ಮಹಾನಟಿ ಫೈನಲ್​ಗೂ ಮುನ್ನವೇ ವಿನ್ನರ್​ ಘೋಷಿಸಿದ ಅಭಿಮಾನಿಗಳು! ಅಬ್ಬಬ್ಬಾ ಎಂಥ ಪ್ರತಿಭೆ... ಮಹಾನಟಿ ಫೈನಲ್​ಗೂ ಮುನ್ನವೇ ವಿನ್ನರ್​ ಘೋಷಿಸಿದ ಅಭಿಮಾನಿಗಳು! ಅಬ್ಬಬ್ಬಾ ಎಂಥ ಪ್ರತಿಭೆ... ಯಾರೀ ಕಲಾವಿದೆ? ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಇದಾಗಲೇ ಹಲವಾರು ಕಂತುಗಳನ್ನು ಪೂರೈಸಿರುವ ಮಹಾನಟಿ ಇದೀಗ, roundಗೆ ಬಂದು ನಿಂತಿದೆ. ಒಬ್ಬರಿಗಿಂತ ಒಬ್ಬರು ನಟಿಯರು ಸ್ಯಾಂಡಲ್​ವುಡ್​ ತಾರೆಯರನ್ನೂ ಮೀರಿಸುವ ರೀತಿಯಲ್ಲಿ ಪರ್ಫಾಮೆನ್ಸ್​ ಕೊಡುತ್ತಿದ್ದಾರೆ. ಅಂತಿಮವಾಗಿ ಹತ್ತು ನಟಿಯರು ಇದಾಗಲೇ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ. ಪ್ರತಿಯೊಬ್ಬ ನಟಿಯರ ಪ್ರೊಮೋ ಬಿಡುಗಡೆಯಾದಾಗಲೂ ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ ಇದೀಗ ಬಿಡುಗಡೆಯಾಗುವ ಪ್ರೊಮೋದಲ್ಲಿ ನೆಟ್ಟಿಗರು ನೀವೇ ಮಹಾನಟಿ, ನೀವೇ ವಿನ್ನರ್​ ಎಂದೆಲ್ಲಾ ಹೇಳುತ್ತಿದ್ದಾರೆ. ಅಷ್ಟಕ್ಕೂ ಆ ನಟಿ ಬೇರಾರೂ ಅಲ್ಲ, ಆಶಿಕಾ ಶರ್ಮಾ. 'ಮಹಾನಟಿ'ಗೆ ಬಂದ ನಟ ರಿಷಬ್​ ಶೆಟ್ಟಿ: ಯಶಸ್ಸು, ಕೀರ್ತಿ, ಸಕ್ಸಸ್​ ರೇಟ್ ಕುರಿತು ಮಾತುಕತೆ... ಆಶಿಕಾ ಅವರು ಡಬಿಂಗ್​ ಆರ್ಟಿಂಗ್​. ಇದಾಗಲೇ ಹಲವಾರು ಸ್ಯಾಂಡಲ್​ವುಡ್​ ನಟಿಯರಿಗೆ ಇವರು ದನಿ ಕೊಟ್ಟಿದ್ದಾರೆ. ನಟಿ ಪ್ರೇಮಾ ಅವರಿಂದ ಹಿಡಿದು ಪರಭಾಷಾ ನಟಿಯರಿಗೆ ಇವರೇ ದನಿ ಕೊಟ್ಟವರು. ಇವರ ಈ ಟ್ಯಾಲೆಂಟ್​ ಅನ್ನು ಇದೀಗ ವೇದಿಕೆಯ ಮೇಲೆ ತೋರಿಸಲಾಗಿದೆ. ಇದನ್ನು ನೋಡಿದ ಫ್ಯಾನ್ಸ್​ ನೀವೇ ವಿನ್ನರ್​ ಎನ್ನುತ್ತಿದ್ದಾರೆ. ಇದೇ ವೇಳೆ, ತಾವು ಡಬ್ಬಿಂಗ್​ ಆರ್ಟಿಸ್ಟ್​ ಆಗಲು ಕಾರಣದ ಕುತೂಹಲವನ್ನು ಸಂದರ್ಶನದಲ್ಲಿ ಹೇಳಿದ್ದಾರೆ. ಆರ್ಕಿಟೆಕ್ಚರ್​ ಆಗಿ ಕೆಲಸ ಮಾಡುತ್ತಿದ್ದೆ. ಲಾಕ್​ಡೌನ್​ ಸಮಯದಲ್ಲಿ ಅದನ್ನು ತ್ಯಜಿಸಬೇಕಾಯಿತು. ದಿನನಿತ್ಯದ ಖರ್ಚನ್ನು ಸರಿದೂಗಿಸಲು ಏನು ಮಾಡಬಹುದು ಎಂದು ಯೋಚಿಸುತ್ತಿದ್ದೆ. ನಾನು ತುಂಬಾ ಕಾನ್​ಫಿಡೆಂಟ್​ ಆಗಿದ್ದರಿಂದ ಆ್ಯಂಕರಿಂಗ್​ ಮಾಡಬಹುದು ಎನ್ನಿಸಿತ್ತು. ಆ ಸಮಯದಲ್ಲಿ ಸೆಂಟ್ರಿಲ್​ ಜೈಲಿನ ಕೈದಿಗಳಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನವಿತ್ತು. ಹೇಗೋ ಅಲ್ಲಿ ಆ್ಯಂಕರಿಂಗ್​ ಮಾಡುವ ಅವಕಾಶ ಸಿಕ್ಕಿತು. ಅದು ನನ್ನ ಬದುಕನ್ನು ಬದಲಿಸಿತು. ಅಲ್ಲಿ ಸಿನಿಮಾದ ಕೆಲವರ ಪರಿಚಯವಾಗಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುವ ಹಾಗಾಯಿತು ಎಂದಿದ್ದಾರೆ. ಇವರು ಸಕತ್​ ಫೇಮಸ್​ ಆಗಿ ಮುನ್ನೆಲೆಗೆ ಬಂದದ್ದು ವಿಕ್ರಾಂತ್​ ರೋಣ ಚಿತ್ರದ ಮೂಲಕ. ಇದರಲ್ಲಿ ಬಾಲಿವುಡ್​​ ನಟಿ ಜಾಕ್ವೆಲಿನ್​ ಫರ್ನಾಂಡೀಸ್ ಅವರಿಗೆ ದನಿ ನೀಡಿದ್ದಾರೆ. ಇದರಲ್ಲಿ ಅವಕಾಶ ಸಿಕ್ಕಿದ ವಿಷಯವನ್ನೂ ನಟಿ ಈ ಹಿಂದೆ ಹೇಳಿದ್ದರು. ತಮಗೆ ಮೊದಲಿನಿಂದಲೂ ಸುದೀಪ್​ ಅವರ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುವ ಹಂಬಲವಿತ್ತು. ನಂತರ ವಿಕ್ರಾಂತ್​ ರೋಣದ ನಾಯಕ ಜಾಕ್ವೆಲಿನ್​ ಅವರಿಗೆ ದನಿ ನೀಡಲು ಆರ್ಟಿಸ್ಟ್​ ಹುಡುಕುತ್ತಿರುವ ವಿಷಯ ತಿಳಿಯಿತು. ಆಗ ನನಗೆ ಸಿನಿ ರಂಗದಲ್ಲಿ ಅಷ್ಟೊಂದು ಯಾರೂ ಪರಿಚಯವಿರಲಿಲ್ಲ. ನಾನು ಮೂರ್ನಾಲ್ಕು ರೀತಿಯ ದನಿಯನ್ನು ಕಳಿಸಿಕೊಟ್ಟಿದ್ದೆ. ಆದರೆ ಅಲ್ಲಿಂದ ರಿಪ್ಲೈ ಬಂದಿರಲಿಲ್ಲ. ಅದಾಗಲೇ ಒಂದೂವರೆ ವರ್ಷ ಆಗಿ ಹೋಯಿತು. ನಾನೂ ಅದರ ಆಸೆ ಬಿಟ್ಟಿದ್ದೆ. ಬಹುಶಃ ನನ್ನ ದನಿ ಜಾಕ್ವೆಲಿನ್ ಅವರಿಗೆ ಸೂಟ್​ ಆಗುವುದಿಲ್ಲ ಎಂದುಕೊಂಡು ಹಾಗೆಯೇ ಇದ್ದೆ. ಆದರೆ ಅದೊಂದು ದಿನ ವಿಕ್ರಾಂತ್​ ರೋಣ ಅವರ ಸೌಂಡ್​ ಎಂಜಿನಿಯರ್​ ಕಾಲ್ ಮಾಡಿ, ಅವರೇ ದನಿಯ ಮುದ್ರಣದ ಟೆಸ್ಟ್​ ಕಳುಹಿಸುವಂತೆ ತಿಳಿಸಿದರು. ಆ ದಿನ ನಿಜಕ್ಕೂ ನನಗೆ ನಂಬಲು ಸಾಧ್ಯವೇ ಆಗಿರಲಿಲ್ಲ. ದನಿಯನ್ನು ಮುದ್ರಿಸಿ ಕಳುಹಿಸಿದ್ದೆ. ಮರುದಿನವೇ ಅಲ್ಲಿಂದ ಕರೆ ಬಂದು, ನನ್ನನ್ನು ಆಯ್ಕೆ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದರು ಆಶಿಕಾ. ಇವರ ದನಿಗೆ ಈಗ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿರುತೆರೆ ಕಲಾವಿದರ ಜೊತೆ ಮೈಚಳಿ ಬಿಟ್ಟು ರೊಮ್ಯಾನ್ಸ್ ಮಾಡಿದ ಮಹಾನಟಿಯರು: ಉಫ್​ ಎಂದ ಫ್ಯಾನ್ಸ್​