ಗೀತಾ ಹಣೆಯಲ್ಲಿ ಕುಂಕುಮ ನೋಡ್ರಿ; ರಾಮಚಾರಿ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡಲು ಮುಂದಾದ ಪುಂಡ! ಕನ್ನಡತಿ ತರ ನಿಮ್ಮನ್ನು ನೋಡೋಕೆ ಚಂದ ಎಂದ ಭವ್ಯಾ ಸಿಂಪಲ್ ಲುಕ್ ಮೆಚ್ಚಿಕೊಂಡ ನೆಟ್ಟಿಗರು.... ಕನ್ನಡತಿ ತರ ನಿಮ್ಮನ್ನು ನೋಡೋಕೆ ಚಂದ ಎಂದ ಭವ್ಯಾ ಸಿಂಪಲ್ ಲುಕ್ ಮೆಚ್ಚಿಕೊಂಡ ನೆಟ್ಟಿಗರು.... ಮ್ಯೂಸಿಕಲಿ, ಟಿಕ್ ಟಾಕ್ ಮತ್ತು ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಸೀರಿಯಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಸುಂದರಿ ಭವ್ಯಾ. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಗೀತಾ ಸೀರಿಯಲ್‌ನಲ್ಲಿ ಗೀತಾ ಪಾತ್ರದಲ್ಲಿ ಮಿಂಚಿದ ಗೌಡ್ರು ಹುಡುಗಿ ಭವ್ಯಾ ಗೌಡ. ಸುಮಾರು 1500ಕ್ಕೂ ಎಪಿಸೋಡ್‌ಗಳನ್ನು ಪ್ರಸಾರ ಮಾಡಿದ ಗೀತಾ ಸೀರಿಯಲ್ ನಿಂತ ಮೇಲೆ ಭವ್ಯಾ ಏನ್ ಮಾಡ್ತಿದ್ದಾರೆ ಅನ್ನೋದು ಹಲವ ಪ್ರಶ್ನೆ. ಒಂದೆರಡು ಸಿನಿಮಾ ಸೈನ್ ಮಾಡಿರುವ ಭವ್ಯಾ ಖಾಸಗಿ ಬ್ರ್ಯಾಂಡ್ ಮತ್ತು ಆರ್ಟಿಸ್ಟ್‌ಗಳ ಪ್ರಮೋಷನ್ ಮಾಡುತ್ತಿದ್ದಾರೆ. ಆಗಾಗ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯ ಕೆಂಪು ಬಣ್ಣದ ಮೈಸೂರ್‌ ಸಿಲ್ಕ್‌ ಸೀರೆಗೆ ಬಿಳಿ ಬಣ್ಣದ ಡಿಸೈನರ್ ಬ್ಲೌಸ್‌ ಧರಿಸಿ ಗೀತಾ ಫೋಟೋ ಅಪ್ಲೋಡ್ ಮಾಡಿದ್ದಾರೆ. ಅಬ್ಬಬ್ಬಾ ಹಣೆಯಲ್ಲಿ ಕುಂಕುಮ ನೋಡಿ ಖುಷಿ ಆಯ್ತು ರಾಮಾಚಾರಿ ಸಿನಿಮಾ ಸ್ಟೈಲ್‌ನಲ್ಲಿ ಬಂದು ಪ್ರಪೋಸ್ ಮಾಡ್ಬೇಕು ಅನಿಸುತ್ತಿದೆ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ,