ಕನ್ನಡದಲ್ಲೂ ಸ್ವಲ್ಪ ರೊಮಾನ್ಸ್​ ಮಾಡ್ರಪ್ಪಾ... ಆ್ಯಂಕರ್ಸ್​ ಅನುಶ್ರೀ-ಅಕುಲ್​ ಬಾಲಾಜಿ ಕಾಲೆಳಿತಿರೋ ನೆಟ್ಟಿಗರು ಆ್ಯಂಕರ್ಸ್​ ಅನುಶ್ರೀ ಮತ್ತು ಅಕುಲ್​ ಬಾಲಾಜಿ ತಮಿಳಿನ ಹಾಡಿಗೆ ರೀಲ್ಸ್​ ಮಾಡಿದ್ದು, ನೆಟ್ಟಿಗರು ಸ್ವಲ್ಪ ಅಸಮಾಧಾನ ಹೊರಹಾಕಿದ್ದಾರೆ. ಅವರು ಹೇಳ್ತಿರೋದೇನು? ಕನ್ನಡ ಕಿರುತೆರೆ ಜನಪ್ರಿಯ ನಿರೂಪಕರಲ್ಲಿ ಸದ್ಯದ ಮಟ್ಟಿಗೆ ಸಕತ್​ ಫೇಮಸ್​ ಆಗಿರುವವರ ಪೈಕಿ ಅನುಶ್ರೀ ಮತ್ತು ಅಕುಲ್​ ಬಾಲಾಜಿ ಸೇರಿದ್ದಾರೆ. ಇವರಿಬ್ಬರ ನಿರೂಪಣಾ ಶೈಲಿಗೆ ಮೆಚ್ಚಿಕೊಂಡವರು ಹಲವರು. ಆ್ಯಂಕರ್​ ಅನುಶ್ರೀ ಅವರು ಮನೆಮಾತಾಗಿರುವ ನಟಿ. ಇದೀಗ ಇವರಿಬ್ಬರೂ ಸೇರಿ 1991ರಲ್ಲಿ ಬಿಡುಗಡೆಯಾಗಿದ್ದ ತಮಿಳು ಚಿತ್ರ ಗುನಾದ ಕಣ್ಮಣಿ ಅನ್ಬೋಡು ಹಾಡಿನ ರೀಮಿಕ್ಸ್​ಗೆ ರೀಲ್ಸ್​ ಮಾಡಿದ್ದು ಫ್ಯಾನ್ಸ್​ ಫಿದಾ ಆಗಿದ್ದಾರೆ. ಅಕುಲ್​ ಅವರು ತಮಿಳು ಕಿರುತೆರೆಯಲ್ಲಿಯೂ ಆ್ಯಕ್ಟೀವ್​ ಆಗಿದ್ದು, ಇದೀಗ ತಮಿಳಿನ ಹಾಡನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಕನ್ನಡಿಗರು ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದು, ನಿಮ್ಮ ರೊಮಾನ್ಸ್​ ಸೂಪರ್​, ಆದ್ರೆ ಕನ್ನಡದಲ್ಲೂ ರೊಮಾನ್ಸ್​ ಮಾಡ್ರಪ್ಪ, ಎಲ್ಲರೂ ಬೇರೆ ಭಾಷೆಯದ್ದೇ ರೀಲ್ಸ್​ ಮಾಡ್ತಿದ್ರೆ ಹೇಗೆ ಅಂತ ಕೇಳ್ತಿದ್ದಾರೆ. ಆ್ಯಂಕರ್​ ಅನುಶ್ರೀ ಎಂದರೆ ಅಲ್ಲಿ ನಗುವಿರಲೇ ಬೇಕು. ತಮ್ಮ ಹಾಸ್ಯದ ಧಾಟಿಯಿಂದ ಆ್ಯಂಕರಿಂಗ್​ ಮಾಡುವಲ್ಲಿ ಅನುಶ್ರೀ ಸಕತ್​ ಫೇಮಸ್​. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ. ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023ರಲ್ಲಿ ಅನುಶ್ರೀ ಅವರಿಗೆ ಹಲವಾರು ಪ್ರಶಸ್ತಿಗಳೂ ಸಂದಿವೆ. ರಾಮನ ಮದುಮಗಳಾಗಿ ಸೀತಾ ರೆಡಿಯಾಗಿದ್ದು ಹೇಗೆ? ವಿಡಿಯೋದೊಂದಿಗೆ ಮಾಹಿತಿ ನೀಡಿದ ವೈಷ್ಣವಿ ಮಂಗಳೂರು ಮೂಲದ ಅನುಶ್ರೀ, ನಮ್ಮ ಟಿವಿ ಚಾನೆಲ್ ನಲ್ಲಿ ಅಂತ್ಯಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು. ಯಲ್ಲಿ ಶುರು ಮಾಡಿದ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ ಇವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡನ್ನು ತಂದು ಕೊಟ್ಟಿತು. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ‘ಬೆಂಕಿಪೊಟ್ಣ’ ಸಿನಿಮಾ ಇವರ ಮೊದಲ ಸಿನಿಮಾ. ಈ ಚಿತ್ರದಲ್ಲಿ, ಮೀಡಿಯಾದಿಂದ ಅವಾರ್ಡ್ ಪಡೆದರು. ‘ಮುರಳಿ ಮೀಟ್ಸ್ ಮೀರಾ’ ಸಿನಿಮಾಗಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದಿದ್ದಾರೆ. ಅನುಶ್ರೀ ಆ್ಯಂಕರ್ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿರುವ ಅನುಶ್ರೀ ಇದರಲ್ಲಿ ಸಿನಿಮಾ ತಾರೆಯರ ಸಂದರ್ಶನ ಮಾಡುತ್ತಾರೆ. ಇನ್ನು ಅಕುಲ್‌ ಬಾಲಾಜಿ ಕೂಡ ಆ್ಯಂಕರ್​ ನಿಂಗ್‌ನಲ್ಲಿ ಸಕತ್‌ ಫೇಮಸ್‌. ಅಗಥ, ಗುಪ್ತ ಗಾಮಿನಿ, ಯಾವ ಜನ್ಮದ ಮೈತ್ರಿ, ಜಗಳಗಂಟಿಯರು ಸೇರಿದಂತೆ ಕೆಲ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೆ ಮಂದಿ ಕಾಡಿಗ ಬಂದ್ರು ಸೇರಿದಂತೆ 30ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. 2007 ರಲ್ಲಿ ತೆರೆಕಂಡ `ಮಿಲನ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿ ಪರದೆಗೆ ಎಂಟ್ರಿಕೊಟ್ಟಿರುವ ಅಕುಲ್‌ ಅವರು, 2008 ರಲ್ಲಿ ತೆರೆಕಂಡ `ಆತ್ಮೀಯ’ ಚಿತ್ರದ ಮೂಲಕ ನಾಯಕ ನಟನಾಗಿದ್ದಾರೆ. ವಾಸ್ತವ, ನೆರಮು, ಬನ್ನಿ, ಮೈನ, ಪ್ಯಾರ್ಗೆ ಆಗ್ಬಿಟ್ಟೈತೆ, ಲೂಸ್​ಗಳು, ಕ್ರೇಜಿಸ್ಟಾರ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮಕ್ಕಳ ಜೊತೆ ಭಾಗ್ಯ ಕುಂಟೆಬಿಲ್ಲೆ: ಪ್ರತಿ ಅಮ್ಮನೂ ಹೀಗಿದ್ರೆ ಅದಕ್ಕಿಂತ ಸ್ವರ್ಗ ಇನ್ನೆಲ್ಲಿದೆ ಅಂತಿರೋ ಫ್ಯಾನ್ಸ್​ ಅನುಶ್ರೀ (@anchor_anushreeofficial)