ಡಿವೋರ್ಸ್ ಬಳಿಕ ಸಖತ್ ಹಾಟ್ ಆಗಿದ್ದಾರೆ ನಟಿ ಸಮಂತಾ ರುತ್ ಪ್ರಭು ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಡಿವೋರ್ಸ್ ಬಳಿಕ ಸಖತ್ ಹಾಟ್ ಆಗಿ ಬದಲಾದಂತೆ ಕಾಣಿಸ್ತಿದೆ. ಅದಕ್ಕೆ ಪ್ರೂಫ್ ಅಂದ್ರೆ ಇತ್ತೀಚಿನ ದಿನಗಳಲ್ಲಿ ಸಮಂತಾ ಶೇರ್ ಮಾಡಿರೋ ಫೋಟೊಗಳು. ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಡಿವೋರ್ಸ್ ಬಳಿಕ ಸಖತ್ ಹಾಟ್ ಆಗಿ ಬದಲಾದಂತೆ ಕಾಣಿಸ್ತಿದೆ. ಅದಕ್ಕೆ ಪ್ರೂಫ್ ಅಂದ್ರೆ ಇತ್ತೀಚಿನ ದಿನಗಳಲ್ಲಿ ಸಮಂತಾ ಶೇರ್ ಮಾಡಿರೋ ಫೋಟೊಗಳು. ಟಾಲಿವುಡ್ ನ ಸೂಪರ್ ಸ್ಟಾರ್ ನಟಿ, ಊ ಅಂಟಾವಾ ಮಾಮ, ಊಹೂ ಅಂಟಾವ ಎಂದು ಹಾಡುತ್ತಾ ಸೊಂಟ ಬಳುಕಿಸಿ, ನೂರಾರು ಅಭಿಮಾನಿಗಳನ್ನು ಪಡೆದ, ಪಡ್ಡೆ ಹುಡುಗರನ್ನು ನಿಂತಲ್ಲೆ ಕುಣಿಯುವಂತೆ ಮಾಡಿದ ಬೆಡಗಿ ಸಮಂತಾ ರುತ್ ಪ್ರಭು ( ). ತಮ್ಮ ಡಿವೋರ್ಸ್ ನಿಂದಲೇ ಸುದ್ದಿಯಾದ ನಟಿ, ಬಳಿಕ ಆರೋಗ್ಯ ಸಮಸ್ಯೆ, ಹಿಂದಿ ಸಿನಿಮಾ, ಐಟಂ ಸಾಂಗ್ ಗಳಿಂದಲೇ ಸುದ್ದಿಯಲ್ಲಿದ್ದರು. ಅದರ ಜೊತೆಗೆ ವೆಬ್ ಸೀರೀಸ್ ಗಳಲ್ಲೂ ಸಮಂತಾ ನಟಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ನಲ್ಲಿ ನಟಿಸಿ ಜನಪ್ರಿಯತೆ ಪಡೆದ ಸಮಂತಾ, ಇದಾದ ಬಳಿಕ ಮತ್ತೆರಡು ಸಿರೀಸ್ ಗಳಲ್ಲಿ ನಟಿಸಿದ್ದರು. ಸಿಟಾದಲ್, ಹನಿಬನಿಯಲ್ಲಿ ನಟಿಸಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ. ಸದ್ಯಕ್ಕಂತೂ ನಟಿ ಇದರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಸೋಶಿಯಲ್ ಮೀಡಿಯಾದಿಂದ ತುಂಬಾನೆ ಅಂತರ ಕಾಯ್ತುಕೊಂಡಿದ್ದ ಸಮಂತಾ, ಇದೀಗ ಬ್ಯಾಕ್ ಟು ಬ್ಯಾಕ್ ಫೋಟೊಗಳನ್ನು ಶೇರ್ ಮಾಡುವ ಮೂಲಕ ತಾವೀಗ ರಿಕವರ್ ಆಗುತ್ತಿರೋದನ್ನ ತೋರಿಸುತ್ತಿದ್ದಾರೆ. ಅದರಲ್ಲೂ ಹಾಟ್ ಫೋಟೊಗಳನ್ನು ( ) ಪೋಸ್ಟ್ ಮಾಡುತ್ತಿದ್ದು, ಮದ್ವೆಯಾದ ಬಳಿಕ ನಟಿ ತುಂಬಾನೆ ಹಾಟ್ ಆಗಿದ್ದಾರೆ ಅನಿಸುತ್ತೆ. ಇದೀಗ ಸಮಂತಾ ಹೊಸದಾದ ಫೋಟೊಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಅಪ್ ಲೋಡ್ ಮಾಡಿದ್ದು ಸದ್ಯಕ್ಕೆ ಅವರ ಫೋಟೊ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ಗ್ರೀನ್ ಕಲರ್ಸ್ ಬೀಡ್ಸ್ ಡ್ರೆಸ್ ಧರಿಸಿ ಐಫಾ ಉತ್ಸವಮ್ ನಲ್ಲಿ ನಟಿ ಕಾಣಿಸಿಕೊಂಡಿದ್ದು, ಸಮಂತಾ ಲುಕ್ ನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಸಮಂತಾ ಐಫಾ ಫೆಸ್ಟಿವಲ್ ನಲ್ಲಿ ' ' ಅವಾರ್ಡ್ ಪಡೆದಿದ್ದು. ಕಾರ್ಯಕ್ರಮದಲ್ಲಿ ಸಮಂತಾ ಲುಕ್ ನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಗ್ರೀನ್ ಬಣ್ಣದ ಶಿಮ್ಮರ್ ಡ್ರೆಸ್ಸಲ್ಲಿ ಸಮಂತಾ ತುಂಬಾನೆ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು. ಇವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನೊಂದು ವಿಷ್ಯ ಅಂದ್ರೆ ಸಮಂತಾ ಧರಿಸಿದ್ದ ಈ ಶಿಮ್ಮರ್ ಡ್ರೆಸ್ ಬೆಲೆ ಬರೋಬ್ಬರಿ 3,80,000 ರೂಪಾಯಿ ಆಗಿದ್ದು, ಇದನ್ನು ಕ್ರೇಶ ಬಜಾಜ್ ಡಿಸೈನ್ ಮಾಡಿದ್ದಾರೆ. ಈ ಡ್ರೆಸ್ ಗೆ ಕಾಂಪ್ಲಿಮೆಂಟ್ ಆಗಿ ನಟಿ ಎಮರಾಲ್ಡ್ ಗ್ರೀನ್ ಬಣ್ಣದ ಡ್ರಾಪಿಂಗ್ ಇಯರಿಂಗ್ಸ್ ಧರಿಸಿದ್ದಾರೆ. ನೆಟ್ಟಿಗರಂತೂ ಸಮಂತಾ ಈ ಲುಕ್ ನೋಡಿ ವಾರೆ ವಾ ಎನ್ನುತ್ತಿದ್ದಾರೆ.