ಸಿನಿಮಾದಲ್ಲಿ ಮಿಂಚಿದ ಈ ತಾರೆಯರ ಒಡ ಹುಟ್ಟಿದವರು ಇವರು! ಕನ್ನಡ ಸಿನಿಮಾದಲ್ಲಿ ಮಿಂಚಿದ ಈ ತಾರೆಯರ ನಿಜವಾದ ಅಣ್ಣ, ತಮ್ಮ, ತಂಗಿ, ಅಕ್ಕ ಯಾರೆಂಬುದು ನಿಮಗೆ ಗೊತ್ತಿದ್ಯಾ? ಇಲ್ಲಿದೆ ನೋಡಿ ತೆರೆ ಮೇಲೆ ಮಿಂಚಿದ ತಾರೆಯರ ರಿಯಲ್ ಸ್ಟೋರಿ. ಕನ್ನಡ ಸಿನಿಮಾದಲ್ಲಿ ಮಿಂಚಿದ ಈ ತಾರೆಯರ ನಿಜವಾದ ಅಣ್ಣ, ತಮ್ಮ, ತಂಗಿ, ಅಕ್ಕ ಯಾರೆಂಬುದು ನಿಮಗೆ ಗೊತ್ತಿದ್ಯಾ? ಇಲ್ಲಿದೆ ನೋಡಿ ತೆರೆ ಮೇಲೆ ಮಿಂಚಿದ ತಾರೆಯರ ರಿಯಲ್ ಸ್ಟೋರಿ. ಪ್ರೇಮಾ - ಅಯ್ಯಪ್ಪ : ( -)ಸ್ಯಾಂಡಲ್ ವುಡ್ ನಲ್ಲಿ ಮಿಂಚಿ ಓಂ, ಯಜಮಾನದಂತಹ ಸೂಪರ್ ಹಿಟ್ ಸಿನಿಮಾ ನೀಡಿದ ನಟಿ ಪ್ರೇಮಾ. ಇವರ ಸಹೋದರ ಅಯ್ಯಪ್ಪ. ಇವರು ಕ್ರಿಕೆಟ್ ನಲ್ಲಿ ಮಿಂಚಿದ್ದರು. ಬಿಗ್ ಬಾಸ್ ಕನ್ನಡದಲ್ಲೂ, ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. ಅನುಶ್ರೀ - ಅಭಿಜೀತ್ ( - )ಕನ್ನಡಿಗರ ಫೇವರಿಟ್ ನಿರೂಪಕಿ ಅನುಶ್ರೀ, ತಮ್ಮ ಅರಳು ಹುರಿದಂತಹ ಮಾತಿನಿಂದಲೇ ಇವರು ಜನಪ್ರಿಯತೆ ಪಡೆದಿದ್ದಾರೆ. ಇವರ ಸಹೋದಾರ ಅಭಿಜಿತ್, ಪ್ರೈವೆಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಇವರು ಮಾಧ್ಯಮದಿಂದ ದೂರವೇ ಇದ್ದಾರೆ. ರಕ್ಷಿತಾ - ರಾಣಾ ( -)ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಕನ್ನಡಿಗರ ಫೇವರೇಟ್ ನಟಿ, ಸಿನಿಮಾದಲ್ಲಿ ನಟಿಸದೇ ಇದ್ದರೂಇಂದಿಗೂ ಅವರು ಸಖತ್ ಫೇಮಸ್. ಇವರ ತಮ್ಮ ರಾಣಾ, ಕಳೆದ ವರ್ಷ ಎಕ್ ಲವ್ ಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದರು. ಪೂಜಾ ಲೋಕೇಶ್ - ಸೃಜನ್ ಲೋಕೇಶ್ ( )ಪೂಜಾ ಲೋಕೇಶ್ ಮತ್ತು ಸೃಜನ್ ಲೋಕೇಶ್ ಇವರು ಹಿರಿಯ ನಟ ದಿವಂಗತ ಲೋಕೆಶ್ ಹಾಗೂ ಸ್ಯಾಂಡಲ್‌ವುಡ್ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಮಕ್ಕಳು. ಪೂಜಾ ಹಿಂದೆ ಸ್ಯಾಂಡಲ್ ವುಡ್‌ನಲ್ಲಿ ಹಿರೋಯಿನ್ ಆಗಿ ಮಿಂಚಿ, ಸದ್ಯ ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾರೆ. ಸೃಜನ್ ಲೋಕೇಶ್ ವಿವಿಧ ರೀತಿಯ ರಿಯಾಲಿಟಿ ಶೋಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಸೀತಾ ರಾಮಾ ಸೀರಿಯಲ್‌ನಲ್ಲಿ ಭಾರ್ಗವಿಯಾಗಿ ನೆಗಟಿವ್ ಪಾತ್ರದಲ್ಲಿ ಪೂಜಾ ನಟಿಸುತ್ತಿದ್ದು, ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ರಾಧಿಕಾ ಪಂಡಿತ್ - ಗೌರವ್ ಪಂಡಿತ್ ( - )ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ಅಂತಾನೆ ಫೇಮಸ್ ಆಗಿರುವ ನಟಿ ರಾಧಿಕಾ ಪಂಡಿತ್. ಇವತ್ತಿಗೂ ಅಭಿಮಾನಿಗಳು ನಟಿಯನ್ನು ಮತ್ತೆ ತೆರೆ ಮೇಲೆ ನೋಡೊದಕ್ಕೆ ಕಾಯ್ತಿದ್ದಾರೆ. ಇವರ ಸಹೋದರ ಗೌರವ್. ಇವರು ಆಸ್ಟ್ರೇಲಿಯಾದಲ್ಲಿದ್ದಾರೆ. ಸುದೀಪ್ -ಸುಜಾತಾ ( -)ಕಿಚ್ಚ ಸುದೀಪ್ ಅವರು ಕನ್ನಡದ ಜನಪ್ರಿಯ ನಟ. ಇವರ ಬಗ್ಗೆ ಏನೂ ಹೇಳಬೇಕಾಗಿಯೇ ಇಲ್ಲ. ಇವರ ಅಕ್ಕ ಸುಜಾತ. ಇವರ ಮಗ ಸದ್ಯ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ. ಪವಿತ್ರಾ ಲೋಕೇಶ್ - ಆದಿ ಲೋಕೇಶ್ ( - )ಪವಿತ್ರಾ ಲೋಕೇಶ್ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡರೆ, ಆದಿ ಲೋಕೇಶ್ ಕನ್ನಡ ಸಿನಿಮಾಗಳಲ್ಲಿ ಆಗೋಮ್ಮೆ ಈಗೊಮ್ಮೆ ನಟಿಸುತ್ತಿದ್ದಾರೆ. ತೆಲಗು ನಟ ನರೇಶ್ ಜೊತೆಗಿನ ಸಂಬಂಧದಿಂದ ಇತ್ತೀಚೆಗೆ ಪವಿತ್ರಾ ಸುದ್ದಿಯಾಗಿದ್ದರು. ಆರ್ ಜೆ. ನೇತ್ರಾ - ರಿಷಿ ( - )ಆರ್ ಜೆ ನೇತ್ರಾ ಕನ್ನಡದ ಜನಪ್ರಿಯ ರೇಡಿಯೋ ನಿರೂಪಕಿ ಇವರ ಬಗ್ಗೆ ನಿಮಗೆ ಗೊತ್ತೇ ಇರಬಹುದು. ಇನ್ನೂ ಇವರ ಸಹೋದರ ರಿಷಿ. ಇವರು ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾದಲ್ಲಿ ನಟಿಸಿದ್ದರು. ಅಮೃತಾ ಪ್ರೇಮ್ -ಏಕಾಂತ್ ಪ್ರೇಮ್ ( -)ನಟ ಪ್ರೇಮ್ ಅವರ ಪುತ್ರ ಮತ್ತು ಪುತ್ರಿ ಅಮೃತಾ ಮತ್ತು ಏಕಾಂತ್. ಇಬ್ಬರೂ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಅಮೃತಾ ಟಗರು ಪಲ್ಯದಲ್ಲಿ ನಟಿಸಿದ್ರೆ, ಏಕಾಂತ್ ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ್ದಾರೆ.