ಚಂದನವನದ ಈ ನಟಿಮಣಿಯರಿಗಿಂತ ಚೆಂದ ಇವರ ಅಕ್ಕ-ತಂಗಿಯರು, ಹೇಗಿದ್ದಾರೆ ನೋಡಿ! ಚಂದನವನದಲ್ಲಿ ಮಿಂಚುತ್ತಿರುವ ಈ ನಟಿಮಣಿಯರಿಗಿಂತ ಅವರ ಸಹೋದರಿಯರು ಇನ್ನೂ ಚೆಂದ. ನಿತ್ಯಾ ರಾಮ್ - ರಚಿತಾ ರಾಮ್ ನಿಂದ ಹಿಡಿದು, ಮೇಘಾ ಶೆಟ್ಟಿಯವರೆಗೆ ಇಲ್ಲಿದೆ ಸಹೋದರಿಯರ ಸುಂದರ ಫೋಟೋಗಳು. ಚಂದನವನದಲ್ಲಿ ಮಿಂಚುತ್ತಿರುವ ಈ ನಟಿಮಣಿಯರಿಗಿಂತ ಅವರ ಸಹೋದರಿಯರು ಇನ್ನೂ ಚೆಂದ. ನಿತ್ಯಾ ರಾಮ್ - ರಚಿತಾ ರಾಮ್ ನಿಂದ ಹಿಡಿದು, ಮೇಘಾ ಶೆಟ್ಟಿಯವರೆಗೆ ಇಲ್ಲಿದೆ ಸಹೋದರಿಯರ ಸುಂದರ ಫೋಟೋಗಳು. ನಿತ್ಯಾ ರಾಮ್ - ರಚಿತಾ ರಾಮ್ ( - ) :ಈ ಸಹೋದರಿಯರು ಇಬ್ಬರೂ ಸಹ ಅದ್ಭುತ ನಟಿಯರು. ನಿತ್ಯಾ ರಾಮ್ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ರೆ, ರಚಿತಾ ರಾಮ್ ಸ್ಯಾಂಡಲ್ ವುಡ್ ಕ್ವೀನ್ ಆಗಿದ್ದಾರೆ. ಅನುಷಾ ರಂಗನಾಥ್ - ಆಶಿಕಾ ರಂಗನಾಥ್ :ಅನುಷಾ - ಆಶಿಕಾ ಇಬ್ಬರೂ ತೆರೆ ಮೇಲೆ ಮಿಂಚುತ್ತಿರುವ ನಟಿಯರು. ಆಶಿಕಾ ರಂಗನಾಥ್ ( ) ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇವರ ಅಕ್ಕ ಅನುಷಾ ಒಂದೆರಡು ಸಿನಿಮಾದಲ್ಲಿ ನಟಿಸಿದ್ರೂ ಜನಪ್ರಿಯತೆ ಪಡೆದಿಲ್ಲ, ಸದ್ಯ ಮದ್ವೆಯಾಗಿ ಮ್ಯಾರೀಡ್ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಭವ್ಯಾ ಗೌಡ - ಕಾವ್ಯ ಗೌಡ :ಕಾವ್ಯ ಗೌಡ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದ ಅದ್ಭುತ ನಟಿ. ಸದ್ಯ ಮದುವೆ, ಗಂಡ, ಮಗು ಅಂತ ಬ್ಯುಸಿಯಾಗಿದ್ದಾರೆ. ಇವರ ಸಹೋದರಿ ಭವ್ಯಾ ಗೌಡ ಫ್ಯಾಷನ್ ಡಿಸೈನರ್. ಅದ್ವಿತಿ ಶೆಟ್ಟಿ -ಅಶ್ವಿತಿ ಶೆಟ್ಟಿ :ಈ ಟ್ವಿನ್ ಸಹೋದರಿಯರು ಸ್ಯಾಂಡಲ್ ವುಡ್ ನಲ್ಲಿ () ಮಿಂಚಿತ್ತಿರುವ ನಟಿಯರು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯಲ್ಲಿ ಇವರಿಬ್ಬರು ಮಿಂಚಿದ್ದರು. ಪ್ರಿಯಾ ಆಚಾರ್ - ಪ್ರೀತಿ ಆಚಾರ್ :ಗಟ್ಟಿಮೇಳ ಸೀರಿಯಲ್ಲಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದ ಪ್ರಿಯಾ ಆಚಾರ್, ಈಗ ಕಾವೇರಿ ಕನ್ನಡ ಮೀಡಿಯಂನಲ್ಲಿ ನಾಯಕಿ. ಇವರ ಸಹೋದರಿ ಪ್ರಿಯಾ ಆಚಾರ್. ಸೋನು ಗೌಡ - ನೇಹಾ ಗೌಡ :ಸೋನು ಗೌಡ ಗೌಡ ಸ್ಯಾಂಡಲ್ ವುಡ್ ನಟಿಯಾಗಿದ್ರೆ, ನೇಹಾ ಗೌಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ನಟಿ. ತಂಗಿ ನೇಹಾ ಮದುವೆಯಾಗಿ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಿವ್ಯಾ ಗೌಡ - ಭವ್ಯಾ ಗೌಡ :ಭವ್ಯಾ ಗೌಡ ಗೀತಾ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದ ನಟಿ. ಇವರ ಗೀತಾ ಅಭಿನಯಕ್ಕೆ ಜನ ಮನಸೋತಿದ್ದರು. ಇವರ ಸಹೋದರಿ ದಿವ್ಯಾ ಗೌಡ. ಅನುಪಮಾ ಗೌಡ- ತೇಜಸ್ವಿನಿ ಗೌಡ :ಕನ್ನಡ ಕಿರುತೆರೆಯಲ್ಲಿ ನಿರೂಪಕಿ, ನಟಿಯಾಗಿ ಹಾಗೂ ಸ್ಯಾಂಡಲ್ ವುಡ್ ನಲ್ಲೂ ಗುರುತಿಸಿಕೊಂಡ ನಟಿ ಅನುಪಮಾ ಗೌಡ ( ), ಇವರ ಸಹೋದರಿ ತೇಜಸ್ವಿನಿ ಗೌಡ. ಕವಿತಾ ಗೌಡ - ಮೊನಿಷಾ ಗೌಡ :ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಆಗಿ ಮಿಂಚಿದ ನಟಿ ಕವಿತಾ ಗೌಡ. ತಾಯಿಯಾಗುವ ಸಂಭ್ರಮದಲ್ಲಿದ್ದಾರೆ ನಟಿ. ಇವರ ಸಹೋದರಿ ಮೊನಿಷಾ. ಮಾನ್ಸಿ ಜೋಶಿ -ಇಂಚರಾ ಜೋಶಿ :ಈ ಅಕ್ಕ ತಂಗಿಯರು ಸಹ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಮಾನ್ಸಿ ಜೋಶಿ ಪಾರು ಸೀರಿಯಲ್ ಸೇರಿ ಹಲವು ಕನ್ನಡ ಸೀರಿಯಲ್‌ನಲ್ಲಿ ನಟಿಸಿದ್ದರು. ಸದ್ಯ ಮಲಯಾಳಂನಲ್ಲಿ ನಟಿಸುತ್ತಿದ್ದಾರೆ. ಇವರ ಸಹೋದರಿ ಇಂಚರಾ ಕೂಡ ಆಸೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಪವಿತ್ರಾ - ಪಲ್ಲವಿ :ಪಾರು ಸೀರಿಯಲ್‌ನಲ್ಲಿ ಜನನಿ ಪಾತ್ರದ ಮೂಲಕ ಮನಗೆದ್ದ ನಟಿ ಪವಿತ್ರಾ. ಇವರು ತೆಲುಗು ಸೀರಿಯಲ್‌ನಲ್ಲೂ ನಟಿಸಿದ್ದಾರೆ. ಇವರ ಸಹೋದರಿ ಪಲ್ಲವಿ. ರಂಜನಿ ರಾಘವನ್ - ವೈಷ್ಣವಿ - ಸೌಧಾಮಿನಿ ರಾಘವನ್ :ಪುಟ್ಟ ಗೌರಿ ಮದುವೆ, ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದ ರಂಜನಿ ( ), ಸದ್ಯ ಸಿನಿಮಾ, ಬರವಣಿಗೆಯಲ್ಲಿ ಬ್ಯುಸಿ. ಇವರ ಇಬ್ಬರು ಮುದ್ದಿನ ಸಹೋದರಿಯರು ವೈಷ್ಣವಿ ಮತ್ತು ಸೌಧಾಮಿನಿ. ಮೇಘಾ ಶೆಟ್ಟಿ- ಸುಷ್ಮಾ ಶೆಟ್ಟಿ- ಹಾರ್ದಿಕ ಶೆಟ್ಟಿ :ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡಿಗರ ಫೇವರಿಟ್ ನಟಿಯಾದ ಮೇಘಾ ಶೆಟ್ಟಿ ಈವಾಗ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ಬ್ಯೂಟಿ.