ತನ್ನ 2ನೇ ಹೆಂಡ್ತಿ ಸುಂದರವಾಗಿದ್ದಾಳೆ ಎಂದ ಸಹಸ್ಪರ್ಧಿಯ ಕೆನ್ನೆಗೆ ಬಾರಿಸಿದ ಬಿಗ್‌ಬಾಸ್ ಒಟಿಟಿ ಸ್ಪರ್ಧಿ ಬಿಗ್ ಬಾಸ್ ಒಟಿಟಿ 3 ರ ಇತ್ತೀಚಿನ ಸಂಚಿಕೆಯಲ್ಲಿ, ಕೃತಿಕಾ ಮಲಿಕ್ ಬಗ್ಗೆ ಕಾಮೆಂಟ್ ಮಾಡಿದ ಸ್ಪರ್ಧಿ ವಿಶಾಲ್ ಪಾಂಡೆಗೆ ಸಹಸ್ಪರ್ಧಿ ಅರ್ಮಾನ್ ಮಲಿಕ್ ಹೊಡೆದ ಘಟನೆ ನಡೆದಿದೆ. ಬಿಗ್ ಬಾಸ್ ಒಟಿಟಿ 3 ರ ಇತ್ತೀಚಿನ ಸಂಚಿಕೆಯಲ್ಲಿ, ಕೃತಿಕಾ ಮಲಿಕ್ ಬಗ್ಗೆ ಕಾಮೆಂಟ್ ಮಾಡಿದ ಸ್ಪರ್ಧಿ ವಿಶಾಲ್ ಪಾಂಡೆಗೆ ಸಹಸ್ಪರ್ಧಿ ಅರ್ಮಾನ್ ಮಲಿಕ್ ಹೊಡೆದ ಘಟನೆ ನಡೆದಿದೆ. ಪತ್ನಿಯನ್ನು ಸುಂದರಿ ಎಂದು ಕರೆದಿದ್ದಕ್ಕೆ ಸಹ ಸ್ಪರ್ಧಿಗೆ ಕಪಾಳಮೋಕ್ಷ ಮಾಡಿದ ಅರ್ಮಾನ್ ಮಲಿಕ್. ಬಿಗ್ ಬಾಸ್ ನಲ್ಲಿ ಆಗಿರುವುದು ಇಷ್ಟು ಸಹ ಸ್ಪರ್ಧಿ ವಿಶಾಲ್ ಪಾಂಡೆ ( ) ಅರ್ಮಾನ್ ಮಲೀಕ್ ಎರಡನೇ ಪತ್ನಿ ಕೃತಿಕಾ ಸೌಂದರ್ಯದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇದು ಅರ್ಮಾನ್ ಗೆ ಇಷ್ಟವಾಗದೇ ಮಾತಿಗೆ ಮಾತು ಬೆಳೆದು ಅರ್ಮಾನ್ ವಿಶಾಲ್ ಕೆನ್ನೆಗೆ ಭಾರಿಸಿದ್ದಾನೆ. ಇದೀಗ ಈ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹಂಚಿಕೊಂಡ ಕೆಲವು ಅಭಿಪ್ರಾಯಗಳು ಇಲ್ಲಿವೆ. ರಿಯಾಲಿಟಿ ಶೋನಲ್ಲಿ ವಿಶಾಲ್ಗೆ ಕಪಾಳಮೋಕ್ಷ ಮಾಡಿದ ನಂತರ ವಿಶಾಲ್ ಪಾಂಡೆ ಅವರ ಪೋಷಕರು ಮತ್ತು ಸಹೋದರಿ ನೇಹಾ ಪಾಂಡೆ ( ( ಸೇರಿದಂತೆ ಅವರ ಕುಟುಂಬವು ಅರ್ಮಾನ್ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಕೋರಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ನೇಹಾ, ಕೃತಿಕಾ ಮಲಿಕ್ ಬಗ್ಗೆ ವಿಶಾಲ್ ಅವರ ಹೊಗಳಿಕೆಯನ್ನು ಸಮರ್ಥಿಸಿಕೊಂಡರು ಮತ್ತು ವಿಶಾನ್ ಮಾತಿನಲ್ಲಿ ಯಾವ ಕೆಟ್ಟ ಉದ್ದೇಶ ಇರಲಿಲ್ಲ ಎಂದಿದ್ದಾರೆ. ವಿಶಾಲ್ ಅವರಿಗೆ ನ್ಯಾಯ ಮತ್ತು ಬೆಂಬಲ ನೀಡುವಂತೆ ನೇಹಾ ಕೋರಿದ್ದಾರೆ, ಅರ್ಮಾನ್ ಅವರನ್ನು ರಿಯಾಲಿಟಿ ಶೋನಿಂದ ವಜಾಗೊಳಿಸಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ದೈಹಿಕ ಆಕ್ರಮಣಕ್ಕಾಗಿ ಬಿಗ್ ಬಾಸ್ 7 ರಿಂದ ನಟ ಕುಶಾಲ್ ಟಂಡನ್ ನ್ನು( ) ಹೊರಹಾಕಲಾಗಿತ್ತು, ಆದರೆ ಅರ್ಮಾನ್ ಮಲಿಕ್ ಸಹ ಸ್ಪರ್ಧಿಗೆ ಕಪಾಳಮೋಕ್ಷ ಮಾಡಿದ ನಂತರವೂ ಮಲಿಕ್ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಕುಶಲ್ ನಿರಾಶೆ ವ್ಯಕ್ತಪಡಿಸಿದರು. ಸುಂದರವಾಗಿದ್ದಾಳೆ ಅಂದ್ರೆ ಸ್ಪರ್ಧಿ ಮೇಲೆ ಕೈ ಮಾಡೋದು ಎಷ್ಟು ಸರಿ ಎಂದು ಸಹ ಪ್ರಶ್ನಿಸಿದ್ದಾರೆ. ಅನೇಕರು ಶೋನಲ್ಲಿ ಹಿಂಸಾತ್ಮಕವಾಗಿ ವರ್ತಿಸಿದ್ದಕ್ಕಾಗಿ ಅರ್ಮಾನ್ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಕಾರ್ಯಕ್ರಮ ನಿರ್ಮಾತೃಗಳನ್ನು ಪ್ರಶ್ನಿಸಿದ್ದಾರೆ. ಬಿಗ್ ಬಾಸ್ ನಿಯಮದ ಪ್ರಕಾರ ಕೈ ಮಾಡುವವರು, ದೈಹಿಕವಾಗಿ ಹಲ್ಲೆ ಮಾಡುವವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಬೇಕು. ಆದರೆ ಅರ್ಮಾನ್ ಇನ್ನೂ ಅಲ್ಲಿಯೇ ಇದ್ದಾರೆ. ಇದು ವೀಕ್ಷಕರಲ್ಲಿ ಬೇಸರಕ್ಕೆ ಹಾಗೂ ಕೋಪಕ್ಕೆ ಕಾರಣವಾಗಿದೆ.