ಹಾಟಪ್ಪ ಹಾಟ್ ಸಖತ್ ಹಾಟ್ ಕಿಚ್ಚನ ಆನ್‌ಸ್ಕ್ರೀನ್ ಮಗಳು ಜೆರುಶಾ ವೀರ ಮದಕರಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮಗಳಾಗಿ ಮನಗೆದ್ದಿದ್ದ ನಟಿ ಜೆರುಶಾ ಕ್ರಿಸ್ಟೋಫರ್ ನಾಯಕಿಯಾಗೋದಕ್ಕೆ ರೆಡಿಯಾಗಿದ್ದು, ಸಖತ್ ಸ್ಟೈಲಿಶ್ ನಟಿ ಇವರಾಗಿದ್ದಾರೆ. ವೀರ ಮದಕರಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮಗಳಾಗಿ ಮನಗೆದ್ದಿದ್ದ ನಟಿ ಜೆರುಶಾ ಕ್ರಿಸ್ಟೋಫರ್ ನಾಯಕಿಯಾಗೋದಕ್ಕೆ ರೆಡಿಯಾಗಿದ್ದು, ಸಖತ್ ಸ್ಟೈಲಿಶ್ ನಟಿ ಇವರಾಗಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ () ನಟನೆಯ ವೀರ ಮದಕರಿ ಸಿನಿಮಾ ನೋಡಿದವರಿಗೆ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮುದ್ದಿನ ಮಗಳಾಗಿ ಗುರುತಿಸಿಕೊಂಡ ಮುದ್ದು ಬಾಲೆ ನೆನಪು ಇರಲೇಬೇಕಲ್ವಾ? ಆಕೆಯ ಹೆಸರು ಜೆರುಶಾ ಕ್ರಿಸ್ಟೋಫರ್. ಸಿನಿಮಾಗಳಲ್ಲಿ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ಜೆರುಶಾ ಕ್ರಿಸ್ಟೋಫರ್ ( ) ಈಗ ಬೆಳೆದು ದೊಡ್ಡವರಾಗಿದ್ದು, ಮಾಡೆಲಿಂಗ್, ನಟಿ, ರೂಪದರ್ಶಿಯಾಗಿ ವಿವಿಧ ಫ್ಯಾಷನ್ ಶೋ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೆರುಶಾ ಇದೀಗ ಸ್ಯಾಂಡಲ್ ವುಡ್ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಲು ಸಿದ್ಧವಾಗುತ್ತಿದ್ದಾರೆ. ಕನ್ನಡದ ಸ್ಟಾರ್ ನಿರ್ದೇಶಕ ಮಹೇಶ್ ಬಾಬು ( ) ನಿರ್ದೇಶನದ ಹೊಸ ಸಿನಿಮಾಗೆ ಜೆರುಶಾ ಕ್ರಿಸ್ಟೋಫರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೀರಿಯಲ್‌ಗಳಲ್ಲಿ ನಟಿಸಿ ಮನಗೆದ್ದ ಸ್ಮೈಲ್ ಗುರು ರಕ್ಷಿತ್ ( ) ನಾಯಕನಾಗಿ ನಟಿಸುತ್ತಿರೋ ಸಿನಿಮಾಗೆ ಜೆರುಶಾರನ್ನು ನಾಯಕಿಯಾಗಿ ಲಾಂಚ್ ಮಾಡಲಾಗುತ್ತಿದೆ. ಈ ಸಿನಿಮಾದ ಮೂಲಕ ಜೆರುಶಾ ಕನ್ನಡಿಗರ ಮನ ಗೆಲ್ಲುವರೆ ಅನ್ನೋದನ್ನು ಕಾದು ನೋಡಬೇಕು. ಇನ್ನು ಹಾಲಿವುಡ್ ನಟಿಯರ ಥರ ಲುಕ್ ಹೊಂದಿರುವ ಜೆರುಶಾ, ಸಿಕ್ಕಾಪಟ್ಟೆ ಸ್ಟೈಲಿಶ್ ( ). ಮಾಡೆಲ್ ಕೂಡ ಆಗಿರುವ ಜೆರುಶಾ ಹೆಚ್ಚಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೂಟ್ ಮಾಡಿ ಶೇರ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಸ್ಟೈಲಿಶ್ ಫೋಟೋ ಪೋಸ್ಟ್ ಮಾಡಿದ್ದರು. ಮರೂನ್ ಬಣ್ಣದ ಸ್ಯಾಟಿನ್ ಥೈ ಹೈ ಸ್ಲಿಟ್, ಬ್ಯಾಕ್ ಲೆಸ್ ಗೌನ್ ಧರಿಸಿರುವ ಜೆರುಶಾ ಸಖತ್ ಸ್ಟೈಲಿಶ್, ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಯಲ್ಲಿ ಪೋಸ್ ನೀಡಿರುವ ಜೆರುಶಾ ನೋಡಿ ನೆಟ್ಟಿಗರು ಗಾರ್ಜಿಯಸ್ ಅಂತಿದ್ದಾರೆ. ಇವರ ಸೋಶಿಯಲ್ ಮೀಡಿಯಾ ಫೋಟೋಗಳನ್ನ ನೋಡಿದ್ರೆ ಕನ್ನಡಕ್ಕೊಬ್ಬ ಸ್ಟೈಲಿಶ್, ಮತ್ತು ಬೋಲ್ಡ್ ನಟಿಯೊಬ್ರು ಸಿಕ್ಕಿದ್ದಾರೆ ಅನ್ನೋದು ನಿಜ. ಇನ್ನು ಸಿನಿಮಾ ಬಿಡುಗಡೆಯಾದ ಇವರ ನಟನೆ ಹೇಗಿರಲಿದೆ, ಬಾಲನಟಿಗೆ ಸಿಕ್ಕ ಅದೇ ಪ್ರೋತ್ಸಾಹ ಇವರಿಗೆ ಸಿಗಲಿದೆಯೇ ಕಾದು ನೋಡೋಣ.