ಕೆಲಸ ಸಿಕ್ಕ ಖುಷಿಯಲ್ಲಿ ಅಮ್ಮನ ಜೊತೆ ಭಾಗ್ಯ ಮಕ್ಕಳ ಭರ್ಜರಿ ಡಾನ್ಸ್​: ಮಧ್ಯೆ ಭಯ ಹುಟ್ಟಿಸಿದ ಅಜ್ಜಿ! ಭಾಗ್ಯಲಕ್ಷ್ಮಿ ಸೀರಿಯಲ್​ ಮಕ್ಕಳ ಜೊತೆ ಅಮ್ಮ ಭಾಗ್ಯಳ ಭರ್ಜರಿ ಡಾನ್ಸ್ ಮಾಡಿದ್ದು,​ ನಡುವೆ ಭಾಗ್ಯಳ ಅಮ್ಮ ಭಯ ಹುಟ್ಟಿಸಿದ್ದು, ವಿಡಿಯೋ ವೈರಲ್​ ಆಗಿದೆ. ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯಳಷ್ಟೇ ಮಹತ್ವ ಇರುವ ಕ್ಯಾರೆಕ್ಟರ್​ಗಳು ಅವಳ ಮಕ್ಕಳಾದ ತನ್ವಿ ಮತ್ತು ಗುಂಡ. ಅಮ್ಮನ ಪರವಾಗಿ ಮೊದಲಿನಿಂದಲೂ ಇರುವ ಪಾತ್ರ ಮಗ ಗುಂಡಂದು. ಪೆದ್ದು ಅಮ್ಮನನ್ನು ಕಂಡರೆ ಆಗದೇ ಅಪ್ಪನ ಜೊತೆ ಅವಳನ್ನು ಸದಾ ಹೀಯಾಳಿಸುತ್ತಾ ಇದ್ದ ಕ್ಯಾರೆಕ್ಟರ್​ ತನ್ವಿ. ಆದರೆ ಈಗ ತನ್ವಿ ಬದಲಾಗಿದ್ದಾಳೆ. ಅಪ್ಪನ ಕೆಟ್ಟ ಬುದ್ಧಿ ತಿಳಿದಿದೆ. ಈಗ ಅವಳೂ ಅಮ್ಮನ ಪರ. ಅಮ್ಮನೇ ಈ ಇಬ್ಬರು ಮಕ್ಕಳ ಸರ್ವಸ್ವ. ಅಮ್ಮನಿಗೆ ಇಂಗ್ಲಿಷ್​ ಪಾಠವನ್ನೂ ಮಾಡುತ್ತಿದ್ದಾಳೆ ತನ್ವಿ. ಅದೇ ರೀತಿ ಇನ್ನೊಂದು ಕ್ಯಾರೆಕ್ಟರ್​ ಭಾಗ್ಯಳ ಅಮ್ಮ. ಸೀರಿಯಲ್​ನಲ್ಲಿ ಭಾಗ್ಯಳ ಮನೆಯಲ್ಲಿಯೇ ವಾಸವಾಗಿದ್ದಾಳೆ ಈಕೆ. ಈಗ ಈ ಎಲ್ಲ ಪಾತ್ರಗಳೂ ಸೇರಿ ರೀಲ್ಸ್​ ಮಾಡಿದ್ದು, ಅಭಿಮಾನಿಗಳಿಗೆ ಸಂತಸ ಮೂಡಿಸಿವೆ. ಅಮ್ಮ-ಮಕ್ಕಳು ಡ್ಯಾನ್ಸ್​ ಮಾಡುವಾಗ, ನಡುವೆ ಭಾಗ್ಯಳ ಅಮ್ಮನ ಎಂಟ್ರಿ ಆಗಿ ಭಯ ಹುಟ್ಟಿಸುವ ರೀತಿಯಲ್ಲಿ ರೀಲ್ಸ್​ ಮಾಡಲಾಗಿದೆ. ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್​ ಕಥೆಗೆ ಬರುವುದಾದರೆ, ಸದ್ಯ ಭಾಗ್ಯಳ ಗೋಳು ಮುಗಿದಿದೆ. ಫೈವ್​ಸ್ಟಾರ್​ ಹೋಟೆಲ್​ನಲ್ಲಿ ಲಕ್ಷ ರೂಪಾಯಿ ಸಂಬಳ ಪಡೆಯುವ ಉದ್ಯೋಗ ಸಿಕ್ಕಿದೆ ಭಾಗ್ಯಳಿಗೆ. ಮಕ್ಕಳೆದುರು ಕೆಲಸದ ವಿಷಯ ಹೇಳಿದರೂ ಅತ್ತೆಯ ಎದುರು ಸತ್ಯ ಹೇಳಲಾಗದೇ ಒದ್ದಾಡುತ್ತಿದ್ದಾಳೆ ಭಾಗ್ಯ. ಏಕೆಂದರೆ ಅವಳು ನೌಕರಿಗೆ ಹೋಗುವುದು ಅಲ್ಲಿ ಯಾರಿಗೂ ಇಷ್ಟವಿಲ್ಲ. ಇನ್ನು ಭಾಗ್ಯಳ ಮಗಳು ತನ್ವಿ ಈಗ ಬದಲಾಗಿದ್ದಾರೆ. ಪೆದ್ದು ಅಮ್ಮ ಎಂದು ಅಮ್ಮನ ಕಂಡರೆ ಆಗದಿದ್ದ ತನ್ವಿ ತನ್ನ ಅಪ್ಪ ತಾಂಡವ್​ನ ಅವತಾರ, ಅಮ್ಮ ಕಷ್ಟಪಡುತ್ತಿರುವ ರೀತಿ ಎಲ್ಲವನ್ನೂ ನೋಡಿ ಬದಲಾಗಿದ್ದಾಳೆ. ಈಗ ಅವಳಿಗೂ ಅಮ್ಮ ಎಂದರೆ ಅಚ್ಚುಮೆಚ್ಚು. ಇದೀಗ ಈ ಇಬ್ಬರೂ ಅಮ್ಮ ಮತ್ತು ಮಕ್ಕಳು ಸೇರಿ ರೀಲ್ಸ್​ ಮಾಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. ಆ್ಯಕ್ಟರ್ಸ್​ ಹಣೆಬರಹ ನೋಡಿ... ಬಚ್ಚಲು ಮನೆಯ ಪೊರಕೆಯಲ್ಲಿ ಹೂವು ಗುಡಿಸಿ ತಲೆ ಮೇಲೆ ಸುರೀತಾರೆ... ಭಾಗ್ಯಲಕ್ಷ್ಮಿಯ ಪಾತ್ರಧಾರಿ ಸುಷ್ಮಾ ಕೆ.ರಾವ್​. ಇವರ ನಿರೂಪಣಾ ಶೈಲಿ ಟಿ.ವಿ. ವೀಕ್ಷಕರಿಗೆ ಚಿರಪರಿಚಿತ. ಚಿಕ್ಕಮಗಳೂರಿನ ಕೊಪ್ಪ ಸುಷ್ಮಾ ಅವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಸುಷ್ಮಾ ರಾವ್ ನಿರ್ದೇಶಕ ಪ್ರೀತಂ ಗುಬ್ಬಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಹಲವು ವರ್ಷಗಳ ಅವರಿಂದ ವಿಚ್ಛೇದನ ಪಡೆದರು. ಕಳೆದ ಹತ್ತು ವರ್ಷಗಳಿಂದ ವೈಯಕ್ತಿಕ ಕಾರಣಗಳಿಂದ ನಟನೆಯಿಂದ ದೂರವಿದ್ದಾರೆ. ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್​ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ ( ) ಆಕ್ಟೀವ್ ಆಗಿದ್ದಾರೆ. ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್​ ಅಮ್ಮ-ಮಗಳ ರೀಲ್ಸ್​ ನೋಡಿ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ನನ್ ಗಂಡನೂ ಹೀಗೆಯಪ್ಪಾ, ಹೇಳಿ ಹೇಳಿ ಸಾಕಾಗೋಗಿದೆ... ಸೀರಿಯಲ್​ ಜೋಡಿಯ ನೋಡಿ ಹೆಂಡ್ತಿಯರ ಗೋಳು! .. (@anchor_sushmakrao)