ಪಬ್‌ನಲ್ಲಿ ಮ್ಯಾಕ್ಸಿ ಮಿನಿ, ಊರಲ್ಲಿ ಗೌರಮ್ಮನ ಸೀರೆ; ಜೈ ಜಗದೀಶ್ ಪುತ್ರಿ ಮತ್ತೆ ಹಿಗ್ಗಾಮುಗ್ಗಾ ಟ್ರೋಲ್ ಹುಟ್ಟೂರಿನಲ್ಲಿ ವಿಶೇಷ ಪೂಜೆ ಮಾಡಿಸಿದ ಜೈ ಜಗದೀಶ್ ಕುಟುಂಬ. ಏನೂ ಮಾಹಿತಿ ನೀಡಿಲ್ಲ ಅಂದ್ರೆ ಹೇಗೆ ಎಂದ ನೆಟ್ಟಿಗರು.... ಹುಟ್ಟೂರಿನಲ್ಲಿ ವಿಶೇಷ ಪೂಜೆ ಮಾಡಿಸಿದ ಜೈ ಜಗದೀಶ್ ಕುಟುಂಬ. ಏನೂ ಮಾಹಿತಿ ನೀಡಿಲ್ಲ ಅಂದ್ರೆ ಹೇಗೆ ಎಂದ ನೆಟ್ಟಿಗರು.... ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಸಿಂಗ್ ಕೂರ್ಗ್‌ ಮಡಿಕೇರಿಯಲ್ಲಿ ಇರುವ ಮನೆಯಲ್ಲಿ ವಿಶೇಷ ಪೂಜೆ ನಡೆಸಿದ್ದಾರೆ. ಪೂಜೆ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಆದರೆ ಪ್ರತಿಯೊಬ್ಬರು ರೆಡಿಯಾಗಿ ಮಿಂಚುತ್ತಿರುವ ಸೀರೆ ಲುಕ್ ಸಖತ್ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ಪಬ್‌ನಲ್ಲಿ ಮ್ಯಾಕ್ಸಿ ಮಿನಿ ರೀತಿ ಔಟ್‌ಫಿಟ್‌ ಧರಿಸಿ ಕಾಣಿಸಿಕೊಂಡ ವೈಭವಿ ಜಗದೀಶ್‌ರನ್ನು ಸೀರೆಯಲ್ಲಿ ನೆಟ್ಟಿಗರು ನೋಡಿ ಶಾಕ್ ಆಗಿದ್ದಾರೆ. ಪೂಜೆಯಲ್ಲಿ ಜಗದೀಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಜೊತೆ ಮೂವರು ಹೆಣ್ಣು ಮಕ್ಕಳಾದ ವೈಭವಿ, ವೈನಿಧಿ ಮತ್ತು ವೈ ಸಿರಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣ ಸೀರೆಯಲ್ಲಿ ವೈಭವಿಯನ್ನು ನೋಡಿ ನೆಟ್ಟಿಗರು ಖುಷಿಯಾಗಿದ್ದಾರೆ. ಇದೇ ರೀತಿಯಲ್ಲಿ ಸೀರೆಯಲ್ಲಿ ಕಾಣಿಸಿಕೊಂಡರೆ ಕಳೆ ಎಂದಿದ್ದಾರೆ. ಜಗದೀಶ್ ಮೂವರು ಪುತ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಒಬ್ರು ಸಿನಿಮಾ ಮಾಡ್ತಿದ್ರೆ ಮತ್ತೊಬ್ಬರು ಬ್ರ್ಯಾಂಡ್ ಪ್ರಮೋಷನ್ ಮಾಡುತ್ತಿರುತ್ತಾರೆ. ಒಟ್ಟಾರೆ ಸದಾ ಬ್ಯುಸಿಯಾಗಿರುತ್ತಾರೆ.