ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್ ಲಕ್ಷ್ಮೀ ನಿವಾಸದ ಚೆಲ್ವಿ, ಚೆಲುವೇ ಇವಳದ್ದು! ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹೂಮಾರುವ ಹುಡುಗಿ ಚೆಲ್ವಿ ಪಾತ್ರದಲ್ಲಿ ನಟಿಸಿ, ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿರುವ ನಟಿ ಅಶ್ವಿನಿ ಆರ್ ಮೂರ್ತಿ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹೂಮಾರುವ ಹುಡುಗಿ ಚೆಲ್ವಿ ಪಾತ್ರದಲ್ಲಿ ನಟಿಸಿ, ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿರುವ ನಟಿ ಅಶ್ವಿನಿ ಆರ್ ಮೂರ್ತಿ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ( ) ಧಾರಾವಾಹಿಯ ಪ್ರತಿಯೊಂದೂ ಪಾತ್ರಗಳು ವೀಕ್ಷಕರಿಗೆ ಅಚ್ಚು ಮೆಚ್ಚು, ಇತ್ತೀಚಿಗೆ ತನ್ನ ಅದ್ಭುತ ನಟನೆ ಮತ್ತು ಮುದ್ದಾದ ಪಾತ್ರದ ಮೂಲಕ ಜನಮನ ಗೆಲ್ಲುತ್ತಿರುವ ಜೋಡಿ ಅಂದ್ರೆ ಅದು ವೆಂಕಿ ಮತ್ತು ಚೆಲ್ವಿಯ ಜೋಡಿ. ಅದರಲ್ಲೂ ಹೂ ಮಾರುವ ಹುಡುಗಿ ಮುಗ್ಧೆಯಾಗಿ, ಒಳ್ಳೆತನದ ಮೂಲಕವೇ ವೆಂಕಿಯ ಮನಸ್ಸು ಗೆದ್ದ ಹುಡುಗಿಯಾಗಿ ಮಿಂಚುತ್ತಿರುವ ಚೆಲ್ವಿಯ ನಿಜವಾದ ಹೆಸರು ಅಶ್ವಿನಿ ಆರ್ ಮೂರ್ತಿ ( ). ಲಕ್ಷ್ಮೀ ನಿವಾಸದಲ್ಲಿನ ಇವರ ಪಾತ್ರ ನೋಡಿ ಸಿಕ್ಕಾಪಟ್ಟೆ ಜನ ಫ್ಯಾನ್ಸ್ ಆಗಿದ್ದಾರೆ. ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್ ಆಗಿದ್ದಾರೆ ಅಶ್ವಿನಿ ಆರ್ ಮೂರ್ತಿ. ಅಶ್ವಿನಿಯವರಿಗೆ ಲಕ್ಷ್ಮೀ ನಿವಾಸ ಏನು ಮೊದಲ ಸೀರಿಯಲ್ ಅಲ್ಲ, ಈ ಹಿಂದೆ ಹಲವು ಸೀರಿಯಲ್ ಗಳಲ್ಲಿ ಅಶ್ವಿನಿ ಮಿಂಚಿದ್ದಾರೆ. ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರಾ ಅಕ್ಕ ಆಗಿ ಇವರು ನಟಿಸಿದ್ದರು, ಅಷ್ಟೇ ಅಲ್ಲ ಮರಳಿ ಮನಸಾಗಿದೆ, ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲೂ ಅಶ್ವಿನಿ ನಟಿಸಿದ್ದರು. ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದರೂ ಅಶ್ವಿನಿಗೆ ಹೆಸರು ತಂದು ಕೊಟ್ಟಿದ್ದು ಸದ್ಯ ಅಭಿನಯಿಸುತ್ತಿರುವ ಲಕ್ಷ್ಮೀ ನಿವಾಸ ( ). ವೆಂಕಿ ಮತ್ತು ಚೆಲ್ವಿ ಜೋಡಿಯನ್ನು ನೋಡಲೆಂದೇ ಅಭಿಮಾನಿಗಳು ಕಾಯ್ತಿರ್ತಾರೆ. ಅಷ್ಟೊಂದು ಇಷ್ಟ ಪಡ್ತಾರೆ ವೀಕ್ಷಕರು ಈ ಪಾತ್ರಗಳನ್ನು. ನಟಿಯಾಗೋಕೂ ಮುನ್ನ ಅಶ್ವಿನಿಯವರೊಬ್ಬ ಬ್ಯುಸಿನೆಸ್ ವುಮೆನ್ ಹೌದು. ಇವರೊಬ್ಬ ಕಾಸ್ಮಟಾಲಜಿಸ್ಟ್ (). ಇವರು ತಮ್ಮದೇ ಆದ ಬ್ಯೂಟಿ ಸಲೂನ್ ಕೂಡ ಹೊಂದಿದ್ದಾರೆ. ರಾಜಾಜಿನಗರದಲ್ಲಿ ಗ್ಲಾಮ್ ಹೌಸ್ ಯುನಿಸೆಕ್ಸ್ ಬ್ಯೂಟಿ ಸಲೂನ್ ಮಾಲೀಕರು ಇವರು. ಹೇರ್, ಸ್ಕಿನ್, ನೈಲ್ ಆರ್ಟ್, ಮೇಕಪ್ ಎಲ್ಲವನ್ನೂ ಇಲ್ಲಿ ಮಾಡಿ ಕೊಡ್ತಾರೆ. ಇನ್ನು ಇವರ ಬ್ಯೂಟಿ ಸಲೂನ್ ( ) ಕೂಡ ಸಿಕ್ಕಾಪಟ್ಟೆ ಫೇಮಸ್. ಈಗಾಗಲೇ ಇವರ ಸಲೂನ್‌ಗೆ ನಟಿಯರಾದ ವಿಜಯಲಕ್ಷ್ಮೀ, ಸ್ವಾತಿ, ಅಭಿಜ್ಞಾ ಭಟ್, ರುಹಾನಿ ಶೆಟ್ಟಿ, ಪೂಜಾ ದುಗ್ಗಣ್ಣ, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಕೂಡ ಭೇಟಿ ನೀಡಿ, ಸೇವೆ ಪಡೆದು ಕೊಂಡಿದ್ದಾರೆ. ಅಶ್ವಿನಿಯವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. 41ಸಾವಿರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇವರ ಅಂದಕ್ಕೂ ತುಂಬಾ ಜನ ಅಭಿಮಾನಿಗಳಿದ್ದು, ಇವರು ಹಾಕೋ ಫೋಟೋ ನೋಡಿ ದೃಷ್ಟಿ ತಗಿಸ್ಕೊ ..ಚೆಲುವೆ ..ನೂರಾರು ಕಣ್ಣು ನಿನ್ನಮ್ಯಾಲ್ ಇದೆ ..ನಿನ್ನ ಚೆಲುವು ಎಲ್ರ ಕಣ್ಣ್ ಕುಕ್ಕುತ್ತಾ ಇದೆ ..ಸುಂದ್ರಿರ ಹೊಟ್ಟೆ ಉರಿಸ್ತಾ ಇದೆ ..ರಸಿಕರ ಕೈಲಿ ಪ್ರೇಮ ಕಾವ್ಯ ಬರೆಸಿತಾ ಇದೆ..ನನ್ನ ತರ ಪ್ರೇಮಿಯ ನಿದ್ದೆ ಕೆಡಿಸಿದೆ ಎಂದೆಲ್ಲಾ ಕಾಮೆಂಟ್ ಪೂರ್ತಿ ಕಾಮೆಂಟ್ ಗಳ ಮಹಾಪೂರವೇ ಹರಿದು ಬರ್ತಿದೆ.