ್​ ಮಾಡಿಕೊಂಡು ಭೂಮಿಕಾಗೆ ಕಳಿಸಿ ಆಗಿದೆ. ಒಟ್ಟಿನಲ್ಲಿ ಇಬ್ಬರದ್ದೂ ಒಂದು ರೀತಿಯ ನರಕಯಾತನೆ. ಈ ಆಷಾಢ ಯಾಕೆ ಬಂತೋ ಎಂದು ನವ ದಂಪತಿ ಮನಸ್ಸಿನಲ್ಲಿಯೇ ಬೈದುಕೊಳ್ಳುವ ಹಾಗೆ ಇಲ್ಲಿಯೂ ಈ ಜೋಡಿ ಶಪಿಸುತ್ತಲೇ ಇದೆ. ಅದೇ ಇನ್ನೊಂದೆಡೆ, ಭೂಮಿಕಾ ಈಗ ಕೃಷ್ಣ ಅವರ ಜೊತೆ ರೊಮಾಂಟಿಕ್​ ಮೂಡ್​ನಲ್ಲಿ ಇದ್ದಾರೆ. ಅಂದಹಾಗೆ, ಭೂಮಿಕಾ ಅವರ ರಿಯಲ್​ ಹೆಸರು ಅರ್ಥಾತ್​ ಛಾಯಾ ಸಿಂಗ್​ ಹಾಗೂ ಅವರ ರಿಯಲ್​ ಪತಿಯ ಹೆಸರು ಕೃಷ್ಣ. ಈ ಜೋಡಿ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಇದ್ದು, ಆಗಾಗ್ಗೆ ಫೋಟೋ, ವಿಡಿಯೋ, ರೀಲ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕಡಲತೀರದಲ್ಲಿ ಜೋಡಿ ರೀಲ್ಸ್​ ಮಾಡಿದ್ದು, ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅಲ್ಲಿ ಡುಮ್ಮಾ ಸರ್​ ವಿರಹವೇದನೆಯಿಂದ ಬಳಲುತ್ತಿದ್ದರೆ, ಇಲ್ಲಿ ಇನ್ನೊಬ್ಬರ ಜೊತೆ ರೊಮಾನ್ಸ್​ ಮಾಡ್ತಿದ್ದೀರಾ ಎಂದು ಕೆಲವರು ಪ್ರಶ್ನಿಸಿದರೆ, ಆಷಾಢದ ನೆಪದಲ್ಲಿ ತವರು ಮನೆ ಸೇರಿದ್ದು ಇದಕ್ಕೇನಾ ಎಂದು ಮತ್ತೆ ಕೆಲವರು ರೇಗಿಸುತ್ತಿದ್ದಾರೆ. ಮಾಮೂಲಿನಂತೆ ಒಂದಿಷ್ಟು ಮಂದಿ, ಭೂಮಿಕಾ ಆಗಿ ಛಾಯಾ ಸಿಂಗ್​ ಅವರ ನಟನೆಯನ್ನು ಹಾಡಿ ಕೊಂಡಾಡುತ್ತಿದ್ದಾರೆ. ಅಮ್ಮನ ಮದುವೆಗೆ ಸಿಹಿ ಕ್ಯೂಟ್​ ವಿಡಿಯೋಶೂಟ್​: ದಯವಿಟ್ಟು ಬಾಲಕಿಯ ಭವಿಷ್ಯ ಹಾಳುಮಾಡ್ಬೇಡಿ ಅಂತಿರೋ ಫ್ಯಾನ್ಸ್​ ಇನ್ನು ಈ ರಿಯಲ್​ ಜೋಡಿಯ ಕುರಿತು ಹೇಳುವುದಾದರೆ, ದಂಪತಿಯ ಮದುವೆಯಾಗಿ 11 ವರ್ಷಗಳೇ ಕಳೆದಿವೆ. ಬೆಂಗಳೂರಿನ ಬೆಡಗಿ ಛಾಯಾ ಸಿಂಗ್ ನಿಜ ಜೀವನದಲ್ಲಿ ತುಂಬಾ ಸಾಫ್ಟ್​ ಅಂತೆ. ಅವರಿಗೆ ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ ನಟಿಸುವ ಸಮಯದಲ್ಲಿ. ಕೃಷ್ಣ ಅವರೂ ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 'ಆನಂದಪುರತು ವೀಡ್' ( ) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ ನಟಿಸಿದ್ದಾರೆ. ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ () ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಇನ್ನು ರನ್ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ, ಛಾಯಾ ಸಿಂಗ್ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಈ ಧಾರಾವಾಹಿ ಪ್ರಸಾರ ಆಗಿ 197 ಎಪಿಸೋಡ್ ಪ್ರಸಾರ ಆಗಿತ್ತು. ಟಿಆರ್‌ಪಿ ಕಾರಣದಿಂದವೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೋ ಈ ಸೀರಿಯಲ್ ಬಹುಬೇಗ ಅಂತ್ಯ ಆಗಿತ್ತು.ನನ್ನೊಂದಿಗೆ ಸದಾ ಜೊತೆಯಾಗಿರು... ಐ ಲವ್​ ಯು ಎಂದ ನಿವೇದಿತಾ! ಯಾರೀ ಹೊಸ ಎಂಟ್ರಿ? ತಲೆ ಕೆಡಿಸಿಕೊಂಡ ಫ್ಯಾನ್ಸ್​ (@chaya_singh_fp)