ರೀಲಲ್ಲಿ ಅಳುಮುಂಜಿ, ರಿಯಲ್ ಆಗಿ ಚಿನಕುರುಳಿ ಭಾಗ್ಯ, ಸುಷ್ಮಾ ರಾವ್ ನಿಮಗೆ ಗೊತ್ತಿಲ್ಲದ ಫ್ಯಾಕ್ಟ್ಸ್! ಭಾಗ್ಯಲಕ್ಷ್ಮೀ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿರುವ ನಟಿ, ನಿರೂಪಕಿ, ಭರತನಾಟ್ಯ ಕಲಾವಿದೆ ಸುಷ್ಮಾ ರಾವ್ ಅವರು ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಗುಪ್ತಗಾಮಿನಿಂದ ಇಲ್ಲೀವರೆಗೂ ಸದಾ ಆ್ಯಕ್ಟಿವ್ ಆಗಿರೋ ಈ ಮಲೆನಾಡ ಚೆಲುವೆ ಬಗ್ಗೆ ನಿಮಗೆ ಗೊತ್ತಿರದ ಇಂಟೆರೆಸ್ಟಿಂಗ್ ಫ್ಯಾಕ್ಟ್ಸ್. ಭಾಗ್ಯಲಕ್ಷ್ಮೀ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿರುವ ನಟಿ, ನಿರೂಪಕಿ, ಭರತನಾಟ್ಯ ಕಲಾವಿದೆ ಸುಷ್ಮಾ ರಾವ್ ಅವರು ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಗುಪ್ತಗಾಮಿನಿಂದ ಇಲ್ಲೀವರೆಗೂ ಸದಾ ಆ್ಯಕ್ಟಿವ್ ಆಗಿರೋ ಈ ಮಲೆನಾಡ ಚೆಲುವೆ ಬಗ್ಗೆ ನಿಮಗೆ ಗೊತ್ತಿರದ ಇಂಟೆರೆಸ್ಟಿಂಗ್ ಫ್ಯಾಕ್ಟ್ಸ್. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಾಗಿ ಸದಾ ಗಂಡನಿಗೆ ಹೆದರುತ್ತಾ, ಅತ್ತೆ ಹಾಕಿದ ಗೆರೆ ದಾಟದ, ಮನೆಯವರ ಸೇವೆಯಲ್ಲಿಯೇ ಖುಷಿ ಕಾಣುವ ಭಾಗ್ಯ ಆಗಿ ಅದ್ಭುತ ಅಭಿನಯ ನೀಡುತ್ತಿರುವ ನಟಿ ಸುಷ್ಮಾ ರಾವ್ ( ). ಕಿರುತೆರೆಗೆ ತುಂಬಾನೆ ಹಳಬರಾಗಿರುವ ಸುಷ್ಮಾ ರಾವ್, ಸುಮಾರು ಹತ್ತು ವರ್ಷಗಳ ನಂತ್ರ ಭಾಗ್ಯಲಕ್ಷ್ಮೀ ಸೀರಿಯಲ್ ( ) ಮೂಲಕ ಕಂ ಬ್ಯಾಕ್ ಮಾಡಿದ್ದರು. ಇವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುಷ್ಮಾ ರಾವ್ ಕುರಿತು ಇಂಟ್ರೆಸ್ಟಿಂಗ್ ವಿಷ್ಯ ಇಲ್ಲಿದೆ. ಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾದ ಸುಷ್ಮಾ ಸೀರಿಯಲ್‌ನಲ್ಲಿ ಈಗಷ್ಟೆ ಮಗಳೊಂದಿಗೆ 10ನೇ ತರಗತಿ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಆದರೆ ನಿಜಜೀವನದಲ್ಲಿ ಇವರು ಡಬಲ್ ಗ್ರಾಜ್ಯುಯೇಟ್. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್’ಸಿ ಹಾಗೂ ಹಿಂದಿಯಲ್ಲೂ ಪದವಿ ಪಡೆದಿದ್ದಾರೆ. ಭರತನಾಟ್ಯ ಕಲಾವಿದೆಯಾಗಿರುವ ( ) ಸುಷ್ಮಾ ನಾಲ್ಕನೇ ಕ್ಲಾಸಲ್ಲೆ ಭರತನಾಟ್ಯ ಕಲಿತಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ಇವರು ನೃತ್ಯ ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲ ಇವರು ಕೂಚುಪುಡಿ ನೃತ್ಯ ತರಬೇತಿ ಸಹ ಪಡೆದಿದ್ದಾರೆ. ಈ ನಟಿ ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿಯನ್ನೂ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಸುಷ್ಮಾ ರಾವ್ ತಮ್ಮ ವೈವಾಹಿಕ ಜೀವನದಿಂದಲೇ ಸುದ್ದಿಯಾಗಿದ್ದರು. ನಿರ್ದೇಶಕ ಪ್ರೀತಂ ಗುಬ್ಬಿಯವರನ್ನು ( ) ಪ್ರೀತಿಸಿ ಮದುವೆಯಾಗಿದ್ದ ನಟಿ, ಬಳಿಕ ಡಿವೋರ್ಸ್ ಪಡೆದಿದ್ದರು. 10 ವರ್ಷಗಳಿಂದ ಕಿರುತೆರೆ, ನಟನೆಯಿಂದ ದೂರವಿದ್ದ ನಟಿ ಮತ್ತೆ ಭಾಗ್ಯಲಕ್ಷ್ಮೀ ಮೂಲಕ ನಟನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಎಸ್. ನಾರಾಯಣ್ ಅವರ ಭಾಗೀರಥಿ ಧಾರಾವಾಹಿ ಮೂಲಕ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಟ್ಟ ಸುಷ್ಮಾ ರಾವ್, ಬಳಿಕ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಸೌಭಾಗ್ಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಈಗ ಭಾಗ್ಯಲಕ್ಷ್ಮೀಯಲ್ಲಿ ಭಾಗ್ಯ ಆಗಿ ಕನ್ನಡಿಗರ ಮನ ಗೆದ್ದಿದ್ದಾರೆ. ಇನ್ನು ನಟಿ, ನೃತ್ಯಗಾರ್ತಿಯಲ್ಲದೇ ನಿರೂಪಕಿಯಾಗಿರುವ ಸೈ ಎನಿಸಿಕೊಂಡಿರುವ ಸುಷ್ಮಾ ರಾವ್, ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ತರ್ಲೆ ನನ್ಮಕ್ಳು, ಮನೆ ಮನೆ ಮಹಾಲಕ್ಷ್ಮೀ, ಜೀನ್ಸ್, ಅಲ್ಲದೇ ಇತ್ತೀಚೆಗಷ್ಟೇ ಮುಗಿದ ನಮ್ಮಮ್ಮ ಸೂಪರ್ ಸ್ಟಾರ್ 3 ಸೀಸನ್ ಕೂಡ ನಿರೂಪಣೆ ಮಾಡಿದ್ದರು. ಸದ್ಯ ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಸುಷ್ಮಾ ಭಾಗ್ಯ ಆಗಿ ನಟಿಸುತ್ತಿದ್ದು, ಕೊನೆಗೂ ಭಾಗ್ಯ ಕಷ್ಟಕ್ಕೆ ಫಲ ಸಿಕ್ಕಿದೆ. ಇದೀಗ ಭಾಗ್ಯ ಫೈವ್ ಸ್ಟಾರ್ ಹೊಟೇಲಲ್ಲಿ ಮೇನ್ ಚೆಫ್ ಆಗಿ ಭಡ್ತಿ ಪಡೆದಿದ್ದಾರೆ. ಆದರೆ ಭಾಗ್ಯ ಸಾಧನೆ ಇದೀಗ ಟಿವಿಯಲ್ಲೂ ಪ್ರಸಾರವಾಗಿದ್ದು, ಮುಂದಿನ ಫಲಿತಾಂಶ ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕು.