ಕರೀನಾಳ ಟ್ಯಾಟೂ ಅಳಿಸಿದ ಬೆನ್ನಲ್ಲೇ ಸೈಫ್​ ರಹಸ್ಯ ಖಾತೆ ಬಹಿರಂಗ! 5ನೇ ಖಾನ್​ ಸೃಷ್ಟಿಸಲು ಸ್ಕೆಚ್ಚಾ ಎಂದ ಫ್ಯಾನ್ಸ್​ ಕರೀನಾಳ ಟ್ಯಾಟೂ ಅಳಿಸಿದ ಬೆನ್ನಲ್ಲೇ ಸೈಫ್​ ರಹಸ್ಯ ಖಾತೆಯೊಂದು ಬಹಿರಂಗಗೊಂಡಿದೆ. ಇದು ತಿಳಿಯುತ್ತಲೇ ಟ್ರೋಲಿಗರು ಏನೆಲ್ಲಾ ಪ್ರಶ್ನೆ ಕೇಳ್ತಿದ್ದಾರೆ ನೋಡಿ! ಬಾಲಿವುಡ್​ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್​ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್​ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್​ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್​ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್​ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದವರು. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ ( ) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. ಕೆಲ ದಿನಗಳಿಂದ ಸೈಫ್​ ಮತ್ತು ಕರೀನಾ ನಡುವೆ ಎಲ್ಲವೂ ಸರಿಯಿಲ್ಲವೇ ಎನ್ನುವ ಸಂಶಯವೂ ಕಾಡುತ್ತಿದೆ. ಇದಕ್ಕೆ ಕಾರಣ, ಸೈಫ್​ ಅಲಿ ಖಾನ್​ ಅವರು ಇಷ್ಟುದಿನ ತಮ್ಮ ಕೈ ಮೇಲೆ ಕರೀನಾ ಕಪೂರ್​ ಟ್ಯಾಟೂ ಹಾಕಿಸಿಕೊಂಡಿದ್ದರು. ಅದನ್ನು ಅಳಸಿ ಹಾಕಿದ್ದಾರೆ. ಅದರ ಜಾಗದಲ್ಲಿ ತ್ರಿಶೂಲದ ಟ್ಯಾಟೂ ಕಾಣಿಸಿಕೊಂಡಿದೆ. ಇದಕ್ಕೆ ಸಕತ್​ ಟ್ರೋಲ್​ ಆಗುತ್ತಿದ್ದು, ಕರೀನಾ ಕಪೂರ್​ ಸಹವಾಸ ಸಾಕಾಗಿ, ಮತ್ತೊಂದು ಮದ್ವೆ ಆಗಲು ಹೊರಟ್ರಾ ಸೈಫ್​ ಅಲಿ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಇದು ಅವರ ಮುಂಬರುವ ಚಿತ್ರದ ಪ್ರಚಾರ ಇರಬಹುದು ಎಂದು ಹೇಳುತ್ತಿದ್ದರೂ, ಈ ಬಗ್ಗೆ ನಟನಿಂದ ಸ್ಪಷ್ಟನೆ ಬರಬೇಕಿದೆ. ಇದರ ನಡುವೆಯೇ ಇದೀಗ ರಹಸ್ಯ ಖಾತೆಯೊಂದು ಬೆಳಕಿಗೆ ಬಂದಿದೆ. ಈ ಕುರಿತು ಖುದ್ದು ಸೈಫ್​ ಅಲಿ ಮಾಹಿತಿ ನೀಡಿದ್ದಾರೆ. ಅದೇನೆಂದರೆ, ಸೈಫ್​ ಅಲಿ ಖಾನ್​ ಬಳಿ ರಹಸ್ಯವಾಗಿರುವ ಇನ್​ಸ್ಟಾಗ್ರಾಮ್​ ಖಾತೆಯೊಂದು ಇದೆಯಂತೆ! ಹಸಿಬಿಸಿ ದೃಶ್ಯ ಎಂದ್ರು, ಬಟ್ಟೆ ಬಿಚ್ಚಿ ಹೀರೊ ಜೊತೆ ಮಲಗಿದೆ... ಅದ್ರಲ್ಲೇನಿದೆ? ನಟಿ ದರ್ಶನಾ ಓಪನ್​ ಮಾತು... ಹೌದು. ಇಂದು ಅಂದರೆ ಜೂನ್​ 30 ವಿಶ್ವ ಸಾಮಾಜಿಕ ಮಾಧ್ಯಮ ದಿನ. ಇದರ ಅಂಗವಾಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟ ಈ ವಿಷಯವನ್ನು ಹೇಳಿದ್ದಾರೆ. "ನನ್ನ ಬಳಿ ಅಪ್ಲಿಕೇಶನ್ ಮತ್ತು ರಹಸ್ಯ ಖಾತೆಯೂ ಇದೆ. ನಾನು ಕೆಲವೊಮ್ಮೆ ಅಷ್ಟೇ ಇದರ ಬ್ರೌಸ್ ಮಾಡುತ್ತೇನೆ, ಆದರೆ ಅದನ್ನು ಹೆಚ್ಚು ಆನಂದಿಸುವುದಿಲ್ಲ. ಮತ್ತು ಪ್ರತಿ ಬಾರಿ ನಾನು ಅದನ್ನು ಸ್ವಲ್ಪ ಸಮಯದವರೆಗೆ ಬ್ರೌಸ್ ಮಾಡುತ್ತೇನೆ. ಅದನ್ನು ಡಿಲೀಟ್​ ಮಾಡಬೇಕು ಎಂದು ಮನಸ್ಸು ಮಾಡುತ್ತೇನೆ, ಆದರೆ ಅದನ್ನು ಹಾಗೆಯೇ ಇಟ್ಟುಕೊಂಡಿದ್ದೇನೆ" ಎಂದಿದ್ದಾರೆ. ಆದರೆ ಈ ರಹಸ್ಯ ಖಾತೆಯಲ್ಲಿ ಏನಿದೆ, ಅದನ್ನು ಯಾಕೆ ಇಟ್ಟುಕೊಂಡಿದ್ದಾರೆ ಎನ್ನುವುದನ್ನು ನಟ ಬಹಿರಂಗಪಡಿಸಿಲ್ಲ. ಅದಕ್ಕಾಗಿಯೇ ಇದೀಗ ನಟ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಕರೀನಾ ಕಪೂರ್​ರಿಂದ ಇಬ್ಬರು ಖಾನ್​ಗಳನ್ನು ಹುಟ್ಟಿಸಿದ ಬಳಿಕ ಮತ್ತೊಂದಕ್ಕೆ ಗಾಳ ಹಾಕಲು ಈ ರಹಸ್ಯ ಖಾತೆ ಪ್ರಯೋಜನಕ್ಕೆ ಬರುತ್ತದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ, ನಟ ಸೈಫ್​ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು ( ) ಮದುವೆಯಾಗಿದ್ದರೆ, ಅಮೃತಾ ಸಿಂಗ್​ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು! ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್‌ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್​ ಅಲಿ ಖಾನ್​ ಅವರಿಗೆ ಅಮೃತಾ ಸಿಂಗ್​ ಮತ್ತು ಕರೀನಾ ಕಪೂರ್​ ಈ ಇಬ್ಬರು ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್​ ( ), ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​ ಅಲಿ ಖಾನ್​. ಈಗ ಐದನೇ ಖಾನ್​ ಹುಟ್ಟಿಸಲು ರೆಡಿನಾ ಅಂತ ಕೇಳೋದಾ ಟ್ರೋಲಿಗರು? ನಿವೇದಿತಾ ಡಿವೋರ್ಸ್​ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್​ ಶೆಟ್ಟಿಗೆ ಟಾಂಗ್​ ಕೊಟ್ರಾ ಮಾಜಿ ಅತ್ತೆ?